ಪ್ರಯತ್ನವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ

ಪಿಡಿಒ ನೀಲಂ ಟೀ ಚಳಗೇರಿ

ಕರುನಾಡ ಬೆಳಗು ಸುದ್ದಿ

ಕುಕನೂರು, 30-  ತಾಲೂಕಿನ ಮಂಗಳೂರು ಗ್ರಾಮದಲ್ಲಿ
ಗ್ರಾಮ ಪಂಚಾಯತ್ ಕಾರ್ಯಾಲಯದ ವತಿಯಿಂದ ಕೆಪಿಎಸ್ ಶಾಲೆಯ ಆವರಣದಲ್ಲಿ 2023- 24ನೇ ಸಾಲಿನ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಂಗಳೂರು ಪಿಡಿಒ ನೀಲಂ ಟಿ ಚಳಗೇರಿ ಪ್ರಾಸ್ತವಿಕವಾಗಿ ಮಾತನಾಡಿ ಪ್ರಯತ್ನವಿಲ್ಲದೆ ಏನನ್ನು ಸಾಧಿಸಲು ಸಾಧ್ಯವಿಲ್ಲ.ಗುರುಗಳ ಮಾರ್ಗದರ್ಶನ ಪಡೆದುಕೊಂಡು ಉತ್ತಮ ರೀತಿಯ ಶಿಕ್ಷಣವನ್ನು ಶಾಲಾ ಮಕ್ಕಳು ಪಡೆಯಬೇಕು. ಜೀವನದಲ್ಲಿ ಎತ್ತರ ಗುರಿ ಸತತ ಪ್ರಯತ್ನ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ನಮ್ಮ ಗ್ರಾಮ ಪಂಚಾಯತಿಯಿಂದ ಸಾಧ್ಯವಾದಷ್ಟು ಮಕ್ಕಳಿಗೆ ಬೇಕಾದ ಸೌಲಭ್ಯವನ್ನು ಒದಗಿಸಿಕೊಡುತ್ತೇವೆ ಎಂದರು.

ಮಂಗಳೂರು ವಲಯದ ಶಿಕ್ಷಣ ಸಂಯೋಜಕರು ಶರಣಪ್ಪ ಆರ್ ಮಾತನಾಡಿ ಪ್ರತಿಯೊಂದು ಮಗು ಉತ್ತಮ ರೀತಿಯಲ್ಲಿ ಶಿಕ್ಷಣ ಪಡೆಯಬೇಕು. ಶಿಕ್ಷಣವೆಂಬ ಆಯುಧದಿಂದ ಜಗತ್ತನ್ನೇ ಗೆಲ್ಲಬಹುದು. ಮಂಗಳೂರು ಗ್ರಾಮದ ಎಲ್ಲಾ ಶಾಲಾ ಮಕ್ಕಳು ಶಿಕ್ಷಣದಲ್ಲಿ ಮುಂದಿದ್ದಾರೆ. ಇದೇ ರೀತಿ ಅವರು ಶಿಕ್ಷಣದಲ್ಲಿ ಉತ್ತಮ ರೀತಿಯ ಫಲ ಸಿಗಲಿ ಎಂದು ತಿಳಿಸಿದರು.

ಶಿಕ್ಷಕರು ಮಾರುತಿ ಹಾದಿಮನಿ ಮಾತನಾಡಿ ಮಕ್ಕಳು ಹಕ್ಕುಗಳ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳಿ, ಜೀವನದಲ್ಲಿ ಶಿಕ್ಷಣ ಜ್ಞಾನ ಪ್ರತಿಯೊಬ್ಬರಿಗೂ ಅವಶ್ಯಕ. ಗ್ರಾಮ ಪಂಚಾಯತಿಯಿಂದ ಅನೇಕ ಸದುಪಯೋಗ ಪಡೆದುಕೊಳ್ಳಿ ಎಂದರು.

ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆಯಲ್ಲಿ
28.12.2023 ರಂದು ಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಶಾಲೆಯ 4,5,6, ನೇ ತರಗತಿಗಳ ವಿದ್ಯಾರ್ಥಿಗಳಿಗೆ ನಡೆದ ಗಣಿತ ಕಲಿಕಾ ಸ್ಪರ್ಧೆಯಲ್ಲಿ ಪ್ರಥಮ ದ್ವಿತೀಯ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಪ್ರಶಸ್ತಿ ಪತ್ರವನ್ನು ನೀಡಲಾಯಿತು.

ಜೊತೆಗೂಡಿ ಶಾಲೆಯ ವಿದ್ಯಾರ್ಥಿಗಳು ಶೌಚಾಲಯ, ನೀರಿನ, ಆಟದ ಮೈದಾನ, ಕಾಂಪೌಂಡ್, ಶಿಕ್ಷಕರ, ಶಾಲೆಯ ಸ್ವಚ್ಛತೆಯ ಬಗ್ಗೆ, ಅಂಗನವಾಡಿಗಳ ಸಮಸ್ಯೆಯ ಬಗ್ಗೆ ಇನ್ನಿತರ ವಿಷಯಗಳ ಕುರಿತುವಿದ್ಯಾರ್ಥಿಗಳು ಅಧಿಕಾರಿಗಳ ಮುಂದೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

ಇದಕ್ಕೆ ಸಕರಾತ್ಮಕವಾಗಿ ಪಿಡಿಒ ಅವರು ಸ್ಪಂದಿಸಿ
ಕೆಲವೊಂದಿಷ್ಟು ಅಲ್ಲೇ ಪರಿಹಾರ ನೀಡಿ ಇನ್ನುಳಿದವುಗಳನ್ನು ಕೆಲವೇ ದಿನಗಳಲ್ಲಿ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಸಕ್ರಪ್ಪ ಚಿನ್ನುರ, ಉಪಾಧ್ಯಕ್ಷರು ಅನ್ನಪೂರ್ಣ ಸುರೇಶ್ ಮ್ಯಾಗಳೇಶಿ, ಸದಸ್ಯರು ಯಂಕಣ್ಣ ಉಪ್ಪಾರ್, ಶರಣಪ್ಪ ಎಮ್ಮಿ, ಅಕ್ಕಮಹಾದೇವಿ ಉಮಚಗಿ ವನಜಾಕ್ಷಿ ಟಿ, ಮಂಗಳೂರು ವಲಯದ ಸಿಆರ್‌ಪಿ ರವಿ ಮಳಗಿ, ಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಶಾಲೆಯ ಶಿಕ್ಷಕರು, ಕಾರ್ಯಕ್ರಮದ ಕೇಂದ್ರ ಬಿಂದುಗಳು ಮುದ್ದು ವಿದ್ಯಾರ್ಥಿಗಳು. ಗ್ರಾಮ್ ಪಂಚಾಯತ್ ಸಿಬ್ಬಂದಿ ವರ್ಗದವರು, ಅಂಗನವಾಡಿ ಕಾರ್ಯಕರ್ತೆಯರು, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!