
5 ಮತ್ತು 6 ಜಲ ಶಕ್ತಿ ಮತ್ತು ರೇಲ್ವೆ ಖಾತೆಯ ಸಚಿವರ ಪ್ರವಾಸ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 4 ಜಲ ಶಕ್ತಿ ಮತ್ತು ರೇಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರು ಅ.೦೬ ರಂದು ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು.
೫ ರಂದು ರಾತ್ರಿ ೦೯.೫೦ ಗಂಟೆಗೆ ಬೆಂಗಳೂರಿನಿ0ದ ರೈಲ್ವೇ ಮೂಲಕ ಬಳ್ಳಾರಿಗೆ ಪ್ರಯಾಣಿಸುವರು. ೬ ರಂದು ಬೆಳಿಗ್ಗೆ ೦೫.೫೦ ಗಂಟೆಗೆ ಬಳ್ಳಾರಿಗೆ ಆಗಮಿಸುವರು. ಬಳಿಕ ಬೆಳಿಗ್ಗೆ ೧೧ ಗಂಟೆಗೆ ನಗರದ ಜಿಲ್ಲಾ ಪಂಚಾಯತ್‌ನ ಸಭಾಂಗಣದಲ್ಲಿ ರೈಲ್ವೇ ಕಾಮಗಾರಿಗಳಿಗೆ ಸಂಬ0ಧಿಸಿದ0ತೆ ಸಭೆ ನಡೆಸುವರು.
ನಂತರ ಮಧ್ಯಾಹ್ನ ೦೨ ಗಂಟೆಗೆ ಬಳ್ಳಾರಿಯಿಂದ ಹೊರಟು, ಮಧ್ಯಾಹ್ನ ೦೩ ಗಂಟೆಗೆ ಸಿರುಗುಪ್ಪ ತಾಲ್ಲೂಕಿನ ಸಿರಿಗೇರಿ ಗ್ರಾಮದಲ್ಲಿ ನಾಗನಾಥೇಶ್ವರ ದೇವಾಲಯ ಆವರಣದಲ್ಲಿ ಏರ್ಪಡಿಸಲಾದ ಡಾ.ಶ್ರೀ ಶ್ರೀ ಶಿವಕುಮಾರ ಸ್ವಾಮಿಜೀ ಸಿದ್ದಗಂಗಾ ಆಧಾರಿತ ಸಾಕ್ಷö್ಯ ಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಬಳಿಕ ಮಧ್ಯಾಹ್ನ ೦೩.೪೫ ಗಂಟೆಗೆ ಸಿರಿಗೇರಿ ಗ್ರಾಮದಿಂದ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿಗೆ ಪ್ರಯಾಣಿಸುವರು. ಸಿಂಧನೂರಿನಲ್ಲಿ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ಸಂಜೆ ೦೭ ಗಂಟೆಯಿAದ ಸಿಂಧನೂರಿನಿ0ದ ವಾಪಾಸ್ಸಾಗಿ ಬಳ್ಳಾರಿಗೆ ಆಗಮಿಸುವರು. ಬಳಿಕ ರಾತ್ರಿ ೧೦.೫೫ ಗಂಟೆಗೆ ರೈಲ್ವೇ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು ಎಂದು ಸಚಿವರ ಸಹಾಯಕ ಆಪ್ತ ಕಾರ್ಯದರ್ಶಿಯವರು ತಿಳಿಸಿದ್ದಾರೆ.
ರೈಲ್ವೇ ಕಾಮಗಾರಿಗಳಿಗೆ ಸಂಬ0ಧಿಸಿದ0ತೆ ಸಭೆಯು ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆಯಲಿದೆ.