WhatsApp Image 2024-03-01 at 8.20.26 AM (2)

ಸಮರ್ಪಕ ಸೇವಾ ಟ್ರಸ್ಟ್, ಮುಕುಲ್ ಮಾಧವ್ ಫೌಂಡೇಶನ್ ಹಾಗೂ ಪಿನೋಲೆಕ್ಸ ಪೈಪ್ ಕಂಪನಿಯವರಿಗೆ ಅಭಿನಂದನ ಕಾರ್ಯಕ್ರಮ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ,1- ಸರಕಾರಿ‌ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಳೂಟಗಿಯಲ್ಲಿ ಸಮಗ್ರ ಶಾಲಾ ಅಭಿವೃದ್ದಿ ಕಾರ್ಯಕ್ರಮದಡಿಯಲ್ಲಿ 44 ಶಾಲೆಗಳಿಗೆ 720 ಡೆಸ್ಕ್ 30 RO ಪ್ಲಾಂಟ್ ನೀಡಿದ ಸಮರ್ಪಕ ಸೇವಾ ಟ್ರಸ್ಟ್ ಹಾಗೂ ಮುಕುಲ್ ಮಾಧವ್ ಫೌಂಡೇಶನ್ ಹಾಗೂ ಪಿನೋಲೆಕ್ಸ ಪೈಪ್ ಕಂಪನಿಯವರಿಗೆ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಶ್ರೀ ರಾಜಣ್ಣ ಜೀ ಮ್ಯಾನೇಜಿಂಗ್ ಟ್ರಷ್ಠಿ, ಸಮರ್ಪಕ ಸೇವಾ ಟ್ರಸ್ಟ್ ಮತ್ತು ಶ್ರೀ ಪ್ರಕಾಶ್ ಬೀಳಿಗಿ ಫಿನೋಲೆಕ್ಸ್ ಪೈಪ್ಸ್ ಕಂಪನಿ ಉತ್ತರ ಕರ್ನಾಟಕ ಪ್ರಮುಖರು ಹಾಗೂ ಶ್ರೀ ಸುಧಾಕರ್ ಜೀ ರಾಜ್ಯ ಸಂಚಾಲಕರು ಹಿಂದು ಸೇವಾ ಪ್ರತಿಷ್ಠಾನ ಬೆಂಗಳೂರು ಉಪಸ್ಥಿತರಿದ್ದರು.

ಶ್ರೀ ರಾಜಣ್ಣ ಜೀ ಪ್ರಾಸ್ತವಿಕವಾಗಿ ಸಮರ್ಪಕ ಸೇವಾ ಟ್ರಸ್ಟ್ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೊಪ್ಪಳದ ಡಿ.ಡಿ.ಪಿ.ಐ..ರವರಾದ ಶ್ರೀ ಶ್ರೀಶೈಲ ಬಿರಾದರ್ ನೆರವೇರಿಸಿ, ಮುಕುಲ್ ಮಾಧವ್ ಫೌಂಡೇಶನ್ ಮತ್ತು ಫಿನೊಲೆಕ್ಸ್ ಕಂಪನಿ, ಸಮರ್ಪಕ ಸೇವಾ ಟ್ರಸ್ಟ್ ನ ಕಾರ್ಯವನ್ನು ಮುಕ್ತವಾಗಿ ಶ್ಲಾಘಿಸಿದರು ಮತ್ತು ಮಕ್ಕಳ ಸರ್ವತೋಮುಖ ಬೆಳೆವಣಿಗೆಗೆ ಸಹಾಯಕವಾಗಲಿದೆ ಎಂದರು.ಹಾಗೆ, ಮುಖ್ಯ ಅತಿಥಿಗಳಾದ ಶ್ರೀ ಪ್ರಕಾಶ್ ಬೀಳಿಗಿ ಯವರು ಫಿನೋಲೆಕ್ಸ್ ಪೈಪ್ಸ್ ಕಂಪನಿಯ ಕಾರ್ಯ ವೈಖರಿ ಹಾಗೂ ರೈತರಿಗೆ ದೊರೆಯುವ ಗುಣಮಟ್ಟದ ಪೈಪ್ ಗಳ ಕುರಿತು ಮಾತನಾಡಿದರು.

