
9 ರಿಂದ ಹಂಪಿ ಕನ್ನಡ ವಿವಿಯಲ್ಲಿ 38ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ
ಕರುನಾಡ ಬೆಳಗು ಸುದ್ದ
ವಿಜಯನಗರ, 7- ಕರ್ನಾಟಕ ಇತಿಹಾಸ ಅಕಾಡೆಮಿ ಸಹಯೋಗದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನವೆಂಬರ್ ೯,೧೦ ಮತ್ತು ೧೧ ರಂದು ೩೮ ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರಣ್ಯ ಆವರಣದ ಮಂಟಪ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲರವರು ಸಮ್ಮೇಳನ ಉದ್ಘಾಟಿಸುವರು. ‘ಇತಿಹಾಸ ದರ್ಶನ’ ಸಂಪುಟವನ್ನು ಶಾಸಕರಾದ ಹೆಚ್.ಆರ್.ಗವಿಯಪ್ಪನವರು ಬಿಡುಗಡೆಗೊಳಿಸುವರು. ಶಾಸನ ತಜ್ಞ, ಸಂಶೋಧಕ, ಹಿರಿಯ ವಿದ್ವಾಂಸ ಡಾ.ಆರ್.ಶೇಷಶಾಸ್ತ್ರೀ ಆವರು ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸುವರು. ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿಯವರು ಸದಸ್ಯರ ಪುಸ್ತಕಗಳನ್ನು ಬಿಡುಗಡೆಗೊಳಿಸುವರು ಎಂದು ಮಾಹಿತಿ ನೀಡಿದರು.
ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿ ಮಾತನಾಡಿ, ನ.೧೧ ರಂದು ಸಮಾರೋಪ ಸಮಾರಂಭದಲ್ಲಿ ಶ್ರೀಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನಮಠದ ಕೊಟ್ಟೂರು ಬಸವಲಿಂಗಮಹಾಸ್ವಾಮೀಜಿಯವರು ಪಿಎಚ್‌ಡಿ ಮತ್ತು ಡಿ.ಲಿಟ್ ಪದವೀಧರ ಸದಸ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮೂರು ದಿನಗಳ ಕಾರ್ಯಕ್ರಮದಲ್ಲಿ ಎರಡೂ ವೇದಿಕೆಯಲ್ಲಿ ಸಂಶೋಧನಾ ಗೋಷ್ಠಿಗಳು ಜರುಗಲಿವೆ. ಕರ್ನಾಟಕ ಇತಿಹಾಸ ಅಕಾಡೆಮಿಯ ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಸದಸ್ಯರು ಭಾಗವಹಿಸಲಿದ್ದಾರೆ ಎಂದರು.
ಈ ವೇಳೆಯಲ್ಲಿ ಕುಲಸಚಿವರಾದ ಡಾ.ವಿಜಯ್ ಪೂಣಚ್ಚ ತಂಬAಡ, ಕರ್ನಾಟಕ ಇತಿಹಾಸ ಅಕಾಡೆಮಿ ಉಪಾಧ್ಯಕ್ಷರಾದ ಪ್ರೊ.ಲಕ್ಷಣ್ ತೆಲಗಾವಿ, ಅಧ್ಯಯನಾಂಗ ವಿಭಾಗದ ನಿರ್ದೇಶಕರಾದ ಡಾ.ಅಮರೇಶ್ ಯತಗಲ್, ಪ್ರಾಧ್ಯಾಪಕರಾದ ಡಾ.ಎಸ್.ವೈ.ಸೋಮಶೇಖರ್, ಮಾಹಿತಿ ಕೇಂದ್ರದ ಉಪನಿರ್ದೇಶಕಿ ಡಾ.ಡಿ.ಮೀನಾಕ್ಷಿ ಇದ್ದರು.
