ಗವಿಮಠ ಜಾತ್ರೆ – 2024
ಪಾದಯಾತ್ರೆ ಮಲಕ ಮಠಕ್ಕೆ ಬಂದ ಸಹರ್ಸಾರು ಭಕ್ತರು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 27 – ಮಹಾ ಮಹಿಮ ಗತಿ ಸಿದ್ಧೇಶ್ವರ ಜಾ ತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಮಹಾರಥೋತ್ಸವಕ್ಕೆ ಪಾದಯಾತ್ರೆ ಮೂಲಕ ಆಗಮಿ ಸಿದ್ದು ವಿಶೇಷವಾಗಿತ್ತು.
ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳಿಂದ ರಾತ್ರಿ ಇಡಿ ಪಾದಯಾತ್ರೆಗೆ ಬಂದ ಭಕ್ತರು ಶ್ರೀ ಗವಿಸಿದ್ಧೇಶ್ವರನ ಕತೃ ಗದ್ದುಗೆಯ ದರ್ಶನ ಪಡೆದು ಪುನಿತರಾ ದರು.
ಶನಿವಾರ ಸಂಜೆ ರಥೋತ್ಸವದ ಹಿನ್ನಲೆಯಲ್ಲಿ ಗ್ರಾಮೀಣ ಭಾಗದಿಂದ ಪಾದಯಾತ್ರಿಗಳ ಆಗಮನ ಇರುವೇಯ ಸಾಲಿ ನಂತೆ ಭಾಸವಾಗುತ್ತಿತ್ತು.
ನೀರಿನ ವ್ಯವಸ್ಥೆ: ಪಾದ ಯಾತ್ರಿಗಳಿಗೆ ಭಕ್ತರಿಂದ ಕುಷ್ಟಗಿ ರಸ್ತೆ, ಗದಗ ರಸ್ತೆ, ಹೊಸಪೇಟೆ ರಸ್ತೆ, ಸಿಂದೋಗಿ ರಸ್ತೆ ಸೇರಿದಂತೆ ವಿವಿಧಡೆ ಕೊಪ್ಪಳ ನಗರ ಪ್ರದೇಶದ ಕಡೆ ಕುಡಿಯುವ ನಿರು ನೀಡಿ ಪಾದಯಾತ್ರೆ ನಿರತ ಭಕ್ತರನ್ನು ಸ್ವಾಗತಿಸಿದ್ದು ವಿಶೇಷ ವಾಗಿತ್ತು.
ದರ್ಶನಕ್ಕೆ ಸರದಿ: ಶ್ರೀ ಗವಿಸಿದ್ಧೇಶ್ವರ ಕತೃ ಗದ್ದುಗೆ ದರ್ಶನಕ್ಕೆ ಸೋಮ ವಾರ ರಾತ್ರಿಯಿಂದ ಸರದಿಯಲ್ಲಿ ನಿಮತು ದರ್ಸನ ಪಡೆದು ಪುನಿತರಾದರೇ ರಾತ್ರಿ ಇಡಿ ಗವಿಸಿದ್ಧೇಶ್ವರನಿಗೆ ನೈವೇಧ್ಯ ವಿಶೇಷ ಪೂಜೆಗಳು ಜರುಗಿ ದವು.
ವದೀರ್ಘದಂಡ ನಮಸ್ಕಾರ: ಸಹಸ್ರಾರು ಭಕ್ತರಿಂದ ಶುಕ್ರವಾರ ರಾತ್ರಿಯಿಂದಲೆ ದೀರ್ಘ ದಂಡ ನಮಸ್ಕಾರದಲ್ಲಿ ಭಕ್ತರು ತಮ್ಮ ಇಷ್ಟತಿರ್ಥ ಹರಕೆ ತೀರಿಸಿ ದರು.
ಪ್ರಸಾದ: ಮಹಾ ದಾಸೋಹ ಭವನದಲ್ಲಿ ಪ್ರಸಾದ ವನ್ನು ಜಾತ್ರೆಗೆ ಆಗಮಿಸಿದ್ದ ಲಕ್ಷಾಂತರ ಭಕ್ತರು ಸೇವಿಸಿದರು.