
ಲಕ್ಷ್ಮೀನಾರಾಯಣ ಕೇರೆ ಅಭಿವೃದ್ದಿಗೆ 6.50 ಕೋಟಿ ಅನುದಾನ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 20- ತಾಲೂಕಿನ ಸಂಗಾಪುರ ಗ್ರಾಮದ ಲಕ್ಷ್ಮೀನಾರಾಯಣ ಕೆರೆ ಅಭಿವೃದ್ದಿಗಾಗಿ ಸಣ್ಣ ನೀರಾವರಿ ಇಲಾಖೆ ಯೋಜನೆಯಡಿ ೬ ಕೋಟಿ ೫೦ಲಕ್ಷ ಅನುದಾನ ಮಂಜೂರು ಆಗಲು ಒಪ್ಪಿಗೆ ನಿಡಲಾಗಿದೆ ಎಂದು ಶಾಸಕ ಗಾಲಿ ಜನಾರ್ಧನರೆಡ್ಡಿ ಹೇಳಿದರು.
ತಾಲೂಕಿನ ಸಂಗಾಪೂರ ಗ್ರಾಮದ ನೀರು ಬಳಕೆದಾರರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ ಲಕ್ಷ್ಮೀನಾರಾಯಣ ಕೆರೆಗೆ ಆರುವರೆ ಕೊಟಿಯಲ್ಲಿ ವಾಕಿಂಗ ಟ್ರಾಕ್,ಮಕ್ಕಳ ಆಟಿಕಿ ಸಲಕರಣೆ ಸುಸಜ್ಜಿತವಾದ ಉದ್ಯಾನವನ ನಿರ್ಮಿಸಲಾಗುವುದು.
ನೀರು ಬಳಕೆದಾರರ ಸಂಘದವರು ಶ್ರಮದಿಂದ ಕೆಲಸ ನಿರ್ವಹಿಸಬೇಕು. ರೈತರ ಜೀವನಾಡಿ ಯಾಗಿರುವ ವಿಜಯನಗರ ಕಾಲುವೆಗಳ ಆಧುನಿಕರಣದ ಕರ್ನಾಟಕ ನೀರಾವರಿ ನಿಗಮ, ಕಾಡ ತುಂಗಭದ್ರಾ ಯೋಜನೆ, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಸಹಯೋಗದೊಂದಿಗೆ ಈ ಕಟ್ಟಡವನ್ನು ನಿರ್ಮಿಸಲಾಗಿದ್ದು, ಈ ಭಾಗದ ರೈತರು ಇದರ ಸದ್ಬಳಕೆಯನ್ನು ಮಾಡಿಕೊಳ್ಳಬೇಕು ಎಂದರು.
ಮಾಜಿ ಸಂಸದ ಶಿವರಾಮಗೌಡ, ಕಾಡಾ ಮಾಜಿ ಅಧ್ಯಕ್ಷ ತಿಪ್ಪೆರುದ್ರಸ್ವಾಮಿ, ಶಾಸಕ ಗಾಲಿ ಜನಾರ್ಧನರೆಡ್ಡಿಯವರು ಲಕ್ಷ್ಮೀನಾರಾಯಣ ಕೆರೆ ಅಭಿವೃದ್ದಿಗೆ ಸರ್ವರೂ ಸಹಕರಿಸಿ ಎಂದರು.
ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಹೆಚ್.ಎಂ.ಸಿದ್ದರಾಮಸ್ವಾಮಿ ಮಾತನಾಡಿ, ಮಾಜಿ ಸಚಿವ ಆನೆಗೊಂದಿ ಸಂಸ್ಥಾನದ ರಾಜಾ ಶ್ರೀರಂಗದೇವರಾಯಲುರವರ ಅಭಿವೃದ್ದಿ ಕೆಲಸಗಳ ಸ್ಮರಣೆ ಮಾಡಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಆನೆಗೊಂದಿ ಸಂಸ್ಥಾನದ ರಾಜಮಾತೆ ಕರಕುಶಲ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷೆ ಲಲಿತಾರಾಣಿ ರಾಯಲು, ವಿರುಪಾಕ್ಷಪ್ಪ ಸಿಂಘನಾಳ, ಚನ್ನಪ್ಪ ಮಳಗಿ ವಕೀಲ, ಡಿ.ಕೆ.ಆಗೋಲಿ, ಇಂಜಿನಿಯರ್ ದೊರೆಸ್ವಾಮಿ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಎಚ್.ಎಂ.ವಿರುಪಾಕ್ಷಯ್ಯ ಸ್ವಾಮಿ, ಜೆ.ಎನ್. ನಾಗರಾಜ, ವೀರೇಶ, ಮಲ್ಲಿಕಾರ್ಜುನ, ಕಾಡಾ ಅಧಿಕಾರಿ ತಿರುಮಲೇಶ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುಳಮ್ಮ, ನೀರು ಬಳಕೆದಾರ ಸಂಘದ ಆನೆಗೊಂದಿ ಕಾರ್ಯದರ್ಶಿ ಸಿದ್ದಯ್ಯ, ಸಂಗಾಪೂರ ಪಿಡಿಓ ಮುಂತಾದವರು ಉಪಸ್ಥಿತರಿದ್ದರು.