
ಶ್ರೀ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ನೂತನ “ಶಿಲಾಮಠದ” ಉದ್ಘಾಟನೆ ನಾಳೆ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ (ವಿಜಯನಗರ ).22- ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ನಾಳೆ ೨೩ ರಂದು ಜರುಗಲಿದ್ದು ಕಾರ್ಯಕ್ರಮಗಳು ನಡೆಯಲಿದ್ದು ಎಲ್ಲಾ ಶಾಖ ಮಠಗಳ ಸದ್ಭಕ್ತರನ್ನು ಆಹ್ವಾನಿಸಲಾಗಿದೆ.
ಹಂಪಿ ಹೇಮಕೂಟ ಶೂನ್ಯ ಸಿಂಹಾಸನಾಧೀಶ್ವರ ಶ್ರೀಮನ್ ನಿರಂಜನ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರ ಸುವರ್ಣ ನೆನಹು.ಇಂದು ಉದ್ಘಾಟನೆಯಾಗಲಿರುವ ಕಾರ್ಯಕ್ರಮಗಳು.
ಒಳಬಳ್ಳಾರಿ ಪೂಜ್ಯರ ಅಮೃತ ಅಸ್ತದಿಂದ ನೂತನ ಶೀಲಾ ಮಠ.ಎಚ್ ಕೆ ಪಾಟೀಲ್ ಸಚಿವರಿಂದ, ಕಪ್ಪಿನ ಚನ್ನಬಸವೇಶ್ವರ ಅತಿಗೃಹ.ಈಶ್ವರ ಕಂಡ್ರೆ ಸಚಿವರಿಂದ ಪ್ರೌಢದೇವರಾಯ ವಸತಿಯುತ್ತ ಪ್ರಸಾದ ನಿಲಯ.
ಲಿಂ.ಕೆ ಚಂದ್ರಶೇಖರಪ್ಪನವರ ಸ್ಮರಣಾರ್ಥ ಕೆ ರಂಗಪ್ಪ ಕುಟುಂಬ ವರ್ಗ ಮಶೀನರಿ ವ್ಯಾಪಾರಿಗಳು ಹೊಸಪೇಟೆ ಇವರಿಂದ, ಪೂಜ್ಯ ಶ್ರೀ ಜಗದ್ಗುರು ಡಾಕ್ಟರ್ ಸಂಗಮ ಶಿವಯೋಗಿಗಳ ಪಂಚಲೋಹದ ಮೂರ್ತಿ ಕಾಣಿಕೆ ನೆರವೇರಲಿದೆ.ಬಿ ನಾಗೇಂದ್ರ ಸಚಿವರು ಮತ್ತು ವಿನಯ ಕುಲಕರ್ಣಿ ಶಾಸಕರು ಧಾರವಾಡ ಇವರಿಂದ ಗ್ರಂಥಗಳ ಬಿಡುಗಡೆ.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಮುಖ್ಯ ಅತಿಥಿಗಳಾಗಿಎಚ್ ಆರ್ ಗ್ಯಪ್ಪ ಶಾಸಕರು ವಿಜಯನಗರ ಕ್ಷೇತ್ರ. ಬಿಎಸ್ ಆನಂದ್ ಸಿಂಗ್ ಮಾಜಿ ಸಚಿವರು ಹೊಸಪೇಟೆ. ಲತಾ ಮಲ್ಲಿಕಾರ್ಜುನ ಶಾಸಕರು ಹರಪನಹಳ್ಳಿ. ಜಿಎನ್ ಗಣೇಶ್ ಶಾಸಕರು ಕಂಪ್ಲಿ ಇವರುಗಳು ಭಾಗವಹಿಸುವರು.
ಶಶಿಧರ ಮತ್ತು ತಂಡ ಬಸವ ಕಲಾ ಲೋಕ ದಾವಣಗೆರೆ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವವು.ಗೌರವ ಉಪಸ್ಥಿತಿಯನ್ನು ಹೊಸಪೇಟೆ ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ಮುಖಂಡರು, ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಸರ್ವಧರ್ಮಗಳ ಅಭಿಮಾನಿ ಅಬ್ಬಕ್ಕರು ಹಾಗೂ ಎಲ್ಲಾ ಶಾಖ ಮಠಗಳ ಸುತ್ತಮುತ್ತಲ ಗ್ರಾಮದ ಸದ್ಭಕ್ತರು, ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠ ಹಾಲಕೆರೆ ಗಂಜಿಹಾಲ ಮತ್ತು ಎಲ್ಲಾ ಶಾಖ ಮಠಗಳ ಸದ್ಭಕ್ತರನ್ನು ಆಹ್ವಾನಿಸಲಾಗಿದೆ.
ಸಾಯಂಕಾಲ 3:30 ಗಂಟೆಗೆ ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಿಂದ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಜನಾ ಮಂಡಳಿಯವರು, ಡೊಳ್ಳಿನ ಮೇಳ, ಕರಡಿಮಜಲು, ನಂದಿಕೋಲು, ಮುಂತಾದ ವಾದ್ಯ ವೈಭವಗಳೊಂದಿಗೆ ಪಾದಯಾತ್ರೆಯೊಂದಿಗೆ ಹೊರಟು ನೂತನವಾಗಿ ನಿರ್ಮಾಣಗೊಂಡಿರುವ ಲೋಕಾಪಣೆಯಾಗುತ್ತಿರುವ ಜಗಜ್ಯೋತಿ ಶ್ರೀ ಬಸವೇಶ್ವರ ವೃತ್ತದ ವರೆಗೆ ಹೋಗುವುದು. ಅಲ್ಲಿ ವೃತ್ತದ ಅನಾವರಣ ಕಾರ್ಯಕ್ರಮ ಜರುಗಲಿದೆ.