WhatsApp Image 2024-02-27 at 7.29.32 PM

ಚರಂಡಿಗೆ ಬಿದ್ದು ಮಗು ಸಾವು : ಶವವಿಟ್ಟು ಪ್ರತಿಭಟನೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ,27- ಆಟವಾಡಿಕೊಂಡಿದ್ದ ಮಗುವೊಂದು ಆಕಸ್ಮಿಕ ಚರಂಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಗರದಲ್ಲಿ ನಡೆದಿದ್ದು, ಘಟನೆಗೆ ನಗರಸಭೆಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ವಾಡರ್ಿನ ನಿವಾಸಿಗಳು ಬಾಲಕಿಯ ಶವವನ್ನು ನಗರಸಭೆಗೆ ತಂದು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.

ನಗರಸಭೆಯ ವ್ಯಾಪ್ತಿಯ 14ನೇ ವಾಡರ್್ ಎಪಿಎಂಸಿ ಹಮಾಲರ ಕಾಲೋನಿಯ ಸಕರ್ಾರಿ ಪ್ರೌಢ ಶಾಲೆಯ ಸಮೀಪ ಈ ಘಟನೆ ನಡೆದಿದ್ದು, ಕೂಲಿಕಾರ ದಂಪತಿಗಳಾದ ಪಂಪಾಪತಿ ಹಾಗೂ ಅಕ್ಕಮ್ಮ ಎಂಬುವವರಿಗೆ ಸೇರಿದ್ದ ಒಂದು ವರ್ಷದ ಮಗು ಪಾರ್ವತಿ ಸಾವನ್ನಪ್ಪಿದೆ.

ಘಟನೆ ಹಿನ್ನೆಲೆ : ಮನೆಯ ಮುಂದೆ ಬೆಳಗ್ಗೆ ಆಟವಾಡಿಕೊಂಡಿದ್ದ ಮಗು ಸಾಕಷ್ಟು ಸಮಯವಾದರೂ ಮನೆಗ ಬಾರದ ಹಿನ್ನೆಲೆ ಅನುಮಾನಗೊಂಡ ಪಾಲಕರು, ಸುತ್ತಲೂ ಹುಡಿಕಿದ್ದಾರೆ. ಕಾಣದಾದಾಗ ಕೂಡಲೆ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ.

ಮಗುವನ್ನು ಯಾರಾದರೂ ಕರೆದೊಯ್ದಿರುವ ಸಾಧ್ಯತೆ ಹಿನ್ನೆಲೆ ಪೊಲೀಸರ ಸಲಹೆ ಮರೆಗೆ ಸುತ್ತಲಿನ ಗ್ರಾಮಗಳಲ್ಲಿ ಹುಡಕಿದ್ದಾರೆ. ಆದರೆ ಅನುಮಾನಗೊಂಡು ಸಮೀಪದಲ್ಲಿದ್ದ ಕೊಳಾಯಿ ಬಳಿಗೆ ಹೋಗಿ ನೋಡಿದಾಗ ಮಗು ಚರಂಡಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಅಲಕ್ಷ್ಯವೇ ಕಾರಣ : ಘಟನೆಗೆ ವಾಡರ್ಿನಲ್ಲಿರುವ ತೆರೆದ ಚರಂಡಿಯೇ ಕಾರಣ ಎಂದು ಆರೋಪಿಸಿದ ವಾಡರ್ಿನ ನಿವಾಸಿಗಳು, ಮಗುವಿನ ಪಾಥರ್ಿವ ಶರೀರದೊಂದಿಗೆ ನಗರಸಭೆಗೆ ಆಗಮಿಸಿ ಕೆಲಕಾಲ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಗುವಿನ ಶವವವನ್ನು ಎದೆಗವಚಿಕೊಂಡು ತಾಯಿ ಅಕ್ಕಮ ಹಾಗೂ ಕುಟುಂಬಿಕರು ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಸ್ಥಳಕ್ಕೆ ಆಗಮಿಸಿದ ನಗರಸಭೆ ಪೌರಾಯುಕ್ತ ಆರ್. ವಿರೂಪಾಕ್ಷಮೂತರ್ಿ, ಸಂತ್ರಸ್ತರನ್ನು ಸಮಾಧಾನಿಸಲು ಯತ್ನಿಸಿದರು.
`ವಾರ್ಡ ನಗರಸಭೆ ವ್ಯಾಪ್ತಿಯಲ್ಲಿ ಇಲ್ಲ. ಅದು ಎಪಿಎಂಸಿಯಲ್ಲಿರುವ ಕಾರಣಕ್ಕೆ ಮಾನವೀಯತೆ ದೃಷ್ಟಿಯಿಂದ ನೀರು, ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಈ ಘಟನೆಗೂ ನಗರಸಭೆಗೂ ಸಂಬಂಧ ಇಲ್ಲ’ ಎಂದು ಪೌರಾಯುಕ್ತ ಹೇಳಿದರು. ಸ್ಥಳಕ್ಕೆ ಆಗಮಸಿದ ಪೊಲೀಸರು, ಧರಣಿ ನಿರತರ ಮನವೊಲಿಸಿ ಕಳಿಸಿದರು.

Leave a Reply

Your email address will not be published. Required fields are marked *

error: Content is protected !!