ಇನ್ನೊರ್ವ ಅತಿಥಿಗಳಾದ ಶ್ರೀ ಸುಧಾಕರ್ ಜೀ ಯವರು ಯಲಬುರ್ಗಾ ತಾಲೂಕಿನಲ್ಲಿ 30 ಗ್ರಾಮಗಳಲ್ಲಿ 32 ಮನೆ ಪಾಠ ಶಾಲೆಗಳ ಮೂಲಕ ಮಕ್ಕಳಿಗೆ ಸಂಸ್ಕಾರ ಹಾಗೂ ರೈತರಿಗೆ ಸೋಲಾರ್ ದೀಪ ಅಳವಡಿಕೆ ಹೀಗೆ ಹತ್ತು ಹಲವು ಸೇವೆಗಳಲ್ಲಿ ತೊಡಗಿರುವ ಹಿಂದು ಸೇವಾ ಪ್ರತಿಷ್ಠಾನದ ಕಾರ್ಯವನ್ನು ಕುರಿತು ಮಾತನಾಡಿದರು.

ಅತಿಥಿಗಳಾಗಿ ಶ್ರೀ ಅಶೋಕ ಗೌಡರ್ ಸಮನ್ವಯಾಧಿಕಾರಿಗಳು ಯಲಬುರ್ಗಾ ಶ್ರೀ ಅಂದಾನಗೌಡ ವೀರನಗೌಡ ಪೋಲಿಸ್ ಪಾಟೀಲ್ ಇವರು ಗ್ರಾಮದ ಪರವಾಗಿ ಕಂಪನಿಯವರ ಸೇವೆಯನ್ನು ಹಾಡಿ ಹೊಗಳಿದರು.ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಮತಿ ಶಾಂತವ್ವ ಪುರ್ತಗೇರಿ ಶರೀಪಸಾಬ್ ವಾಲೀಕಾರ ಎಸ್ ಡಿ.ಎಂ.ಸಿ.ಅಧ್ಯಕ್ಷರು ಸ. ಪ್ರೌ ಶಾಲೆ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಏಕಪ್ಪ ಪಕೀರಪ್ಪ ಕೊನವಾಲದ.ಎಸ್ ಡಿ.ಎಂ.ಸಿ.ಅಧ್ಯಕ್ಷರು ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ಶ್ರೀ ನಿಂಗಜ್ಜ ಬೇವೂರ್ ಶಿಕ್ಷಣ ಪ್ರೇಮಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ರೂವಾರಿಗಳು ಶ್ರೀ ಈರನಗೌಡ ಈಳಿಗೇರ್ ತಾಲೂಕ ಸೇವಾ ಮಿತ್ರ, ಶ್ರೀ ಪ್ರಕಾಶ್ ಪೂಜಾರ್ ಗ್ರಾಮ ಸೇವಾ ಮಿತ್ರರು ಹಾಗೂ ಹಿಂದು ಸೇವಾ ಪ್ರತಿಷ್ಠಾನದ ಕೊಪ್ಪಳ ಮತ್ತು ಬಳ್ಳಾರಿ ವಿಭಾಗ ಸಂಚಾಲಕರು ಶ್ರೀ ಭೀಮರಾವ್ ದೇಶಪಾಂಡೆ ಜೀ, ಹಿಂದು ಸೇವಾ ಪ್ರತಿಷ್ಠಾನದ ಕಾರ್ಯಕರ್ತರು,ಹಾಗೂ ವಿವಿಧ ಶಾಲೆಗಳಿಂದ ಹಾಗಮಿಸಿದ ಶಾಲಾ ಶಿಕ್ಷಕರ ಬಳಗ, ಎಸ್ ಡಿ.ಎಂ.ಸಿ.ಅಧ್ಯಕ್ಷರು ಸರ್ವ ಸದಸ್ಯರು ಮುದ್ದು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಶಾಲೆಯ ಗುರುಗಳಾದ ಪರಮೇಶ ಚಿಂತಾಮಣಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.

ಶ್ರೀಮತಿ ರೇಣುಕಾ ಹುರುಳಿ ಕಚೇರಿ ವ್ಯವಸ್ಥಾಪಕರು ಹಿಂದು ಸೇವಾ ಪ್ರತಿಷ್ಠಾನ ಕೊಪ್ಪಳ ಇವರು ವಂದಿಸಿದರು.

Leave a Reply

Your email address will not be published. Required fields are marked *

error: Content is protected !!