
ಗಂಗಾವತಿ : ಜಿಲ್ಲಾಮಟ್ಟದ ಕರಾಟೆ ಕ್ರೀಡೆಯಲ್ಲಿ ೫ ವಿದ್ಯಾರ್ಥಿಗಳು ಆಯ್ಕೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 27- ಕರ್ನಾಟಕ ಸರಕಾರ ಯುವ ಸಬಲೀಕರಣ ಮತ್ತು ಕೊಪ್ಪಳ ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಅ.೨೬ರಂದು ಕೊಪ್ಪಳ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಕರಾಟೆ ಸ್ಪರ್ಧೆ ೨೦೨೪-೨೫ರ ೧೪ ಮತ್ತು ೧೭ ವಯೋಮಿತಿಯ ಶಾಲಾ ಬಾಲಕ, ಬಾಲಕಿಯರ ಜಿಲ್ಲಾ ಮಟ್ಟದ ವಿಶೇಷ ಕ್ರೀಡೆ ಕರಾಟೆ ಸ್ಪರ್ಧೆಯು ಗಂಗಾವತಿಯ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆಯಿತು.
ಬಿಡಿಎಸ್ ಮಾರ್ಷಲ್ ಆರ್ಟ್ಸ್ ಸಂಸ್ಥೆ ಹಾಗೂ ಸಮೃದ್ಧಿ ಸ್ಪೋರ್ಟ್ಸ್ ಅಕಾಡೆಮಿ ಸಂಸ್ಥೆಯ ೧೬ ವಿದ್ಯಾರ್ಥಿಗಳು ಭಾಗವಹಿಸಿದ್ದರು ಅದರಲ್ಲಿ ಐದು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಎಂದು ಸಂಸ್ಥೆಯ ಸಂಸ್ಥಾಪಕ ತರಬೇತಿದಾರ ಷಣ್ಮುಖಪ್ಪ ತಿಳಿಸಿದ್ದಾರೆ.
ವಿದ್ಯಾರ್ಥಿಗಳಾದ ಸಿಂಚನ, ಹನುಮೇಶ್, ರಂಜಿತ್ ಕುಮಾರ್ ಕಾಶಿ, ಮಲ್ಲಿ, ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹಾಗೂ ಇನ್ನೋರ್ವ ವಿದ್ಯಾರ್ಥಿ ಸಮರ್ಥ ಕೆ ವಡ್ಡರಟ್ಟಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಹ ತರಬೇತುದಾರರಾದ ರಂಗಮ್ಮ ಷಣ್ಮುಖಪ್ಪ, ಪಾಲಕರಾದ ಪ್ರವೀಣ್ ಕುಮಾರ್, ಶಂಕರ್ ಕೆ, ಹನುಮೇಶ್ ನಾಗೇಶ್‌ರಾವ್ ಸೇರಿದಂತೆ ಸಹವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿದ್ದಾರೆ.