ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳಿಗೆ ನೀರು ಬಿಡುಗಡೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 30- ಪ್ರಸ್ತಕ ಸಾಲಿನ 122ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ಹಿಂಗಾರು ಹಂಗಾಮಿಗೆ ಜಲಾಶಯದಲ್ಲಿ ಲಭ್ಯವಾಗುವ ನೀರಿನ ಪ್ರಮಾಣವನ್ನು ಅಂದಾಜಿಸಿ ಈ ಕೆಳಗಿನಂತೆ ಕಾಲುವೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಆದ ಶಿವರಾಜ ಎಸ್.ತಂಗಡಗಿ ಅವರು ತಿಳಿಸಿದ್ದಾರೆ.

ವೇಳಾಪಟ್ಟಿ :

ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ : ಡಿ.೦೧ ರಿಂದ ೧೫ ರವರೆಗೆ ೧೫೦೦ ಕ್ಯೂಸೆಕ್ಸ್ನಂತೆ, ಡಿ.೧೬ ರಿಂದ ೩೧ ರವರೆಗೆ ೨೦೦೦ ಕ್ಯೂಸೆಕ್ಸ್ನಂತೆ, ೨೦೨೫ರ ಜ.೦೧ ರಿಂದ ೩೧ ರವರೆಗೆ ೩೮೦೦ ಕ್ಯೂಸೆಕ್ಸ್ನಂತೆ, ಫೆ.೦೧ ರಿಂದ ೨೮ ರವರೆಗೆ ೩೮೦೦ ಕ್ಯೂಸೆಕ್ಸ್ನಂತೆ, ಮಾ.೦೧ ರಿಂದ ೩೧ ರವರೆಗೆ ೩೮೦೦ ಕ್ಯೂಸೆಕ್ಸ್ನಂತೆ ಮತ್ತು ಕುಡಿಯುವ ನೀರಿಗಾಗಿ ಏ.೦೧ ರಿಂದ ೧೦ ರವರೆಗೆ ೧೬೫೦ ಕ್ಯೂಸೆಕ್ಸ್ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.

ಎಡದಂಡೆ ವಿಜಯನಗರ ಕಾಲುವೆ : ೨೦೨೫ರ ಏ.೧೧ ರಿಂದ ಮೇ.೧೦ ರವರೆಗೆ ೧೫೦ ಕ್ಯೂಸೆಕ್ಸ್ನಂತೆ ವಿತರಣಾ ಕಾಲುವೆ ೧ ರಿಂದ ೧೧ಎ ವರೆಗೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.

ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆ : ಡಿ.೦೧ ರಿಂದ ೧೦ ರವರೆಗೆ ನೀರು ನಿಲುಗಡೆ, ಡಿ.೧೧ ರಿಂದ ೩೧ ರವರೆಗೆ ೮೦೦ ಕ್ಯೂಸೆಕ್ಸ್ನಂತೆ, ೨೦೨೫ರ ಜ.೦೧ ರಿಂದ ೧೦ ರವರೆಗೆ ನೀರು ನಿಲುಗಡೆ ಮತ್ತು ಜ.೧೧ ರಿಂದ ೩೧ ರವರೆಗೆ ೮೦೦ ಕ್ಯೂಸೆಕ್ಸ್ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.

ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ : ಡಿ.೦೧ ರಿಂದ ೧೫ ರವರೆಗೆ ೪೦೦ ಕ್ಯೂಸೆಕ್ಸ್ನಂತೆ, ಡಿ.೧೬ ರಿಂದ ೩೧ ರವರೆಗೆ ೬೦೦ ಕ್ಯೂಸೆಕ್ಸ್ನಂತೆ, ೨೦೨೫ರ ಜ.೦೧ ರಿಂದ ೩೧ ರವರೆಗೆ ೬೫೦ ಕ್ಯೂಸೆಕ್ಸ್ನಂತೆ, ಫೆ.೦೧ ರಿಂದ ೨೮ ರವರೆಗೆ ೬೫೦ ಕ್ಯೂಸೆಕ್ಸ್ನಂತೆ ಮತ್ತು ಮಾ.೦೧ ರಿಂದ ೩೧ ರವರೆಗೆ ೭೦೦ ಕ್ಯೂಸೆಕ್ಸ್ನಂತೆ ಮತ್ತು ಕುಡಿಯುವ ನೀರಿಗಾಗಿ ಏ.೦೧ ರಿಂದ ಮೇ.೩೧ ರವರೆಗೆ ೧೦೦ ಕ್ಯೂಸೆಕ್ಸ್ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.

ರಾಯ ಬಸವಣ್ಣ ಕಾಲುವೆ : ಡಿ.೧೦ ರಿಂದ ೨೦೨೫ರ ಜ.೧೦ ರವರೆಗೆ ನೀರು ನಿಲುಗಡೆ ಮತ್ತು ೨೦೨೫ರ ಜ.೧೧ ರಿಂದ ಮೇ ೩೧ ರವರೆಗೆ ೨೫೦ ಕ್ಯೂಸೆಕ್ಸ್ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.

ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆ : ಡಿ.೦೧ ರಿಂದ ೨೫ ಕ್ಯೂಸೆಕ್ಸ್ನಂತೆ ಅಥವಾ ಜಲಾಶಯದ ನೀರಿನ ಮಟ್ಟ ೧೫೮೫ ಅಡಿಗಳವರೆಗೆ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ.

ರೈತರಲ್ಲಿ ಮನವಿ : ತುಂಗಭದ್ರಾ ಜಲಾಶಯದಲ್ಲಿ ಹಿಂಗಾರು ಹಂಗಾಮಿಗೆ ಲಭ್ಯವಿರುವ ನೀರನ್ನು ಮಿತವ್ಯಯವಾಗಿ ಬಳಸಿ ಅಧಿಕೃತ ಅಚ್ಚುಕಟ್ಟು ಪ್ರದೇಶದಲ್ಲಿ ನಿಗಧಿತ ಬೆಳೆಗಳನ್ನು ಮಾತ್ರ ಬೆಳೆಯಲು ಹಾಗೂ ಸಮರ್ಪಕ ನೀರು ನಿರ್ವಹಣೆಗೆ ಇಲಾಖೆಯೊಡನೆ ಸಹಕರಿಸಬೇಕು.

ರೈತರು ಅನಧೀಕೃತವಾಗಿ ನೀರು ಪಡೆದು ಭತ್ತ ಹಾಗೂ ಇತರೆ ಬೆಳೆಗಳನ್ನು ಬೆಳೆದಲ್ಲಿ ನೀರಾವರಿ ಕಾಯ್ದೆಯನ್ವಯ ಕಾನೂನು ಕ್ರಮ ಜರುಗಿಸಲಾಗುವುದು, ರೈತರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಮುನಿರಾಬಾದ್ ತುಂಗಭದ್ರಾ ಯೋಜನಾ ವೃತ್ತದ ಕನೀನಿನಿ ಅಧೀಕ್ಷಕ ಅಭಿಯಂತರರಾದ ಎಲ್.ಬಸವರಾಜ್ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!