ವಿ. ಎಸ್. ಕೆ. ವಿಶ್ವವಿದ್ಯಾಲಯದಲ್ಲಿ

74ನೇ ರಾಷ್ಟ್ರೀಯ ಸಂವಿಧಾನ ದಿನಾಚರಣೆ

ಕರುನಾಡ ಬೆಲಗು ಸುದ್ದಿ
ಬಳ್ಳಾರಿ,೨೭- ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಕೋಶ ಸಹಯೋಗದೊಂದಿಗೆ 74ನೇ ರಾಷ್ಟ್ರೀಯ ಸಂವಿಧಾನ ದಿನಾಚರಣೆಯನ್ನು ಡಾಕ್ಟರ್ ಬಿಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಡಾಕ್ಟರ್ ಮೋಹನ್ ದಾಸ್ ರವರು ಭಾರತವು ಪ್ರಜಾ ಸತ್ತಾತ್ಮಕ ನೆಲೆಯಲ್ಲಿ ನಮ್ಮ ಸಂವಿಧಾನವನ್ನು ಕೇಂದ್ರ ಸರ್ಕಾರದ ಬಲಿಷ್ಠ ಒಕ್ಕೂಟ ವ್ಯವಸ್ಥೆಯನ್ನು ಹೊಂದಿ ಹೊಂದಿರುವದರ ಒಂದು ನಿಮಿಷ ಜೊತೆಗೆ ಸಂವಿಧಾನವು ತನ್ನದೇ ಆದ ಐತಿಹಾಸಿಕ ಮಹತ್ವವನ್ನು ಕುರಿತು ಸಂವಿಧಾನಕ್ಕೆ ಹಲವಾರು ತಿದ್ದುಪಡಿಗಳನ್ನು ಮಾಡಿಕೊಳ್ಳುವುದರ ಮೂಲಕ ಮಾನವನ ದೈನಂದಿನ ಜೀವನಕ್ಕೆ ಸಂವಿಧಾನವು ತನ್ನ ಕಾಯ್ದೆ ಕಾನೂನುಗಳ ಸಹಾಯಕವಾಗಿರುವಂತಹ ರಾಜ್ಯ ನಿರ್ದೇಶಕ ತತ್ವಗಳಾದ ಉದಾರವಾದಿ ಸಮಾಜವಾದಿ ಗಾಂಧಿ ತತ್ವಗಳ ಬಗ್ಗೆ ಮತ್ತು ಸಂವಿಧಾನ ರಚನಾ ಸಭೆಯ ಮಹತ್ವದ ಹಾಗೂ ಮೂಲಭೂತ ಕರ್ತವ್ಯಗಳು ನಮ್ಮೆಲ್ಲರಿಗೂ ಹೇಗೆ ಉಪಯುಕ್ತವಾಗಿ ವೆಂಬುದನ್ನು ತಮ್ಮ ವಿಶೇಷ ಉಪನ್ಯಾಸದಲ್ಲಿ ಪ್ರಸ್ತುತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಕುಲ ಸಚಿವರಾದ ಎಸ್ಎನ್ ರುದ್ರೇಶ್ ರವರು ಸಂವಿಧಾನದಲ್ಲಿನ ಪ್ರಸ್ತಾವನೆಯ ವಿಶೇಷ ಪದಗಳಾದ ಜಾತ್ಯತೀತ ಸಮಾಜವಾದಿ ಗಣರಾಜ್ಯ ಇವುಗಳ ಬಗ್ಗೆ ತಮ್ಮ ವಿಚಾರಗಳನ್ನು ತಿಳಿಸಿದರು ಅಲ್ಲದೆ ಅಂಬೇಡ್ಕರ್ ಮಹಾ ಸಿ ಮಹಾ ಸ ಹಿ ಷ್ಣ ತಾ ಗುಣದಿಂದ ಅವರು ಹಿಂದು ಪಡೆದ ಅಪಾರ ಗೌರವದ ಬಗ್ಗೆ ಭಾವುಕರಾಗಿ ವ್ಯಕ್ತಪಡಿಸಿದರು.

ಅಂಬೇಡ್ಕರ್ ರವರಂತ ಆದರ್ಶ ಮಹಾನ್ ವ್ಯಕ್ತಿಗಳಾಗಲು ಹಿಂದಿನ ಯುವ ವಿದ್ಯಾರ್ಥಿಗಳು ಸಹಿಷ್ಣತಾ ಗುಣಗಳನ್ನು ಬೆಳೆಸಿಕೊಳ್ಳುವುದು ಬಹುಮುಖ್ಯ ಎಂದು ಮಾರ್ಗ ಸೂಚಿಸಿದರು ಅಲ್ಲದೆ ಅಂಬೇಡ್ಕರ್ ಅಂಥವರ ಆಳವಾದ ಮತ್ತು ನಿರಂತರ ಅಧ್ಯಯನದಿಂದ ಮಾತ್ರ ಹಿಂದಿನ ವಿದ್ಯಾರ್ಥಿಗಳು ವಿದ್ಯಾವಂತರಾಗಲು ಸಾಧ್ಯವೆಂದು ಹಾಗೂ ಸಂವಿಧಾನಕ್ಕೆ ವಚನ ಸಾಹಿತ್ಯದ ಸಾತ್ವಿಕ ಸ್ಪರ್ಶದ ಮಜಲುಗಳನ್ನು ತಿಳಿಸಿದರು.

ರಾಜ್ಯಶಾಸ್ತ್ರ ಅಧ್ಯಯನದ ವಿಭಾಗದ ಮುಖ್ಯಸ್ಥರಾದ ವಿಜಯಕುಮಾರ ಬಿ ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು ಜೊತೆಗೆ ಉಪಸ್ಥಿತರಾಗಿ ರಾಬರ್ಟ್ ಜೋಶ್ ಶಶಾಂಕ್ ಮಜ್ಜಿಗಿ ಲೋಕೇಶ್ ಕೆ ಎಸ್ ಉದಯಕುಮಾರ ಗೌರಿ ಮಾನಸ ಶಶಿಧರ ಚಾಂದ್ ಭಾಷಾ ನಾಗಭೂಷಣ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!