
371ನೇ (ಜೇ) ಸರ್ಮಪಕವಾಗಿ ಜಾರಿಯಾಗಲಿ : ಪರಣ್ಣ ಮುನವಳ್ಳಿ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 15- ನಗರದ ಐ,ಎಮ್ ಎ ಭವನದಲ್ಲಿ 371ನೇ( ಜೆ ) ಅನುಷ್ಠಾನ ಸಮಿತಿಯ ಪೂರ್ವಭಾವಿ ಸಭೆ ಜರುಗಿತು.
ಮಾಜಿ ಶಾಸಕ ಪರಣ್ಣ ಮುನವಳ್ಳಿ,ಮಾಜಿ ಸಂಸದ ಶಿವರಾಮಗೌಡ ಮಾತನಾಡಿ, ಹೈದರಾಬಾದ್ ಕರ್ನಾಟಕ ಭಾಗಕ್ಕೆ ನೀಡಿರುವ 371ನೇ (ಜೆ ) ಕಾಲಂ ನ ಸಮರ್ಪಕ ಮತ್ತು ಪರಿಣಾಮಕಾರಿ ಅನುಷ್ಠಾನವಾಗಬೇಕಾಗಿದೆ ಅಧಿಕಾರಿಗಳು ಸರ್ಮಪಕವಾಗಿ ಜಾರಿ ತರುವ ಕೆಲಸವಾಗಬೇಕಾಗಿದೆ ಎಂದರು.
ಮುಂದಿನ ಹೋರಾಟದ ಪೂರ್ವ ಸಿದ್ಧತೆಗೆ ಗಂಗಾವತಿಯ ಕನ್ನಡ ಪರ ಸಂಘಟನೆಗಳು, ವ್ಯಾಪಾರ ಸಮಿತಿ, ವಿದ್ಯಾರ್ಥಿ ಪರಿಷತ್, ಮಹಿಳಾ ಸಂಘಟನೆಗಳು, ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆ, ಸರ್ಕಾರಿ ನೌಕರ ಸಂಘ ಎಲ್ಲರೂ ಭಾಗವಹಿಸಲು ಮನವಿ ಮಾಡಿದರು.
ಈ ಪೂರ್ವಭಾವಿ ಸಭೆಯ ನೇತೃತ್ವವಹಿಸಿದ್ದ ಈ ಧನರಾಜ ರೂಪರೆಷಗಳ ಬಗ್ಗೆ ವಿವರಿಸಿದರು.
ತಿಪ್ಪೇರುದ್ರಸ್ವಾಮಿ ವಕೀಲರು, ಕೆ ಚನ್ನಬಸಯ್ಯ ಸ್ವಾಮಿ, ಜೋಗದ ನಾರಾಯಣಪ್ಪ ನಾಯಕ್, ಎಚ್ ಎಮ್ ಸಿದ್ದರಾಮಯ್ಯ ಸ್ವಾಮಿ, ವೀರಭದ್ರಪ್ಪ ನಾಯಕ್, ಜೋಗದ ಹನುಮಂತಪ್ಪ ನಾಯಕ್, ರಾಜು ನಾಯಕ್, ಸರ್ವೇಶ್ ವಸ್ತ್ರದ, ಗ್ಯಾನೇಶ್, ಕೆ ಅಂಬಣ್ಣ ಮುಂತಾದವರು ಉಪಸ್ಥಿತರಿದ್ದರು,