ಮಳೆ ಬಾರದಿದ್ದರು ಬಸವನ ಸಹಾಯ, ಸಾಹಸ ಎಂದಿಗೂ ನಿಲ್ಲದು : ನಿಂಗಪ್ಪ ನಿಟ್ಟಾಲಿ
ಕರುನಾಡ ಬೆಳಗು ಸುದ್ದಿ
ಕುಕನೂರು, 29- ತಾಲೂಕಿನ ಸಿದ್ನೆಕೊಪ್ಪ ಗ್ರಾಮದಲ್ಲಿ ಬಸವನ ಸಹಾಯದಿಂದ 6 ಎಡೆ ಕುಂಟಿಗಳಿ0ದ ಬೆಳಿಗ್ಗೆ 6:30 ರಿಂದ ಸಂಜೆ 4:30 ಗಂಟೆಗೆ 24 ಎಕರೆ ಕಡಲೆ ಹೊಲದ ಎಡೆ ಹೊಡೆದಿರುವುದು ಹೊಸ ಇತಿಹಾಸವಾಗಿದೆ.
ಸಾಹಸ ಪ್ರದರ್ಶಿಸಿದ ಬಸವಣ್ಣ ಇಂದು ಜೋಡೆತ್ತುಗಳು 8 ತಾಸಿನಲ್ಲಿ 24 ಎಕರೆ ಎಡೆಕುಂಟೆ ಎಳೆದು ಸಾಹಸ ಮಾಡಿದೆ. ಮಳೆಯಿಲ್ಲ, ತೀವ್ರ ಬರದ ಮಧ್ಯೆ ಬಿತ್ತಿದ ಕಡಲೆ, ಸೂರ್ಯಪಾನ, ಜೋಳ, ಕುಸುಬಿ ಬೆಳೆಗಳು ಒಣಗಿ ಹೋಗಿದೆ. ಸರಕಾರ ಈವರೆಗೆ ಜಾನುವಾರುಗಳಿಗೆ ಗೋಶಾಲೆ ತೆರೆದಿಲ್ಲ, ಮೇವು ಇಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲೂ ಧೃತಿಗೆಡದ ರೈತರು ತನ್ನ ಸಂಗಾತಿ ಎತ್ತಿನೊಂದಿಗೆ ಸಾಹಸದಲ್ಲಿ ತೊಡಗಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಸಿದ್ನೇಕೊಪ್ಪ ಗ್ರಾಮದಲ್ಲಿ ಹೊಂದಿಕೊ0ಡು ಸುರೇಶ ಸಿದ್ದಪ್ಪ ಹೈದ್ರಿ ಅವರ ಹೊಲದಲ್ಲಿ ಎಕ್ಕಾಗಾಡಿ ಎಳೆದಂತೆ ಜೋಡಿ ಎತ್ತಿಗೆ ನಗವೊಂದನ್ನು ಹೆಗಲ ಮೇಲಿರಿಸಿ ಎಡಕ್ಕೆ ಮೂರು ಬಲಕ್ಕೆ ಮೂರು ಎಡೆ ಕುಂಟಿಗಳನ್ನು ಜೋಡಿಸಿ ನಿರಂತರ 8 ತಾಸುಗಳಲ್ಲಿ 24 ಎಕ್ಕರೆ ಎಡೆ ಹೊಡೆದರೆ ನಿಂಗಪ್ಪ ನಿಟ್ಟಾಲಿ ಅವರು ಎಡೆಯನ್ನು ಹೊಡೆದು ಒಟ್ಟು ಎಡೆಹೊಡೆದು ಸಾಹಸ ಮರೆದಿದ್ದಾರೆ.
ಎತ್ತಿನ ಕೊರಳಿಗೆ ಜತ್ತಗಿ ಕಟ್ಟದೆ, ಎತ್ತಿನ ಕೊರಳಿಗೆ ಹಗ್ಗ ಕಟ್ಟದೆ, ಬಾರಕೋಲ ಬಳಸದೆ ಈ ಸಾಹಸ ಮಾಡಿರುವುದು ನೂರಾರು ರೈತರನ್ನು ಹುಬ್ಬೇರಿಸುವಂತೆ ಮಾಡಿರುವುದು ಗ್ರಾಮದ ರೈತರಿಗೆ ಹೆಮ್ಮೆಯ ಸಂಗತಿಯಗಿದೆ.
ರೈತ ನಿಂಗಪ್ಪ ನಿಟ್ಟಾಲಿ ಅವರಿಗೆ ಸೇರಿದ ಎತ್ತು ಈ ಸಾಹಸ ಮಾಡಿದ್ದು ಎಡೆ ಕುಂಟಿ ಹಿಡಿದ ರೈತರು ಚಂದ್ರಶೇಖರ್ ಲಕ್ಷಟ್ಟಿ, ಸಂತೋಷ್ ನಿಟ್ಟಾಲಿ, ಪ್ರಶಾಂತ್ ರಾಜೂರು, ನಾಗರಾಜ್ ಲಕ್ಷಟ್ಟಿ, ಈಶಣ್ಣ ರಾಜೂರು, ಅಜಿತ್ ರಾಜೂರು ಪಾಲ್ಗೊಂಡಿದ್ದರು.