
21 ರಂದು ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ
ಹತ್ತು ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆ
ಭಕ್ತಾದಿಗಳಿಗೆ ಸುಸಜ್ಜಿತ ಮೂಲಭೂತ ಸೌಕರ್ಯ ವ್ಯವಸ್ಥೆ : ಸಂಸದ ರಾಜಶೇಖರ್ ಹಿಟ್ನಾಳ
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 2- ಐತಿಹಾಸಿಕ ಸಪ್ರಸಿದ್ಧ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಮಹಾ ರಥೋತ್ಸವ ಇದೇ 21 ರಂದು ಅಂಜೆ 5:30ಕ್ಕೆ ಜರುಗಲಿದ್ದು ಜಾತ್ರೆಯಲ್ಲಿ ಹತ್ತು ಲಕ್ಷ ಭಕ್ತರು ಭಾಗವಹಿಸುವ ನೀರಿಕ್ಷೇಯಿದೆ ಎಂದು ಸಂಸದ ರಾಜಶೇಖರ್ ಹಿಟ್ನಾಳ ಹೇಳಿದರು.
ಸಂಸದರ ಕಛೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಜಾತ್ರಾಮಹೋತಸ್ವದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಆಗಮಿಸುವ ಭಕ್ತರುಗೆ ಸಕಲ ವ್ಯವಸ್ಥೆ ಮಾಡಲಾಗುದೆ ಎಂದರು.
ಜಾತ್ರಾ ಮಹೋತ್ಸವದ ಅಂಗವಾಗಿ ಒಂದು ತಿಂಗಳ ಕಾಲ ಪ್ರತಿನಿತ್ಯ ಉಚಿತ ಪ್ರಸಾದ ವ್ಯವಸ್ಥೆ ಮಾಡಿದ್ದು , ದಾಸೋಹಕ್ಕೆ ದವಸ ಧಾನ್ಯ ಹಾಗೂ ಒಂದು ದಿನ ಪ್ರಸಾದ ಸೇವೆಗೆ 99 ಸಾವಿರ ರೂ ಸೇವೆಗೆ ಅವಕಾಶ ಇದೆ ಎಂದರು.
ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಬಳಿಕ ನಡೆಯುವ ಮೊದಲ ಜಾತ್ರೆ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಅಗತ್ಯ ಕ್ರಮವನ್ನು ಕೈಗೊಂಡು, ಆಗಮಿಸುವ ಭಕ್ತಾದಿಗಳಿಗೆ ಸಕಲ ಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು.
ಸರ್ಕಾರವು ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು, ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೇ ಯೋಜನೆ ರೂಪಿಸಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದರು.
ಜಾತ್ರೆಯಲ್ಲಿ ಪ್ರಸಾದ ವ್ಯವಸ್ಥೆ ಒಂದು ತಿಂಗಳ ಕಾಲ ವರಗೆ ಇರಲಿದೆ, ಈ ದಾಸೋಹಕ್ಕೆ ಭಕ್ತರು ತಮ್ಮ ಇಚ್ಛೆಯಂತೆ ದವಸ ಧ್ಯಾನ್ಯಗಳನ್ನು ದಾನ ಮಾಡಬಹುದು. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುವದರಿಂದ ಅವರಿಗೆ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸಭೆಗಳನ್ನು ನಡೆಸಲಾಗಿದೆ, ಐದು ದಿವಸ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ, ಹತ್ತು ಲಕ್ಷಕ್ಕೂ ಹೆಚ್ಚು ಜನರು ಬರುವರು.
ದೇವಸ್ಥಾನಕ್ಕೆ ಬರಲು ಒಂದೇ ರಸ್ತೆ ಇರುವದರಿಂದ ಭಕ್ತರು ಬರಲಿಕ್ಕೆ ತೊಂದರೆ ಆಗುತ್ತಿತ್ತು, ಇವಾಗ ಎಡ ಮತ್ತು ಬಲಭಾಗಕ್ಕೆ ಹೊಂದು ಕೊಂಡು ಹೋಗಲು, ಬರಲು ಪ್ರತ್ಯೇಕ ಮಾಡಲಾಗಿದೆ. ಸಾರಿಗೆ ವ್ಯವಸ್ಥೆ ಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸುಗಳನ್ನು ಬಿಡಲು ತಿಳಿಸಲಾಗಿದೆ. ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಲಾಗುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕವು ದೇವಸ್ಥಾನದ ಪೂಜಾ ಕಾರ್ಯ ನೋಡಬಹುದು ಎಂದು ವಿವರಿಸಿದರು.
ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಕೊಪ್ಪಳ, ಗಂಗಾವತಿ, ಹಿಟ್ನಾಳ್ ಕಡೆಯಿಂದ ಬರುವ ಮಾರ್ಗದಲ್ಲಿ 3 ಕಡೆ ಸ್ನಾನಗೃಹ, ಗಳನ್ನು ಒಳಗೊಂಡ ಪ್ರತ್ಯೇಕ ಪುರುಷ ಮತ್ತು ಮಹಿಳೆಯರ ಶೌಚಾಲಯಗಳು, ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸಾರಿಗೆ ವ್ಯವಸ್ಥೆ, ಹಾಗೂ ದೇವಸ್ಥಾನದ ಸಮೀಪ ತಲುಪವಂತೆ ದೇವಸ್ಥಾನದ ಎಡಭಾಗ ಮತ್ತು ಬಲಭಾಗದ ಖಾಸಗಿ ಹೊಲಗಳಲ್ಲಿ ತಾತ್ಕಾಲಿಕ ರಸ್ತೆಗಳನ್ನು ನಿರ್ಮಿಸಿ, ಸರ್ಕಾರಿ ಬಸ್ಸುಗಳಿಗೆ ಹಾಗೂ ಖಾಸಗಿ ಬಸ್ಸುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಕರ್ನಾಟಕದಾದ್ಯಂತ ಹಾಗೂ ಅಂಧ್ರ, ಮಹಾರಾಷ್ಟ್ರ ಹಾಗೂ ಇನ್ನಿತರೆ ಪ್ರದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀ ದೇವಿಯವರ ದರ್ಶನವನ್ನು ಪಡೆಯಲು ಆಗಮಿಸುತ್ತಿದ್ದು, ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿದೆ, ಬರುವ ದಿನಗಳಲ್ಲಿ ಒಂದು ನೂರು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಈ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಹೇಳೀದರು. ಈ ಸಂದರ್ಭದಲ್ಲಿ ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಆಡಳಿತಾಧಿಕಾರಿ ಪ್ರಕಾಶರಾವ್, ಮುಖಂಡರಾದ ಪಾಲಾಕ್ಷಪ್ಪ. ಗುಂಗಾಡಿ, ವೇಂಕಟೇಶ ವಡ್ಡರ್, ಈರಣ್ಣ ಈಳಗೇರ ಇತರರು ಇದ್ದರು.
=