ಯುವಪೀಳಿಗೆ ಪ್ರತಿಭೆಯ ಜೊತೆ ಶಿಸ್ತು
ಸಂಯಮ ಮತ್ತು ಕೌಶಲ್ಯಗಳನ್ನು ಹೊಂದಬೇಕು;
ಜೆ. ಜಯಪ್ರಕಾಶ್ ಗುಪ್ತ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೦೪- ಯುವಜನರಲ್ಲಿ ಪ್ರತಿಭೆಯ ಜೊತೆಯಲ್ಲಿ ಶಿಸ್ತು, ಸಂಯಮ ಮತ್ತು ಕೌಶಲ್ಯಗಳಿದ್ದಲ್ಲಿ ಯಶಸ್ಸು ಸುಲಭ ಸಾಧ್ಯ ಎಂದು ಚಾರ್ಟೆಡ್ ಅಕೌಂಟೆAಟ್ ಜೆ. ಜಯಪ್ರಕಾಶ್ ಗುಪ್ತ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಬಳ್ಳಾರಿ ಜಿಲ್ಲಾ ಚೇಂಬರ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನ ಹೊಸ ಬ್ಯಾಚ್ ಪ್ರಾರಂಭದ ಅಂಗವಾಗಿ ಚೇಂಬರ್‌ನ ಸಭಾಂಗಣದಲ್ಲಿ ಸೋವವಾರ ನಡೆದ `ಪ್ರೇರಣೆ’ಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಅಕೌಂಟೆAಟ್‌ಗಳು, ಅಂಕಿ ಸಂಖ್ಯೆ ವಿಭಾಗ, ವಿಶ್ಲೇಷಣೆ, ಸಾರ್ವಜನಿಕ ಸಂಪರ್ಕ ಹೀಗೇ ಅನೇಕ ವಿಭಾಗಗಳನ್ನು ಹೊಂದಿರುವ ಯಾವುದೇ ಸಂಸ್ಥೆಗೆ ದೈನಂದಿನ ಚಟುವಟಿಕೆಗಳಲ್ಲಿ ಅಕೌಂಟೆAಟ್‌ಗಳು ಅವಿಭಾಜ್ಯವಾಗಿರುತ್ತಾರೆ. ಅಕೌಂಟಿAಗ್ ಅನ್ನು ಸರಿಯಾಗಿ ಕಲಿಯಬೇಕು. ಅಕೌಂಟಿAಗ್ ಕೆಲಸ ಸಾಮಾನ್ಯವಾದುದ್ದಲ್ಲ. ಅಕೌಂಟೆAಟ್‌ಗಳು ಸಂಸ್ಥೆಯ ಏಳ್ಗೆ ಮತ್ತು ಕೊರತೆಗಳನ್ನು ತಕ್ಷಣವೇ ಗುರುತಿಸಿ ಕಾಲಕಾಲಕ್ಕೆ ಆಡಳಿತ ಮಂಡಲಿಯ ಗಮನಕ್ಕೆ ತಂದಲ್ಲಿ ಅಂಥಹಾ ಸಂಸ್ಥೆಯನ್ನು ಪುನಃಶ್ಚೇತನದಲ್ಲಿ ನಿರ್ಣಾಯಕರಾಗುತ್ತಾರೆ ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುವ ನಿಟ್ಟಿನಲ್ಲಿ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ಮೂಲಕ ಯುವಶಕ್ತಿ ಸ್ವಾವಲಂಭನೆ ಹಾಗೂ ಆರ್ಥಿಕ ಸ್ವಾತಂತ್ರö್ಯದ ಭವಿಷ್ಯವನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಕೌಶಲ್ಯಾಭಿವೃದ್ಧಿ ಕೋರ್ಸ್ಗಳನ್ನು ನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಟ್ಯಾಲಿ ತರಬೇತಿಯೂ ಒಂದು. ನಮ್ಮಲ್ಲಿ ಟ್ಯಾಲಿ ಕಲಿಸಲು ಪರಿಣಿತರು ಮತ್ತು ತಜ್ಞರಿದ್ದಾರೆ. ನಮ್ಮಲ್ಲಿ ಟ್ಯಾಲಿ ಕಲಿಯುವ ಯುವಪೀಳಿಗೆಗೆ ಅಕೌಂಟಿAಗ್ ಕ್ಷೇತ್ರದಲ್ಲಿ ಅಪಾರವಾದ ಬೇಡಿಕೆಯಿದೆ ಎಂದರು.