ಪ್ರಶಸ್ತಿಗಳು ಮತ್ತು ಪುರಸ್ಕೃತರು : ‘ಇತಿಹಾಸ ಸಂಸ್ಕೃತಿಶ್ರೀ’ ಪ್ರಶಸ್ತಿಗೆ ಪ್ರೊ.ಕೆ.ಆರ್.ನರಸಿಂಹನ್ ಹಾಗೂ ಡಾ.ಹರಿಹರ ಶ್ರೀನಿವಾಸರಾವ್‌ರನ್ನು ಆಯ್ಕೆ. ಇವರಿಗೆ ವರಲಕ್ಷ್ಮಿ ಮತ್ತು ಬಿ.ಆರ್.ಅಶೋಕ್ ಕುಮಾರ್ ಅವರು ತಮ್ಮ ತಾಯಿ-ತಂದೆಯವರಾದ ಬೈಸಾನಿ ರುಕ್ಕಣಮ್ಮ-ರತ್ನಂಶೆಟ್ಟಿ ಸ್ಮರಣೆಗೆ ಪ್ರಶಸ್ತಿ ನೀಡುತ್ತಿದ್ದಾರೆ. ಡಾ.ಬಾ.ರಾ.ಗೋಪಾಲ್ ಶಾಸನ ದತ್ತಿ ಪ್ರಶಸ್ತಿಗೆ ವಿಜಯಪುರದ ಡಾ.ಎಸ್.ಕೆ.ಕೊಪ್ಪ ಆಯ್ಕೆ. ಅರಸೀಕೆರೆ ಮೇಲಣಮಠದ ಎಸ್.ಸಿದ್ದಣ್ಣಯ್ಯ ಮತ್ತು ಗಂಗಮ್ಮ ಸ್ಮಾರಕ ಟ್ರಸ್ಟ್ ‘ನೊಳಂಬಶ್ರೀ’ ಪ್ರಶಸ್ತಿಗೆ ಬೆಂಗಳೂರಿನ ಡಾ.ಟಿ.ವಿ.ನಾಗರಾಜ ಆಯ್ಕೆ. ವಿ.ಗೌರಮ್ಮ, ಗಂಗಾಧರಯ್ಯ ಇವರ ಹೆಸರಿನಲ್ಲಿ ಅವರ ಮಕ್ಕಳಾದ ಡಾ. ಎಂ.ಜಿ.ನಾಗರಾಜ್, ಪದ್ಮ ವಿರೂಪಾಕ್ಷಯ್ಯ ಮತ್ತು ಡಾ.ಎಂ.ಜಿ.ಚAದ್ರಕಾAತ್ ಇವರು ಸ್ಥಾಪಿಸಿರುವ ದತ್ತಿಯಿಂದ ‘ಸಂಶೋಧನಶ್ರೀ’ ಪ್ರಶಸ್ತಿಗೆ ಬೆಂಗಳೂರು ಸಂಶೋಧಕ ಆದಪ್ಪ ಪಾಸೋಡಿ ಆಯ್ಕೆ. ಕರ್ನಾಟಕ ನಾಯಕ ಅರಸರ ಇತಿಹಾಸ ಮತ್ತು ಸಂಸ್ಕೃತಿ ಸಂಶೋಧನೆಯಲ್ಲಿ ಸಾಧನೆಗೈದ ವಿದ್ವಾಂಸರಿಗೆ ಡಾ.ಲಕ್ಷ್ಮಣ್ ತೆಲಗಾವಿರವರು ಸ್ಥಾಪಿಸಿರುವ ದತ್ತಿಯಿಂದ ‘ನಾಯಕ’ ಪ್ರಶಸ್ತಿಗೆ ಮೂಡುಬಿದರೆಯ ಹಿರಿಯ ವಿದ್ವಾಂಸ ಡಾ.ಪುಂಡಿಕ್ಯಾ ಗಣಪಯ್ಯ ಭಟ್ ಆಯ್ಕೆ. ಕೊಪ್ಪಳದ ಬಿ.ಸಿ. ಪಾಟೀಲ ಟ್ರಸ್ಟ್ ಸ್ಥಾಪಿಸಿರುವ ‘ಸುಮಂಗಲ ಪಾಟೀಲ ಮಹಿಳಾ’ ಪ್ರಶಸ್ತಿಗೆ ಬೆಂಗಳೂರು ಸಂಶೋಧಕಿ ಡಾ.ಸ್ಮಿತಾರೆಡ್ಡಿ ಆಯ್ಕೆ. ಡಾ.ಅರ್ಚನಾ ಕಾಮತ್‌ರು ಸ್ಥಾಪಿಸಿರುವ ‘ಸೂರ್ಯಕೀರ್ತಿ’ ಪ್ರಶಸ್ತಿಗೆ ನಾಗಮಂಗಲ ಸಂಶೋಧಕ ಮಹಮದ್ ಕಲೀಂಉಲ್ಲ ಆಯ್ಕೆ, ಮುಂಬೈನ ಡಾ.ಸಿ.ಆರ್,ಶ್ಯಾಮಲರವರು ಸ್ಥಾಪಿಸಿದ ‘ಡಾ.ಶ್ರೀನಿವಾಸ ಹಾವನೂರ ಸ್ಮರಣಾರ್ಥ’ ಪ್ರಶಸ್ತಿಗೆ ಧಾರವಾಡದ ಡಾ.ಮಹೇಶ್ ಕುಮಾರ್.ಹ.ಪಾಟೀಲ ಆಯ್ಕೆ, ಡಾ.ಬೆಂ.ಶಾ.ಶ್ಯಾಮಲಾ ರತ್ನಕುಮಾರಿರವರು ಸ್ಥಾಪಿಸಿರುವ ‘ಡಾ.ಪ್ರತಿಭಾ ಚಿಣ್ಣಪ್ಪ ಸ್ಮರಣಾರ್ಥ’ ಪ್ರಶಸ್ತಿಗೆ ಬಾಗಲಕೋಟೆಯ ಡಾ.ಯಾದಪ್ಪ ಪರದೇಶಿ ಆಯ್ಕೆ, ಡಾ.ಲಕ್ಷ್ಮಣ್ ತೆಲಗಾವಿರವರು ಸ್ಥಾಪಿಸಿರುವ ಇತಿಹಾಸ ಸಂಶೋಧನ ಪ್ರಸಕ್ತ ಹುಲ್ಲೂರು ಶ್ರೀನಿವಾಸ ಜೋಯಿಸ ಸ್ಮಾರಕ ಅತ್ಯುತ್ತಮ ಗ್ರಂಥ ಪ್ರಶಸ್ತಿಗೆ ಚಿತ್ರದುರ್ಗದ ಡಾ.ಸಿ.ಎಂ.ತಿಪ್ಪೇಸ್ವಾಮಿರವರ ‘ರಕ್ಕಸದಂಗಡಿ ಕದನ’ ಗ್ರಂಥವನ್ನು ಆಯ್ಕೆ. ಪುಣೆಯ ಡೆಕ್ಕನ್ ಕಾಲೇಜು ಖ್ಯಾತ ಪುರಾತತ್ವವಿದರಾದ ಡಾ.ಕೆ.ಪದ್ದಯ್ಯರವರು ಸ್ಥಾಪಿಸಿರುವ ‘ಡಾ.ಎಂ.ಎಚ್.ಕೃಷ್ಣ ಮೆರಿಟ್ ಅವಾರ್ಡ್’ಗೆ ತುಮಕೂರು ಹಿರಿಯ ವಿಜ್ಞಾನಿ ಬಿ.ಎಸ್.ಸೋಮಶೇಖರ್‌ರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.