WhatsApp Image 2024-01-24 at 6.55.20 PM

26 ರಂದು ತಾಯಮ್ಮ ಶಕ್ತಿ ಸಂಘದ ದಶಮಾನತ್ಸವ, ಉದ್ಯೋಗ ಮೇಳ : ಕವಿತಾ ಈಶ್ವರ್ ಸಿಂಗ್ 

ಕರುನಾಡ ಬೆಳಗುಮ ಸುದ್ದಿ

ವಿಜಯನಗರ,24-  ತಾಯಮ್ಮ ಶಕ್ತಿ ಸಂಘದ 10ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ ಆಚರಣೆ ಅಂಗವಾಗಿ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡಿದ್ದು, ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಬ್ಯಾಗ್, ಟ್ಯೂಷನ್, ಸಮವಸ್ತ್ರ ಮತ್ತು ಸಾಧಕರಿಗೆ ಸನ್ಮಾನ ಮತ್ತಿತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ನಗರದ ಚರ್ಚ್ ಕಾಂಪ್ಲೆಕ್ಸ್ ನಲ್ಲಿರುವ ಪತ್ರಿಕಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಘದ ಸಂಸ್ಥಾಪಕಿ ಕವಿತಾ ಸಿಂಗ್ ತಾಯಮ್ಮ ಶಕ್ತಿ ಸಂಘ ಕಳೆದ 10 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದು, ದಿನಾಂಕ : 26 ರಂದು ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಸಂಘದ ದಶ ಮಾನೋತ್ಸವ ಹಮ್ಮಿಕೊಂಡಿದ್ದು. ಸಂಜೆ ನಾಲ್ಕರಿಂದ ಒಂಬತ್ತು(4-9) ಗಂಟೆಯವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಅಂದು ಪಾಪಿನಾಯಕನಹಳ್ಳಿಯ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಶಾಲಾ ಬ್ಯಾಗ್ ಮತ್ತು 88ಮುದ್ಲಾಪುರದ ಅಂದ ಮಕ್ಕಳ ಶಾಲಾ ಮಕ್ಕಳಿಗೆ ಸಮವಸ್ತ್ರಗಳನ್ನು ಹಾಗೂ ಶಾಲೆಗೆ ಕುಡಿಯುವ ನೀರಿನ ಶುದ್ದೀಕರಣ ಯಂತ್ರವನ್ನು ಸಂಸ್ಥೆಯಿಂದ ವೇದಿಕೆಮೇಲೆ ಕೊಡಲಾಗುವುದು.

ಇಷ್ಟು ದಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಸೇವೆ ಮಾಡಿದ್ದೇವೆ, ನಮ್ಮ ಸಂಘಕ್ಕೆ 15ಜನ ಪುರುಷರು ಮತ್ತು 15ಜನ ಮಹಿಳೆಯರು ಪದಾಧಿಕಾರಿಗಳಾಗಿ ಆಕೆಯಾಗಲಿದ್ದಾರೆ . ನಮ್ಮ ಸಂಘಕ್ಕೆ 1000ಜನ ಸೇರ್ಪಡೆಗೊಳ್ಳಲಿದ್ದಾರೆ.
ನಾನಿಂದು ಸ್ವತಂತ್ರವಾಗಿದ್ದೇನೆ. ಪಕ್ಷ ಭೇದ ಮರೆತು ಸಮಾಜ ಸೇವೆಯಲ್ಲಿ ಅಪಾರವಾದ ಸೇವೆ ಸಲ್ಲಿಸಿದ 70 ಜನರನ್ನು ಗುರುತಿಸಿ ವೇದಿಕೆಯಲ್ಲಿ ಸನ್ಮಾನಿಸಲಾಗುವುದು.

ಈಗಾಗಲೇ ತಮ್ಮ ಸಂಘದಲ್ಲಿ ಒಂದು ಸಾವಿರ ಮಹಿಳೆಯರು ಸದಸ್ಯರಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದುಕೊಂಡವರಿಗೆ ಸ್ವಾವಲಂಬಿ ಜೀವನಕ್ಕೆ ಸಹಕಾರ ನೀಡಲು ತಮ್ಮ ಸಂಘ ನೆರವು ನೀಡುವುದಾಗಿ ಅವರು ಹೇಳಿದರು. ನೊಂದಣಿಗಾಗಿ- 7022731030 -8073950500, 8197101304, ಪೋನ್ ಮಾಡಿ ಸದಸ್ಯತ್ವ ಪಡೆದು ಕೊಳ್ಳಲು ಅವರು ತಿಳಿಸಿದರು.

