
200 ಕ್ಯೂ ಸೆಕ್ಸ್ ನೀರು ಬಿಡಲು ಹೊಸಪೇಟೆ
ರೈತ ಸಂಘ ಆಗ್ರಹ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ (ವಿಜಯನಗರ) ನ.23: ವಿಜಯನಗರ ಜಿಲ್ಲೆಯಲ್ಲಿನ ರಾಯ, ಬಸವ, ಬೆಲ್ಲ,ತುರ್ತಾ ಮತ್ತು ಕಾಳಘಟ್ಟ ಕಾಲೆವುಗಳಿಂದ ರೈತರಿಗೆ ಜನವರಿ 16 ರಿಂದ ಮೇ 31ರವರೆಗೆ ನಿರಂತರವಾಗಿ ದಿನ ನಿತ್ಯ 200 ನ್ಯೂ ಸೆಕ್ಸ್ ನೀರು ಹರಿಸುವಂತೆ ತಹಶೀಲ್ದಾರರಿಗೆ ಮನವಿ ಕೊಟ್ಟು ಒತ್ತಾಯಿಸಿದರು.
ರೈತ ಮುಖಂಡ ಗೋಸಲ್ ಬರ್ಮಪ್ಪ ಮಾತನಾಡಿ ಇತ್ತೀಚಿನ ದಿನಗಳಲ್ಲಿ ವಿಜಯನಗರ ಕೆನಲ್ ಗಳಿಗೆ ನೀರು ಕೊಡದೇ ಸತಾಯಿಸುತ್ತಿದ್ದಾರೆ , ರಾಜಕಾರಣಿಗಳಾಗಿರಬಹುದು, ಆಂಧ್ರದ ಅಧಿಕಾರಿಗಳಾಗಿರಬಹುದು, ಅಕ್ಟೋಬರ್ 5ರಂದು ನಡೆದ ಐಸಿಸಿ ಸಭೆಯಲ್ಲಿ ನಮಗೆ ಯಾವುದೇ ರೀತಿಯ ನೀರಿನ ಪ್ರಮಾಣವನ್ನು ಕಾಯ್ದಿರಿಸಿಲ್ಲ, ದಿನನಿತ್ಯ ಎರಡು ನೂರು ಕ್ಯೂಸೆಕ್ಸ್ ಅಂದರೆ 18 ಸಾವಿರ ನ್ಯೂ ಸೆಕ್ಸ್ ಅಂದರೆ ಸುಮಾರು ಒಂದುವರೆ ಇಂದ ಎರಡು ಟಿಎಂಸಿ ನೀರು ಸಾಕಾಗ್ತಾಯಿತ್ತು.ಆದರೆ ಜಿಲ್ಲಾಧಿಕಾರಿಗಳಾಗಿರುವುದು ತಾಲೂಕ್ ಅಧಿಕಾರಿಗಳಾಗಿರಬಹುದು ನಮ್ಮ ವಿಜಯನಗರ ಜಿಲ್ಲೆಯ ಚಾನೆಲ್ ಗಳಿಗೆ ಯಾವುದೇ ರೀತಿಯಿಂದ ನಮಗೆ ನೀರು ಬಂದಾಗಬಾರದು. ನಂಬರ್ 15 ರಿಂದ ಕ್ಲೋಸ್ ಇರುವುದರಿಂದ ಜನವರಿ 16 ನಂತರ ಮೇ 31ರವರೆಗೆ ದಿನನಿತ್ಯ 200 ಕ್ಯೂಸೆಕ್ಸ್ ನೀರನ್ನು ಕೊಡಬೇಕು. ನಾವು ಮನವಿ ಕೊಡುವುದರ ಮುಖಾಂತರ ಮೂರು ದಿನಗಳ ಕಾಲ ಸಂಕೇತಿಕವಾಗಿ ಪ್ರತಿಭಟನೆಯನ್ನು ಮಾಡುತ್ತೇವೆ.
ಅಷ್ಟರೊಳಗೆ ಅಧಿಕಾರಿಗಳು ಮತ್ತು ರಾಜಕಾರಣಿಗಳು ಸಭೆ ಸೇರಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೊಸಪೇಟೆ ಬಂದ್ ಆಗಿರಬಹುದು ಮತ್ತು ರಾಷ್ಟ್ರೀಯ ಹೆದ್ದಾರಿ ಕೂಡ ಬಂದ್ ಮಾಡುವುದರ ಮುಖಾಂತರ ಹೋರಾಟ ಮಾಡಲಾಗುವುದು. ಅದಕ್ಕೆ ತಾವುಗಳು ಆಸ್ಪದ ಕೊಡದೆ ಎಷ್ಟೇ ನೀರಿರಲಿ ನಮಗೆ ಕೊಡಬಾರದೆನ್ನುವ ನಿಯಮವಿಲ್ಲ ಆದ್ದರಿಂದ ನಮಗೆ ಜನವರಿ 16 ರಿಂದ ಮೇ 31ರವರೆಗೆ ನಿರಂತರವಾಗಿ ದಿನನಿತ್ಯ 200 ನ್ಯೂ ಸೆಕ್ಸ್ ನೀರು ಕೊಡಲೇಬೇಕು ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ರೈತ ಮುಖಂಡರು ಒತ್ತಾಯಿಸಿದರು.
ಉಪಾಧ್ಯಕ್ಷ ಎ ಪರಸಪ್ಪ , ಹಾಶಾಂ , ಜೆ ಗಾದಿಲಿಂಗಪ್ಪ , ಮಲ್ಲಪ್ಪ, ಸಿ ಅಂಜಿನಪ್ಪ , ರೈತ ಮುಖಂಡರಾದ ಬಂಡೆ ಶ್ರೀನಿವಾಸ್, ಕಿಚಡಿ, ಮೆಟ್ರಿ ಮೈಲಾರಿ, ನಾಗರಾಜ, ತಿರುಮಲ, ಶ್ರೀನಿವಾಸ್,ಆರ್ ಕೊಟ್ರೇಶ್, ಜಂಬನಹಳ್ಳಿ ವಸಂತಕುಮಾರ್,ಕಟಗಿ ರಾಮಕೃಷ್ಣ, ರಾಮಚಂದ್ರಗೌಡ ಇತರರಿದ್ದರು.