
30ರಂದು ಕೊಪ್ಪಳ ವಿಶ್ವವಿದ್ಯಾಲಯದ ವತಿಯಿಂದ
ದಸರಾ ಕಾವ್ಯ ಸಂಭ್ರಮ 2025
ಕರುನಾಡ ಬೆಳಗು ಸುದ್ದಿ
ಕೊಪ್ಪಳ ೨೬- ಸತತ ಮೂರನೇ ಬಾರಿಗೆ ಇದೇ ದಿ. 30ರಂದು ಕೊಪ್ಪಳ ವಿಶ್ವವಿದ್ಯಾಲಯದ ವತಿಯಿಂದ ದಸರಾ ಕಾವ್ಯ ಸಂಭ್ರಮ 2025ನ್ನು ಆಯೋಜಿಸಲಾಗಿದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲಿಕಾ ಘಂಟಿಯವರು ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ.
ತಳಕಲ್ ನ ಇಂಜನಿಯರಿಂಗ್ ಕಾಲೇಜು ಆವರಣದಲ್ಲಿನ ಕೊಪ್ಪಳ ವಿಶ್ವ ವಿದ್ಯಾಲಯಲ್ಲಿ ಇದೇ 30ರಂದು ಬೆಳಿಗ್ಗೆ 10-30ಕ್ಕೆ ನಡೆಯುವ ಈ ದಸರಾ ಕಾವ್ಯ ಸಂಭ್ರಮ -2025 ಸಮಾರಂಭದ ಅಧ್ಯಕ್ಷತೆಯನ್ನು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಕೆ.ರವಿ ಯವರು ವಹಿಸಲಿದ್ದಾರೆ. ಈ ವೇಳೆ ‘ಕಲ್ಯಾಣ ವಾಣಿ’ ವಿಶೇಷ ಸಂಚಿಕೆಯ ಬಿಡುಗಡೆಯನ್ನು ಕೊಪ್ಪಳ ಜಿಲ್ಲಾಧಿಕಾರಿ ಡಾ: ಸುರೇಶ ಇಇ್ನಾಳ ಅವರು ನೆರವೇರಿಸಲಿದ್ದಾರೆ.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ.ವೆಂಕಟೇಶ್ವರಲು, ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ವಿಜಯಾ ಕೋರಿಶೆಟ್ಟಿಯವರು, ರಾಯಚೂರು ಆದಿ ಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶಿವಾನಂದ ಕೆಳಗಿನಮನಿ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರ್ಗಿಯ ಕುಲಪತಿಗಳಾದ ಪ್ರೊ. ಶಶಿಕಾಂತ ಉಡಿಕೇರಿವರು, ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ರಮೇಶ.ಜಿ, ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾದ ಡಾ. ವಸುಂಧರಾ ಭೂಪತಿ, ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ. ಓಂಕಾರ ಕಾಕಡೆಯವರು, ಭಾಗವಹಿಸಲಿದ್ದಾರೆ. ಕೊಪ್ಪಳ ವಿವಿಯ ಕುಲಸಚಿವರು(ಪ್ರಭಾರ) ಆದ ಪ್ರೊ.ಕೆ.ವಿ.ಪ್ರಸಾದ, ಹಣಕಾಸು ಅಧಿಕಾರಿಗಳಾದ ಅಮೀನಸಾಬ, ಆಡಳಿತಾಧಿಕಾರಿ ತಿಮ್ಮಾರೆಡ್ಡಿ ಮೇಟಿ ಇನ್ನಿತರರು ಉಪಸ್ಥಿತರಿರಲಿದ್ದಾರೆ.
ನಂತರ ನಡೆಯುವ ವಿ.ವಿ.ಯಿಂದ ಆಯೋಜಿಸಲಾದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಎಚ್.ಎಲ್. ಪುಷ್ಪ ವಹಿಸಲಿದ್ದು, ಕವಿಗಳಾದ ವೀರಣ್ಣ ನಿಂಗೋಜಿ, ಈಶ್ವರ ಹತ್ತಿ, ಶರಣಬಸಪ್ಪ ಬಿಳಿಎಲೆ,ಡಾ. ಸಿದ್ದಲಿಂಗಪ್ಪ ಕೊಟ್ನೇಕಲ್, ಸಾವಿತ್ರಿ ಮಜುಮದಾರ, ಮಾಲಾ ಬಡಿಗೇರ ಸೇರಿದಂತೆ ಸುಮಾರು 50ಕ್ಕೂ ಅಧಿಕ ಕವಿಗಳು ಈ ಕವಿಗೋಷ್ಠಿಯಲ್ಲಿ ಕವನ ವಾಚಿಸಲಿದ್ದಾರೆ. ಈ ವೇಳೆ ವಿವಿಧ ಕಲಾ ತಂಡಗಳಿಂದ ವಾದನ, ಹಾಗೂ ಆಕರ್ಷಕ ಕಲಾ ಪ್ರದರ್ಶನ, ಮೆರವಣಿಗೆ, ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಜರುಗಲಿವೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.