ಕಛೇರಿ ಉದ್ಘಾಟನೆ : ಫೆಬ್ರವರಿ ಮೊದಲನೇ ವಾರ ಶುಕ್ರವಾರ ರಂದು ಹೊಸಪೇಟೆಯ ಎಂ.ಜೆ.ನಗರದಲ್ಲಿ ಸಂಘದ ಕಛೇರಿಯನ್ನು ಉದ್ಘಾಟಿಸಲಾಗುವುದು. ಅಂದು ಮಹಿಳೆಯರ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಕೋಲಾರ ಜಿಲ್ಲೆಯ, ನರಸಾಪುರದಲ್ಲಿರುವ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯು ಮಹಿಳೆಯರಿಗೆ 3,000 ಉದ್ಯೋಗಗಳನ್ನು ಕೊಡುತ್ತಿದೆ. ಆದ್ದರಿಂದ ಈ ಮೇಳದಲ್ಲಿ 10ನೇ ತರಗತಿಯಿಂದ ಪಿಯುಸಿ, ಯಾವುದೇ ಪದವಿಯಲ್ಲಿ ಉತ್ತೀರ್ಣರಾದ 18ರಿಂದ 26ವರ್ಷದ ಯುವತಿಯರು ಭಾಗವಹಿಸಬಹುದು. ಆಯ್ಕೆಯಾದವರಿಗೆ 14 ಸಾವಿರದಿಂದ 18 ಸಾವಿರದವರೆಗೆ ವೇತನ ವಿದೆ. ಉಳಿದುಕೊಳ್ಳುವವರಿಗೆ ಪಿಜಿ ಸಹ ಇರುತ್ತದೆ. ಎರೆಡು ಹೊತ್ತು ಊಟ ಮತ್ತು ಕ್ಯಾಬ್ ಸಹ ಉಚಿತವಾಗಿರುತ್ತದೆ.

ಮಹಿಳೆಯರ ಸಬಲೀಕರಣಕ್ಕಾಗಿ ನಗರದಲ್ಲಿ ಅಗರಬತ್ತಿ ಫ್ಯಾಕ್ಟರಿ ಓಪನ್ ಮಾಡಲಾಗುವುದು. 60ಜನ ಮಹಿಳೆಯರಿಗೆ ಸ್ವಯಂ ಉದ್ಯೋಗ ತರಭೇತಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು 30ಜನ ಟೈಲರಿಂಗ್, 30ಜನ ಫ್ಯಾಶನ್ ಡಿಸೈನಿಂಗ್ ತರಬೇತಿ ಮುಗಿಸಿ ದವರಿಗೆ, ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ ನಿಗಮದಿಂದ 60ಪ್ರಮಾಣ ಪತ್ರ ಗಳನ್ನು ಕೊಡಲಾಗುವುದು ಎಂದರು. ದಿನಾಂಕ 26 ರಂದು ನಡೆಯುವ ಕಾರ್ಯಕ್ರಮಕ್ಕೆ ಶಾಸಕ ಹವಿಯಪ್ಪ, ಜಿಲ್ಲಾಧಿಕಾರಿ ದಿವಾಕರ್, ಎಸ.ಪಿ.ಶ್ರೀಹರಿಭಾಬು, ಸಿಇಓ ಸದಾಶಿವಪ್ರಭು, ಸಿದ್ದಾರ್ಥ ಸಿಂಗ್, ಹೆಚ್. ಎನ್.ಎಫ್.ಇಮಾಂಮ್, ತಾರಳ್ಳಿ ಹನುಮಂತಪ್ಪ, ನಗರಸಭಾದ್ಯಕ್ಷೆ ಲತಾ, ಉಪಸ್ಥಿತರಿರುವುದಾಗಿ ಅವರು ಹೇಳಿದರು.

ಸುದ್ದಿಗೊಷ್ಟಿಯಲ್ಲಿ ಕಾರ್ಯದರ್ಶಿ ಹನುಮಂತ, ಸಂಸ್ಥೆಯ ನಿರ್ದೇಶಕ ರಾಘವೇಂದ್ರ ಎಸ್ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!