
437 ನೇ ಖಾದರ್ ಶಾ ಮೌಲಾ ಉರುಸ್ ಮುಬಾರಕ್
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,17- ನಗರದ ಹಜರತ್ ಸೈಯದ್ ಶಾ ಅಬ್ದುಲ್ ಖಾದರ್ ಖಾದ್ರಿ ಅಲ್ ಮಾರುಫ್ ಹಜರತ್ ಸೈಯದ್ ಶಾ ಖಾದರ್ ಶಾ ಮೌಲಾ ಖಾದ್ರಿ ರೆಹಮತುಲ್ಲಾ ಅಲೈಹಿ ಹಜರತ್ ಸೈಯದ್ ಶಾ ರಜತ್ ಬಾದಷಾ ರಜ್ಜಬ್ ಅಲಿ ಶಾ ಖಾದ್ರಿ ಅವರ 437ನೇ ಗಂಧ ಮಹೋತ್ಸವ ಉರುಸ್ ಮುಬಾರಕ್ ಹಾಗೂ ಜಿಯಾರತ್ ಶರೀಫ್ ಹಜರತ್ ಸೈಯದ್ ಶಾ ಮೋಹೀದ್ದೀನ್ ಖಾದ್ರಿ ಸಾಹೇಬ್ ಮುತವಲ್ಲಿ ಸಜ್ಜಾದ ನಶೀನ್ ಅವರ ಘನ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ಅಲ್ಲಾಹನ ರಸೂಲರು ಜಗತ್ ಗುರುಗಳು ಸೂಫಿ ಸಂತ ಶರಣ ಮಹಾತ್ಮರು ಹಿರಿಯರು ಸಾಮಾಜಿಕ ಸುಧಾರಕರಾಗಿ ಸರ್ವ ಜನಾಂಗದವರಿಗೂ ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ನೆಲೆಗೊಂಡಿದ್ದಾರೆ ಗುರು ಹಿರಿಯರ ಆದರ್ಶ ಗುಣ ತತ್ವ ಸಿದ್ಧಾಂತಗಳು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಬೇಕು ಎಂದು ಅವರು ಕರೆ ನೀಡಿದರು ಮತ್ತು ಆಶೀರ್ವಚನ ನೀಡಿದರು ಸಿರುಗುಪ್ಪ ನಗರದ ಸೌದಾಗರ್ ಮೊಹಲ್ಲ ಹಜರತ್ ಸೈಯದ್ ಶಾ ಅಬ್ದುಲ್ ಖಾದರ್ ಖಾದ್ರಿ ಉರೂಫ್ ಜಿಗಳಿ ಪೀರಾ ಸಾಹೇಬ್ ಖಾದ್ರಿ ಇವರ ನಿವಾಸದಿಂದ ಸಂದಲ್ ಜುಲೂಸ್ ಹೊರಟು ಮುಖ್ಯ ರಸ್ತೆಗಳಿಂದ ದರ್ಗಾ ಆಸ್ಥಾನಕ್ಕೆ ತಲುಪಿತು ಗಂಧ ಪುಷ್ಪ ಗಲಫ್ ಹೂ ಚಾದರ್ ಗಳೊಂದಿಗೆ ಖುರಾನ್ ಫಾತೇಹ ಓದಿಕೆ ಸಲಾತೋ ಸಲಾಂ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು ಮತ್ತು ಖಾವಾಲಿ ಕಾರ್ಯಕ್ರಮ ಜರುಗಿತು ದರ್ಗಾದ ಮುಜಾವರ್ ಹಜರತ್ ಎ ಟೈಲರ್ ಮೆಹಬೂಬ್ ಸುಭಾನ್ ಸಾಹೇಬ್ ಹಾಗೂ ಅವರ ಮಕ್ಕಳು ಮತ್ತು ಉರುಸ್ ಕಮಿಟಿಯ ಪದಾಧಿಕಾರಿಗಳು ಸರ್ವರನ್ನು ಸ್ವಾಗತ ಬಯಸಿದರು ಹಾಫೀಜ್ ಫಾರುಕ್ ಆಶ್ರಫಿ, ಬಳ್ಳಾರಿ ಜಿಲ್ಲಾ ನದಾಫ್ ಪಿಂಜಾರ್ ಸಂಘದ ಮಾಜಿ ಅಧ್ಯಕ್ಷ ವೈ ಭಾಷಾ ಸಾಬ್ ,ಜಿಲ್ಲಾ ವಕ್ಫ್ ಮಾಜಿ ಸದಸ್ಯ ಅಲ್ ಹಾಜ್ ಅಬ್ದುಲ್ ನಬಿ ಚಿಸ್ತಿ ನಿಜಾಮಿ, ಸರ್ ಗುರು ಸೈಯದ್ ಶೆಕ್ಷಾವಲಿ, ಡಬಲ್ ಬಾಂಡ್ ಹಾಜಿ ಟಿ.ಜಿ ಅಬ್ದುಲ್ ಗನಿ ನಿಜಾಮಿ, ಸೌದಾಗರ್ ಮಸೀದಿಯ ಅಧ್ಯಕ್ಷ ಮಕಾಂದಾರ್ ಮೆಹಬೂಬ್ ಬಾಷಾ ,ಸೈಯದ್ ಜಿಲಾನ್ ಖಾದ್ರಿ, ಟೈಲರ್ ಕೆ ಅಬ್ದುಲ್ ಗನಿ ಆಶ್ರಫಿ, ಹಾಜಿ ಮೊಹಮ್ಮದ್ ಇಬ್ರಾಹಿಂ ನಿಜಾಮಿ, ಮೊಹಮ್ಮದ್ ನೌಶಾದ್ ಅಲಿ ನಿಜಾಮಿ, ಮೊಹಮ್ಮದ್ ನಿಜಾಮುದ್ದೀನ್ ,ಹಂಡಿ ಹುಸೇನ್ ಸಾಬ್, ಡಿ ಅಬ್ದುಲ್ ಗಫೂರ್, ಕಾಂಗ್ರೆಸ್ ಮುಖಂಡ ಟಿ ನಜೀರ್, ಗಡ್ಡೆ ಖಾದರ್ ಬಾಷಾ ಖಾದ್ರಿ ದರ್ಗಾದ ಬಿರಾದಾರ್ ಸೈಯದ್ ಶಾ ಅಮೃಲ್ಲಾ ಖಾದ್ರಿ ಸಾಹೇಬ್ ನೂರಾರು ಭಕ್ತಾದಿಗಳು ಭಾಗವಹಿಸಿ ಜಿಯಾರತ್ ದರ್ಶನ ಪಡೆದರು.