
ಭೀಮಾ ಕೋರೆಗಾಂವ್ ಹೋರಾಟ ಇತಿಹಾಸವನ್ನು ಸೃಷ್ಠಿಸಿದೆ : ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್
ಕರುನಾಡ ಬೆಳಗು ಸುದ್ದಿ
ಕುಕನೂರು,1- ಭಾರತ ದೇಶದಲ್ಲಿ ೨೦೬ ವರ್ಷಗಳ ಹಿಂದೆ ನಡೆದ ಭೀಮಾ ಕೋರೆಗಾಂವ್ ಹೋರಾಟ ಇತಿಹಾಸವನ್ನು ಸೃಷ್ಠಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಹೇಳಿದರು.
ಪಟ್ಟಣದ ಮಾದಿಗ ಸಮಾಜದವತಿಯಿಂದ ನಡೆದ ಭೀಮಾ ಕೊರೆಗಾಂವ್ ವಿಜಯೋತ್ಸವವನ್ನು ಡಿಜೆ ಸೌಂಡ್ಸ್ಗೆ ಚಾಲನೆ ನೀಡಿ ಮಾತನಾಡಿದ ಅವರು, ಅಸ್ಪೃಶ್ಯತೆ ವಿರುದ್ಧ ಸಿಡಿದೆದ್ದ ೫೦೦ ಮಹರ್ ದಲಿತ ಹೋರಾಟಗಾರರು ಆಹಾರ, ನೀರು, ವಿಶ್ರಾಂತಿ ಇಲ್ಲದೆ ಸುಮಾರು ೨೮ ಸಾವಿರ ಪೇಶ್ವಗಳ ಸೈನ್ಯದ ವಿರುದ್ಧ ನೀರಂತರ ೧೨ಗಂಟೆಗಳ ಹೋರಾಡಿ ಗೆದ್ದ ಭೀಮಾ ಕೋರೆಗಾವ್ ವಿಜಯೋತ್ಸವ ಐತಿಹಾಸಿಕವಾಗಿದೆ. ಡಾ.ಅಂಬೇಡ್ಕರ್ ಅವರು ಭೀಮಾ ಕೋರೆಗಾವ್ ಯುದ್ಧವನ್ನು ದೇಶಕ್ಕೆ ಪರಿಚಯಿಸಿದರು ಎಂದು ಹೇಳಿದರು.
ಪಿಎಸ್‌ಐ ಟಿ.ಗುರುರಾಜ ಉದ್ಯಮಿ ಅನಿಲ್ ಆಚಾರ್, ಜಿ.ಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ, ಬಣಜಿಗ ಸಮಾಜದ ರಾಜ್ಯಾಧ್ಯಕ್ಷ ಅಂದಪ್ಪ ಜವಳಿ, ಪ.ಪಂ ಸದಸ್ಯರಾದ ಸಿದ್ದಲಿಂಗಯ್ಯ ಉಳ್ಳಾಗಡ್ಡಿ, ಗಗನ್ ನೋಟಗಾರ, ಪ್ರಶಾಂತ ಆರ್‌ಬೆರಳ್ಳಿನ್, ಮುಖಂಡರಾದ ನಾಗರಾಜ ತಲ್ಲೂರು, ವೀರೇಶ ಬೆದವಟ್ಟಿ, ಶಿವಪ್ಪ ಭಂಡಾರಿ, ಮಲಿಯಪ್ಪ ಅಣ್ಣಿಗೇರಿ, ಅಂದಪ್ಪ ಭಂಡಾರಿ, ನಿಂಗಪ್ಪ ಗೊರ್ಲೆಕೊಪ್ಪ, ಮಂಜುನಾಥ ಮ್ಯಾದರ್, ಚಂದ್ರಪ್ಪ ಆರ್‌ಬೆರಳ್ಳಿನ್ ಸೇರಿದಂತೆ ಮಾದಿಗ ಸಮಾಜದ ನೂರಾರು ಯುವಕರು, ಮುಖಂಡರು, ಯುವತಿಯರು ಡಿಜೆ ಸೌಂಡ್ಸ್ಗೆ ಕುಣಿದು ಕುಪ್ಪಳಿಸಿದರು.