
2.06 ಲಕ್ಷ ರೂ.ಗಳ ಗಾಂಜಾ ಮಿಶ್ರಿತ ಚಾಕ್ಲೇಟ್ ವಶ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 2- ನಗರದ ರಾಷ್ಟ್ರೀಯ ಹೆದ್ದಾರಿ 150 ಎ ಸಿಂಧನೂರು ರಸ್ತೆಯ ಅಂಕಲಿ ಮಠ ಪಕ್ಕದ ಅಂಗಡಿಯಲ್ಲಿ 2.06 ಲಕ್ಷ ರೂ ಮೌಲ್ಯದ 1350 ಕೆಜಿ ಗಾಂಜಾ ಮಿಶ್ರಿತ ಚಾಕ್ಲೆಟ್ ಗಳನ್ನು ಅಬಕಾರಿ ಇಲಾಖೆಯ ಪೊಲೀಸ್ ಅಧಿಕಾರಿಗಳು ಶುಕ್ರವಾರ ಶೋದ ನಡೆಸಿ ವಶಪಡಿಸಿಕೊಂಡಿದ್ದಾರೆ.
ಗಾಂಜಾ ಮಿಶ್ರಿತ ಚಾಕಲೇಟ್ ಗಳನ್ನು ಮಾರಾಟ ಮಾಡುತ್ತಿದ್ದ ಬಿಹಾರ್ ಮೂಲದ ಕಪಾಲ್ ಪಾಸ್ವಾನ್ ಎಂಬಾತನನ್ನು ವಿಚಾರಣೆ ನಡೆಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಾಳಿಯಲ್ಲಿ ಬಳ್ಳಾರಿ ಅಬಕಾರಿ ಡಿ ವೈ ಎಸ್ ಪಿ ಆಶಾ ರಾಣಿ ಅಬಕಾರಿ ನಿರೀಕ್ಷಕ ಶ್ರೀಧರ ನಿರೋಣಿ ಉಪನಿರೀಕ್ಷಕ ಬಿ ವೀರಣ್ಣ ಸಿಬ್ಬಂದಿ ಉಮೇಶ್ ದೇವರಾಜ್ ರಾಘವೇಂದ್ರ ಲಕ್ಷ್ಮಣ ಮಹಾಂತೇಶ್ ಹರೀಶ್ ಇತರರು ಇದ್ದರು.