
28ರಂದು ವಿದ್ಯಾರ್ಥಿ ಯುವ ಜನರ ಸ್ವಾಭಿಮಾನಿ ಸಮಾವೇಶ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 26- ವಿದ್ಯಾರ್ಥಿ ಯುವ ಜನರ ಸ್ವಾಭಿಮಾನಿ ಸಮಾವೇಶ ಏ.೨೮ ಭಾನುವಾರ ಬೆಳಗ್ಗೆ ೧೦.೦೦ ಗಂಟೆಗೆ ನಗರದ ಜ್ಯೂನಿಯರ್ ಕಾಲೇಜ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.ಸಮಾವೇಶಕ್ಕೆ ೧ಸಾವಿರ ಪ್ರತಿನಿಧಿಗಳು ಭಾಗವಹಿಸುತ್ತಾರೆ ಎಂದು ಎಂದು ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದುರುಗೇಶ್ ಹಾಗೂ ಸ್ಟುಡೆಂಟ್ ಇಸ್ಲಾಮಿಕ್ ಆರ್ಗನೈಜೆಷನ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹ್ಮದ್ ಪೀರ್ ಲಟಿಗೇರಿ ಜಂಟಿಯಾಗಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠೀ ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿ ಯುವ ಜನರ ಸ್ವಾಭಿಮಾನಿ ಸಮಾವೇಶ ಚಲನಚಿತ್ರ ನಟ ಪ್ರಕಾಶ್ ರೈ, ದೆಹಲಿಯರೈತ ಹೋರಾಟಗಾರ-ಹೌವತಾರಸಿಂಗ,ಶಿವಸುಮದರ,ಪಿರಬಾಷಾ ಅನೇಕರು ಭಾಗವಹಿಸಲಿದ್ದಾರೆ.
ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ ಒಂದಡೆಯಾದರೆ, ಸ್ಕಾಲರ್‌ಶೀಪ್, ಫೆಲೋಶಿಪ್ ಗಳನ್ನು ಹಂತಹAತವಾಗಿ ನಿಲ್ಲಿಸುತ್ತಾ ಬರಲಾಗುತ್ತಿದೆ, ಪರೀಕ್ಷಾ ಶುಲ್ಕಾ, ಬೋಧನಾ ಶುಲ್ಕಗಳ ಸಬ್ಸಿಡಿಯನ್ನು ದಿನೇ ದಿನೇ ಕಡಿಮೆ ಮಾಡಲಾಗುತ್ತಿದೆ, ಬಡವರ ಪರ ಇರುವ ಜನಪ್ರತಿನಿಧಿಗಳನ್ನು ಬೆಂಬಲಿಸುವಂತೆ ಸಮಾವೇಶದಲ್ಲಿ ಕರೆ ತಿಳಿಸಲಾಗುವುದು.
ಟಿಪ್ಪು ಬಗ್ಗೆ ಅನೇಕ ವಿದ್ವಾಂಸರು ಬೆಳಕು ಚೆಲ್ಲಿದರೂ ಅನಗತ್ಯ ಆತನ ಒಂದೆರೆಡು ತಪ್ಪುಗಳನ್ನೇ ಎತ್ತಿ ಹಿಡಿದು ಒಳ್ಳೆಯ ಕೆಲಸಗಳನ್ನು ಮರೆಮಾಚುವ ಐತಿಹಾಸಿಕ ತಪ್ಪು ತಪ್ಪುಗಳನ್ನು ಕೆಲವರು ಮಾಡುತ್ತಿದ್ದಾರೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆಂದರು ಎರಡು ಕೋಟಿ ಉದ್ಯೋಗ ಒಟ್ಟು ಹತ್ತು ಕೋಟಿ ಉದ್ಯೋಗ ಎಲ್ಲಿ..?, ಹಭ ಹೆಂಡ ಜಾತಿ ಹೆಸರಿನ ಮೇಲೆ ಆಗುವ ಚುನಾವಣೆಯಿಂದ ಜನರನ್ನು ಜಾಗೃತಿಗೊಳಿಸಿ ಸಂವಿಧಾನ ಉಳಿಸುವ ಜಾತ್ಯಾತೀತಗೆ ಆದ್ಯತೆ ನೀಡುವವರಿಗೆ ಮತ ಹಾಕಿ, ಶಿಕ್ಷಣ ವ್ಯಾಪಾರೀಕರಣವಾಗಿದೆ ಬಡವರು ಉನ್ನತ ಶಿಕ್ಷಣ ಪಡೆಯುವಂತಿಲ್ಲ ಇಂಥ ಸ್ಥಿತಿ ನಿರ್ಮಾಣವಾಗಿದೆ, ಒಟ್ಟು ಹದಿನಾಲ್ಕು ಜಿಲ್ಲೆಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು ಸಮಾವೇಶದಲ್ಲಿ ವಿಸ್ತೃತ ಚರ್ಚೆ ಮಾಡಲಾಗುವುದು ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನತೆ ಪಾಲಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಹಿಳಾ ದುರಿಣೆ ಪ್ರಗತಿ, ಜಮಾತೆ ಏ ಇಸ್ಲಾಮಿಕ್ ಹಿಂದ್ ರ್ಸಂಘಟನೆಯ ಗಂಗಾವತಿ ತಾಲೂಕಾ ಅಧ್ಯಕ್ಷರಾದ ಅಬ್ದುಲ್ ಖುದ್ದೂಸ್, ಸಾಲಿಡಾರಿಟಿ ಯೂಥ್ ಮೂವ್‌ಮೆಂಟ್‌ನ ಆಸೀಫ್ ಅಲಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ನಾಸೀರ್ ಆಹ್ಮದ್ ಉಪಸ್ಥಿತರಿದ್ದರು.