5

ಕೆಂಚನಗುಡ್ಡವೂ ಮಂತ್ರಾಲಯವಾಗಿ ಅಭಿವೃದ್ಧಿ ಹೊಂದಲಿ : ಸುಭುದೇಂದ್ರ ಶ್ರೀ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 24- ಕೆಂಚನಗುಡ್ಡ ಕ್ಷೇತ್ರ ಮರು ಮಂತ್ರಾಲಯ ದಂತಾಗಲಿ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಪೀಠಾಧಿಪತಿ ಶ್ರೀ ಸುಬುದೇಂದ್ರ ತೀರ್ಥರು ಹೇಳಿದರು.

ತಾಲೂಕಿನ ಕೆಂಚನಗುಡ್ಡ ಗ್ರಾಮದ ಬಳಿಯ ಶ್ರೀ ವಸುಧೇಂದ್ರ ತೀರ್ಥರ ೨೬೩ ನೇ ಮಧ್ಯಾರಾಧನೆ ಪ್ರಯುಕ್ತ ಆಗಮಿಸಿದ್ದ ಅವರು ಆಶೀರ್ವಚನ ನೀಡಿ ೪೮೦ ಲಕ್ಷ ರೂ.ಗಳ ವೆಚ್ಚದಲ್ಲಿ ಶಾಸಕ ಬಿ.ಎಂ.ನಾಗರಾಜ ಮಠದವರೆಗೊ ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದಾರೆ ಅಲ್ಲದೆ ರೆಡ್ಡಿ ಸಮುದಾಯದವರು ವೈಶ್ಯ ಸಮುದಾಯದವರು ಬ್ರಾಹ್ಮಣ ಸಮುದಾಯದವರು ಸೇರಿದಂತೆ ಅನೇಕ ಸಮುದಾಯಗಳ ಭಕ್ತರು ಮಠದ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ ಇಲ್ಲಿ ಕಲ್ಯಾಣ ಮಂಟಪ ಹಾಗೂ ಇನ್ನಿತರ ಅನುಕೂಲಕರ ಕಟ್ಟಡಗಳನ್ನು ನಿರ್ಮಿಸಿ ಎಲ್ಲಾ ಕಾಲಗಳಲ್ಲಿಯೂ ಕಾರ್ಯಕ್ರಮ ನಡೆಯುವಂತಾಗಲಿ ಈ ಸ್ಥಳವು ಸಹ ಮಂತ್ರಾಲಯದAತೆ ಅಭಿವೃದ್ಧಿ ಹೊಂದಲಿ ಎಂದರು.

ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಂಗಳಾರತಿ ನೆರವೇರಿಸಿದರು. ಇದಕ್ಕೂ ಮುನ್ನ ಶಾಸಕರೊಂದಿಗೆ ಮಠದವರೆಗೆ ನಿರ್ಮಾಣವಾದ ನೂತನ ಕಾಂಕ್ರೀಟ್ ರಸ್ತೆ ಲೋಕಾರ್ಪಣೆ ಗೊಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಕೆಂಚನಗುಡ್ಡ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ನಗರಸಭೆ ಅಧ್ಯಕ್ಷರಾದ ಬಿ.ರೇಣುಕಮ್ಮ, ವೆಂಕಟೇಶ್, ನಗರಸಭೆ ಸದಸ್ಯ ಹೆಚ್.ಗಣೇಶ್, ಪರಶುರಾಮ್, ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕರಿಬಸಪ್ಪ, ಕಾಂಗ್ರೆಸ್ ಮುಖಂಡÀ ಬಿ.ಜಿ.ಮಂಜುನಾಥ ರೆಡ್ಡಿ, ಮುತ್ಯಾಲ ಶೆಟ್ಟಿ, ನರಸಿಂಹ ನಾಯಕ್, ಕೆಂಚನಗುಡ್ಡ ವೀರೇಶ್, ಯಂಕಪ್ಪ, ನಾಗಪ್ಪ, ಸುಭಾನ್ ಸಾಬ್, ಸೂರ್ಯಪ್ರಕಾಶ್ ರೆಡ್ಡಿ, ತಾಳೂರು ದೇವರೆಡ್ಡಿ, ಬಿ.ಉಮೇಶ್ ಗೌಡ, ಗೊರವರ ಶ್ರೀನಿವಾಸ್, ಬ್ರಾಹ್ಮಣ ಸಂಘದ ಅಧ್ಯಕ್ಷ ಜೋಯಿಸ್ ಶ್ರೀನಿವಾಸಚಾರ್ಯ, ತಾಲೂಕು ಬ್ರಾಹ್ಮಣರ ಯುವ ಘಟಕದ ಅಧ್ಯಕ್ಷ ಪವನ್ ಕುಮಾರ್, ದೇಸಾಯಿ ಸಂಘದ ಪದಾಧಿಕಾರಿಗಳು, ಮಠದ ವ್ಯವಸ್ಥಾಪಕ ವೆಂಕಟೇಶ್ ಆಚಾರ್ಯ, ಬ್ರಾಹ್ಮಣ ಸಮಾಜದ ಮುಖಂಡ ಎಚ್.ಕೆ.ಗೋಪಾಲ್ ರಾವ್, ಗುಂಡಾಚಾರ್ಯ, ಹೆಚ್.ವಸದೇಂದ್ರರಾವು, ಜೆ.ನರಸಿಂಹಮೂರ್ತಿ, ಮುಖಂಡರು, ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!