
7 ರಂದು ಬಳ್ಳಾರಿಯಲ್ಲಿ ಶ್ರೀ ಶಂಕರ ಉಪದೇಶಾಂಮೃತ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 5- ಇಲ್ಲಿನ ಸಂಗನಕಲ್ಲು ರಸ್ತೆಯ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ ಶೃಂಗೇರಿ ಶಂಕರ ಶಾಖಾ ಮಠದಲ್ಲಿ ಇದೇ ಭಾನುವಾರ ಜುಲೈ 7 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಶಂಕರ ಉಪದೇಶಾಂಮೃತ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅನಂತ ಶ್ರೀ ವಿಭೂಷಿತ ಜಗದ್ಗುರು ಶ್ರೀ ಭಾರತೀತೀರ್ಥ ಮಹಾ ಸನ್ನಿಧಾನಂಗಳವರ ಸಂನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವದ ಶುಭ ಸಂದರ್ಭದಲ್ಲಿ ಈ ಧಾರ್ಮಿಕ ಆಚರಣೆ ಜರುಗಲಿದೆ.
ಭಾರತೀಯ ಆಧ್ಯಾತ್ಮಿಕ ಚರಿತ್ರೆಗೆ ತನ್ನದೇ ಆದ ಕೊಡುಗೆ ನೀಡಿದ ಶೃಂಗೇರಿ ಶಂಕರ ಮಠವು ಭಕ್ತಿ ಪಂಥದ ಭಾಷಿಕ ಅಭಿವ್ಯಕ್ತಿಗೊಳಿಸಿದ ಕೀರ್ತಿಗೆ ಪಾತ್ರವಾಗಿದೆ. ತಾತ್ವಿಕ ಪರಿಪಕ್ವವಾದ ವಿಚಾರಧಾರೆಗಳಿಂದ ಸರ್ವ ಸಮನ್ವಯದ ಮತದ ಅನುಷ್ಠಾನವನ್ನು ಶಂಕರ ತತ್ವ ಸಿದ್ಧಾಂತದ ಜೊತೆಗೆ ಸಮೀಕರಿಸಿ ಸಾಮಾಜಿಕ, ಸಾಂಸ್ಕøತಿಕವಾಗಿ ವಿಸ್ತಾರಗೊಂಡಿದೆ. ಶ್ರೀ ಶಂಕರರ ದೃಷ್ಟಿ ಪಾರಮಾರ್ಥಿಕವಾಗಿದ್ದು ಸರ್ವರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧನ್ಯರಾಗಬಹುದು.