
ಸಿರುಗುಪ್ಪ: ಎಂ ಸೂಗೂರು ನಲ್ಲಿ ಬೀದಿ ನಾಯಿಗಳ ದಾಳಿ 23 ಕುರಿಗಳ ಸಾವು
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 18- ತಾಲೂಕಿನ ಮಣ್ಣೂರು ಸೂಗೂರು ಗ್ರಾಮದ ನಾಗರಾಜನ 8 ಕುರಿಗಳು ಫಕಿರಪ್ಪನ ಎಂಟು ಕುರಿಗಳು ಸಣ್ಣ ಫಕೀರಪ್ಪನ ಏಳು ಕುರಿಗಳು ಬೀದಿ ನಾಯಿಗಳಿಂದ ದಾಳಿಯಿಂದ ಮೃತಪಟ್ಟವು ಮಣ್ಣೂರು ಸೂಗೂರು ಗ್ರಾಮದ ಮಟ್ಟಿಯ ಹತ್ತಿರದ ಬಳಿ ಕಳೆದ ರಾತ್ರಿ ದಾಳಿ ನಡಿದಿರಬಹುದು ಎಂದು ಕುರಿ ಮಾಲೀಕರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಸಿರುಗುಪ್ಪ ತಾಲೂಕು ಮುಖ್ಯ ಪಶು ವೈದ್ಯಧಿಕಾರಿ ಡಾ ವೈ ಗಂಗಾಧರ ಸಿರಿಗೇರಿ ಮತ್ತು ಎಮ್ ಸೂಗೂರು ಪಶು ಚಿಕಿತ್ಸಾ ಕೇಂದ್ರಗಳ ಪಶು ಚಿಕಿತ್ಸೆಕ ಕೆ ದೇವೇಂದ್ರಪ್ಪ ಸಿರಿಗೇರಿ ಪೊಲೀಸ್ ಸಿಬ್ಬಂದಿಗಳಾದ ಹೆಚ್ ಪಿ ಸಿ ನಾಗರಾಜ ಪಿ ಸಿ ಚಂದ್ರಶೇಖರ್ ಅವರು ಭೇಟಿ ನೀಡಿ ಸಾವಿಗೀಡಾದ ಸತ್ತಿರುವ ಕುರಿ ಮರಿಗಳ ಮಾಹಿತಿ ಪಡೆದರು ಸತ್ತಿರುವ ಕುರಿ ಮರಿಗಳ ಬೆಲೆ ಅಂದಾಜು ಒಂದಕ್ಕೆ 10 ಸಾವಿರ ರೂಪಾಯಿ ಬಾಳುತ್ತವೆ ಎಂದು ಕುರಿ ಮಾಲೀಕರು ಮಾಹಿತಿ ನೀಡಿದರು .
ಸತ್ತು ಹೋದ ಟಗರು ಮರಿಗಳ ಮಾಹಿತಿ ಪರಿಶೀಲಿಸಿದ ಡಾ ಗಂಗಾಧರ ಕುರಿಗಾಹಿ ಸುರಕ್ಷಾ ಯೋಜನೆ ಅಡಿಯಲ್ಲಿ ಪರಿಹಾರ ನೀಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕುರಿ ಮಾಲೀಕರಿಗೆ ತಿಳಿಸಿದರು ಪಶು ಚಿಕಿತ್ಸಾ ಕೇಂದ್ರದ ದೇವೇಂದ್ರಪ್ಪ ಈ ಮಾಹಿತಿ ತಿಳಿಸಿದರು ನಾಯಿಗಳಿಂದ ಕುರಿಗಳನ್ನು ರಕ್ಷಿಸಿಕೊಳ್ಳುವ ಮುಂಜಾಗ್ರತೆ ಮಾಡಿಕೊಳ್ಳಬೇಕೆಂದು ಕುರಿಗಾಹಿಗಳಿಗೆ ವೈದ್ಯರು ಸಲಹೆ ನೀಡಿದರು ಈ ಸಂಬಂಧ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.