
6 ರಂದು ವಾಕ್ ಇನ್ ಇಂಟರ್‌ವ್ಯೂವ್
ಕರುನಾಡ ವಬೆಳಗು ಸುದ್ದಿ
ಕೊಪ್ಪಳ, 3- ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕಚೇರಿಯಲ್ಲಿ ಜುಲೈ 06 ರಂದು ಬೆಳಿಗ್ಗೆ 10 ಗಂಟೆಯಿAದ ಮಧ್ಯಾಹ್ನ 1.30 ಗಂಟೆಯವರೆಗೆ ವಾಕ್ ಇನ್ ಇಂಟರ್‌ವ್ಯೂವ್ ಆಯೋಜಿಸಲಾಗಿದೆ.
ವಾಕ್ ಇನ್ ಇಂಟರ್‌ವ್ಯೂವ್‌ನಲ್ಲಿ ಖಾಸಗಿ ಸಂಸ್ಥೆಗಳು ಭಾಗವಹಿಸಲಿದ್ದು, ತಮ್ಮಲ್ಲಿನ ಖಾಲಿ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಇಂಟರ್‌ವ್ಯೂವ್‌ಗೆ ಎಲ್ಲರಿಗೂ ಉಚಿತ ಪ್ರವೇಶವಿದ್ದು, ಯಾರಿಗೂ ಶುಲ್ಕವಿರುವುದಿಲ್ಲ.
ಎಂ.ಬಿ.ಎ-ಸೇಲ್ಸ್ ಮತ್ತು ಮಾರ್ಕೆಟಿಂಗ್(3 ರಿಂದ 10 ವರ್ಷ ಅನುಭವ), ಎಂ.ಬಿ.ಎ -ಫೈನಾನ್ಸ್ (2 ರಿಂದ 5 ವರ್ಷ ಅನುಭವ), ಬಿ.ಇ, ಬಿ.ಟೆಕ್., ಬಿಸಿಎ, ಎಂ.ಸಿ.ಎ(2 ವರ್ಷ ಅನುಭವ), ಐಟಿಐ-ಫಿಟ್ಟರ್, ಮಶಿನಿಷ್ಟ್ (8 ರಿಂದ 15 ವರ್ಷ ಅನುಭವ), ಡಿಪ್ಲೋಮಾ-ಮೆಕ್ಯಾನಿಕಲ್ (8 ರಿಂದ 15 ವರ್ಷ ಅನುಭವ), ಎಂ.ಬಿ.ಎ-ಎಚ್.ಆರ್, ಎಂ.ಎಸ್.ಡಬ್ಲ್ಯೂ- ಎಚ್.ಆರ್(3 ರಿಂದ 6 ವರ್ಷ ಅನುಭವ), ಬಿ.ಎಸ್ಸಿ-ಕೆಮಿಸ್ಟಿç, ಬಯೋಲಾಜಿ, ಮೈಕ್ರೋ ಬಯೋಲಾಜಿ(0 ರಿಂದ 3 ವರ್ಷ ಅನುಭವ), ಬಿ.ಕಾಂ, ಎಂ.ಕಾA(3 ರಿಂದ 5 ವರ್ಷ ಅನುಭವ), ಬಿ.ಇ- ಎಲೆಕ್ಟಿçಕಲ್, ಇನ್‌ಸ್ಟೂçಮೆಂಟೇಷನ್, ಎಲೆಕ್ಟಾçನಿಕ್ಸ್ (5 ರಿಂದ 8 ವರ್ಷ ಅನುಭವ) ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಇಂಟರ್‌ವ್ಯೂವ್‌ನಲ್ಲಿ ಭಾಗವಹಿಸಬಹುದು. ಅಭ್ಯರ್ಥಿಗಳಿಗೆ ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ವಾಕ್ ಇನ್ ಇಂಟರ್‌ವ್ಯೂವ್‌ನಲ್ಲಿ ಭಾಗವಹಿಸುವ ಅಭ್ಯರ್ಥಿಗಳು (ಯುವಕ ಮತ್ತು ಯವತಿಯರು) ನಿರುದ್ಯೋಗಿ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು ಮತ್ತು ಆಧಾರ ಕಾರ್ಡಿನ ಪ್ರತಿ, ಬಯೋಡಾಟಾ ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಹಾಜರಾಗಿ, ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.