5

2024-25ನೇ ಸಾಲಿನ ಜಿಲ್ಲಾ ಅತ್ಯುತ್ತಮ ಮುಖ್ಯ ಗುರುಗಳ ಪ್ರಶಸ್ತಿ ಟಿ.ಮಹೇಶ್ವರಗೆ

ಕರುನಾಡ ಬೆಳಗು ಸುದ್ದಿ

ವಿಜಯನಗರ, ೩- ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು, ವಿಜಯನಗರ ಜಿಲ್ಲಾ ಮತ್ತು ತಾಲೂಕು ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್‌ರವರ ೧೩೬ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ೨೦೨೪-೨೫ನೇ ಸಾಲಿನ ಜಿಲ್ಲಾ ಅತ್ಯುತ್ತಮ ಮುಖ್ಯ ಗುರುಗಳ ಪ್ರಶಸ್ತಿಯನ್ನು ನೀಡಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಒಳಾಂಗಣ ಕ್ರೀಡಾಂಗಣದ ಸಭಾಭವನದಲ್ಲಿ ಅತ್ಯುತ್ತಮ ಮುಖ್ಯಗುರುಗಳ ಪ್ರಶಸ್ತಿಯನ್ನು ಕೊಡಮಾಡಲಾಯಿತು.

ಈ ಪ್ರಶಸ್ತಿಯನ್ನು ಪ್ರಸ್ತುತವಾಗಿ ಮರಿಯಮ್ಮನಹಳ್ಳಿಯಲ್ಲಿರುವ ಶ್ರೀ ಚಿಕ್ಕೇನ ಕೊಪ್ಪದ ಚನ್ನವೀರ ಶರಣರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಮುಖ್ಯ ಗುರುಗಳಾಗಿ ಕಾರ್ಯನಿರ್ವಹಿಸುತ್ತಿರುವ ಟಿ.ಮಹೇಶ್ವರ ಇವರಿಗೆ ನೀಡಿ ಗೌರವಿಸಲಾಯಿತು.

ಕಿರು ಪರಿಚಯ : ಹಗರಿಬೊಮ್ಮನಹಳ್ಳಿ ತಾಲೂಕಿನ ಮಾದೂರು ಗ್ರಾಮ ಎನ್ನುವ ಕುಗ್ರಾಮದಲ್ಲಿ 1-6-1965 ರಲ್ಲಿ ಜನಿಸಿ ಬಿ.ಎ, ಬಿಎಡ್ ವಿದ್ಯಾಬ್ಯಾಸ ಮುಗಿಸಿ 1-6-1992 ರಿಂದ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ 2023 ರಿಂದ ಶ್ರೀ ಶರಣರ ಮತ್ತು ಶ್ರೀ ಉಜ್ಜಿನಿ ಮಾದರಿ ಹಿರಿಯ ಶಾಲೆಯಲ್ಲಿ ಉತ್ತಮ ಆಡಳಿತಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅದಮ್ಯ ಸೇವೆಯನ್ನು ಗುರುತಿಸಿ ೨೨.೦೯.೨೦೨೪ರಂದು ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ.
ಇವರ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ಇಂಜಿನಿಯರ್ ಹಾಗೂ ದೊಡ್ಡ ದೊಡ್ಡ ರಾಜಕೀಯ ದೂರೀಣರಾಗಿ ಹೊರಹೋಮ್ಮಿದ್ದಾರೆ. ಇವರು ಸರಳ ಸ್ನೇಹ ಸಂಘ ಜೀವಿಯಗಿದ್ದಾರೆ.

ಈ ಸಂಧರ್ಭದಲ್ಲಿ ಎಂ.ಚನ್ನಬಸಪ್ಪ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೊಸಪೇಟೆ, ಕೆ.ಹನುಮಂತಪ್ಪ ಗೌರವಾಧ್ಯಕ್ಷರು ಬೆಂಗಳೂರು, ಎನ್.ರಾಜ ಗೋಪಾಲ್ ರಾಜ್ಯದ್ಯಕ್ಷರು ಬೆಂಗಳೂರು, ಎಂ.ಕೆ.ರಾಜು, ಟಿ.ರವಿಕುಮಾರ, ಟಿ.ಹನುಮಂತಪ್ಪ, ಕೆ.ಕಲ್ಲೇಶ ಜಿಲ್ಲಾಧ್ಯಕ್ಷರು, ಅತಿಥಿಗಳಾಗಿ ಗೊಗ್ಗ ಚೆನ್ನಬಸವರಾಜ, ಕಟ್ಟಾ ನಾಗರಾಜ, ಗುಂಡು ಮುಣಗು ತಿಪ್ಪೇಸ್ವಾಮಿ, ರತ್ನಾದತ್ತ ಟಿ.ಎಸ್, ಕಮಲಾಕ್ಷ ಶಾನಭಾಗ, ಮುಶೀರ್ ಅಹಮದ್, ಟಿ.ಎಸ್. ನಾಗರಾಜ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!