
25 ರಂದು ದತ್ತಿ ಉಪನ್ಯಾಸ ಹಾಗೂ ದತ್ತಿ ಪ್ರಶಸ್ತಿ
ಪ್ರಧಾನ ಕಾರ್ಯಕ್ರಮ
ಕರುನಾಡು ಬೆಳಗು ಸುದ್ದಿ
ಕೊಪ್ಪಳ,23- ಇದೇ ದಿನಾಂಕ ೨೫ ರ ಶನಿವಾರದಂದು ಭಾಗ್ಯನಗರದ ಪಯೋನಿಯರ್ ಪಬ್ಲಿಕ್ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿರುವ ದಿ. ಬಸಪ್ಪ ಕೆಂಚಪ್ಪ ದಿವಟರ್, ದಿ. ಯಮನೂರಪ್ಪ ನಿಂಗಪ್ಪ ಮುರಳಿ ದಿ. ಮರಿಗೌಡರ ಮಲ್ಲನಗೌಡರ್, ದಿ. ಅಂದಮ್ಮ ಮರಿಗೌಡರ್ ಮಲ್ಲನಗೌರ್ ಅವರ ದತ್ತಿ ಕಾರ್ಯಕ್ರಮವನ್ನು ಜರುಗಲಿದೆ,
ಕಾರ್ಯಕ್ರಮವನ್ನು ಪ್ರಜಾವಾಣಿ ಜಿಲ್ಲಾ ವರದಿಗಾರ ಪ್ರಮೋದ್ ಜಿ.ಕೆ. ಅವರು ಉದ್ಘಾಟಿಸಿದರೆ. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶರಣೇಗೌಡ ಪಿ ಪಾಟೀಲ ಅವರು ಅಧ್ಯಕ್ಷತೆ ವಹಿಸಲಿದ್ದು. ವಚನ ಸಾಹಿತ್ಯ ವಿಷಯ ಕುರಿತು ಶರಣಪ್ಪ ಬಳಿಗಾರ , ಸಾಹಿತ್ತಿಕ ಮತ್ತು ಸಾಮಾಜಿಕ ಜವಾಬ್ದಾರಿ ಕೊಡುಗೆ ವಿಷಯ ಕುರಿತು ಶಿಕ್ಷಕ ದಾವಲ್‌ಸಾಬ ಮುಜಾವರ ಅವರ ಉಪನ್ಯಾಸ ನೀಡುವರು.
ಈ ಸಂದರ್ಭದಲ್ಲಿ ದತ್ತಿ ಪ್ರಶಸ್ತಿ ವಿಜೇತರಾದ ಸಾಹಿತಿ ಯಲ್ಲಪ್ಪ ಹರ್ನಾಳಗಿ, ( ಬಿಸಿಲು ಬಾಯಾರಿದಾಗ ಕವನ ಸಂಕಲನ ), ಜಹಾನ್ ಆರಾ ಕೋಳೂರು ( ನನ್ನೂರ ಕೌದಿ ಕೃತಿ ) ಅವರಿಗೆ ದತ್ತಿ ಪ್ರಶಸ್ತಿ ಪ್ರಧಾನ ಮಾಡಲಗುವುದು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪತ್ರಕರ್ತ ಸಾಧಿಕ್ ಅಲಿ, ಕವಯತ್ರಿ ಮಾಲಾ ಬಡಿಗೇರ, ಪಯೋನಿಯರ್ ಶಾಲೆಯ ಅಧ್ಯಕ್ಷ ಕೃಷ್ಣಾ ಇಟ್ಟಂಗಿ, ಗಿರೀಶ ಪಾನಘಂಟಿ, ಪ್ರಾಂಶುಪಾಲರಾದ ದತ್ತಾತ್ರೇಯ ಸಾಗರ, ಜಿಲ್ಲಾ ಕಸಾಪ ಕಾರ್ಯದರ್ಶಿ ಚನ್ನಬಸಪ್ಪ ಕಡ್ಡಿಪುಡಿ, ಶೇಖರಗೌಡ ಪಾಟೀಲ.
ಕಸಾಪ ಕೋಶಾಧ್ಯಕ್ಷ ರಮೇಶ ಕುಲಕರ್ಣಿ, ಸಂಘಟನಾ ಕಾರ್ಯದರ್ಶಿ ರಮೇಶ ತುಪ್ಪದ, ಸಂಘ ಸಂಸ್ತೆ ಪ್ರತಿನಿಧಿ ತೋಟಪ್ಪ ಕಾಮನೋರು, ಹೇಮಣ್ಣ ಕವಲೂರು, ದತ್ತಿ ದಾನಿಗಳಾದ ಡಾ.ಮಹಾಂತೇಶ ಮಲ್ಲನಗೌಡರ, ಮಂಜುನಾಥ ದಿವಟರ್, ವಿರುಪಾಕ್ಷಪ್ಪ ಮುರಳಿ ಭಾಗವಹಿಸಲಿದ್ದಾರೆ.
ಈಸಂದರ್ಭದಲ್ಲಿ ಆಶಯ ನುಡಿಯನ್ನು ಶ್ರೀನಿವಾಸ ಬಡಿಗೇರ ನುಡಿದರೆ, ನಿರೂಪಣೆಯನ್ನು ಮಲ್ಲಿಕಾರ್ಜುನ ಹ್ಯಾಟಿ ಮಡಲಿದ್ದಾರೆಯೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ರಾಮಚಂದ್ರಗೌಡ ಬಿ. ಗೊಂಡಬಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.