ಚಾರ್ಟೆಡ್ ಅಕೌಂಟೆAಟ್ ಕೆ. ರಾಜಶೇಖರ ಅವರು ಅತಿಥಿಗಳಾಗಿ, ವೃತ್ತಿಯಲ್ಲಿ ಅನುಭವ ದೊಡ್ಡದು. ಪಠ್ಯದಿಂದ ಪಡೆದ ಜ್ಞಾನವನ್ನು ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಿಕೊಂಡಾಗ ಆ ಜ್ಞಾನ ಸದ್ಭಳಕೆ ಆಗಲಿದೆ. ಖಾಸಗಿ ಮತ್ತು ಸರ್ಕಾರಿ – ಅರೆ ಸರ್ಕಾರಿ ನೇಮಕಾತಿಗಳಲ್ಲಿ ಅಕೌಂಟೆAಟ್‌ಗಳಿಗೆ ಅಪಾರವಾದ ಬೇಡಿಕೆಯಿದೆ. ಅದರಲ್ಲೂ ಪರಿಣಿತ, ಅನುಭವಿ ಮತ್ತು ಬದ್ಧತೆಯಿಂದ, ಶಿಸ್ತಿನಿಂದ ವೃತ್ತಿಯನ್ನು ನಿರ್ವಹಿಸುವವರಿಗೆ ಸಾಕಷ್ಟು ಬೇಡಿಕೆ ಇದೆ. ಕಾರಣ ಪ್ರತಿಯೊಬ್ಬರೂ ಆಸಕ್ತಿ ತೋರಿಸಿ, ಕಲಿಯಬೇಕು ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಮರ್ಚೇಡ್ ಮಲ್ಲಿಕಾರ್ಜುನ ಅವರು, ವಿದ್ಯಾರ್ಥಿ ಜೀವನದಲ್ಲಿ ಕಲಿಕೆ, ಶಿಸ್ತು, ಪರಿಣಿತಿಯ ಜೊತೆಯಲ್ಲಿ ಪ್ರಾವಿಣ್ಯತೆ ಹಾಗೂ ಕೌಶಲ್ಯಗಳನ್ನು ಪಡೆಯುವುದು ಅತಿ ಮುಖ್ಯ. ಈ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲಾ ಚೇಂಬರ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನ ಮೂಲಕ ಅರ್ಹ ಮತ್ತು ಆಸಕ್ತರಿಗೆ ಪರಿಣಿತರ ಮೂಲಕ ಕೌಶಲ್ಯವನ್ನು ಕಲಿಸುವನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಇದರ ಸದುಪಯೋಗ ಮಾಡಿಕೊಳ್ಳಿರಿ ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷ ಎಸ್. ದೊಡ್ಡನಗೌಡರು, ಜಂಟಿ ಕಾರ್ಯದರ್ಶಿ ವಿ. ರಾಮಚಂದ್ರ, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮಾಜಿ ಅಧ್ಯಕ್ಷ ವಿ. ರವಿಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ನಾಗಳ್ಳಿ ರಮೇಶ್, ಟಿ. ಶ್ರೀನಿವಾಸರಾವ್, ನೇಕಾರ್ ನಾಗರಾಜ್ ಇನ್ನಿತರರು ಉಪಸ್ಥಿತರಿದ್ದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ. ಮಹಾರುದ್ರಗೌಡ ಅವರು ಸ್ವಾಗತ ಕೋರಿದರು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಅವರು ವಂದಿಸಿದರು. ಬಳ್ಳಾರಿ ಜಿಲ್ಲಾ ಚೇಂಬರ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರೇರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರ