WhatsApp Image 2024-03-01 at 4.25.15 PM

ಶ್ರೀ ವಿಷ್ಣು ಸೇವಾ ಸಂಸ್ಥೆಯಿಂದ ವಿಷ್ಣು ಸಹಸ್ರನಾಮ ಪಾರಾಯಣ

ಕರುನಾಡ ಬೆಳಗು ಸುದ್ದಿ

ವಿಜಯನಗರ,1- ಶ್ರೀ ವಿಷ್ಣು ಸೇವಾ ಸಂಸ್ಥೆ ಯಿಂದ 1008ನೆಯ ವಾರದ ಸಹಸ್ರಕಂಠ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣದ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು. ಈ ಬಗ್ಗೆ ಸಂಸ್ಥೆಯ ಅಧ್ಯಕ್ಷರಾದ ಯು. ನರಸಿಂಹ ಮೂರ್ತಿ ನಗರದ ಪತ್ರಿಕಾ ಭವನದಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಹೇಳಿದರು.

ನಮ್ಮ ಸಂಸ್ಥೆಯ ವತಿಯಿಂದ ಇದೇ ಮಾರ್ಚ್ 3 ರಂದು ಭಾನುವಾರ ಬೆಳಿಗ್ಗೆ 8:30ಕ್ಕೆ ನಗರದ ಜಂಬುನಾಥ ರಸ್ತೆಯಲ್ಲಿರುವ ಶ್ರೀಕೃಷ್ಣಮಠದಲ್ಲಿ 1008ನೆಯ ವಾರದ ಸಹಸ್ರ ಕಂಠ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.10:00 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಪ್ರಸ್ತುತ ಈ ಸಂಸ್ಥೆ ತನ್ನ ಇಪ್ಪತ್ತನೆಯ ವರ್ಷದ ಸಂಭ್ರಮದ ಪರ್ವಕಾಲದಲ್ಲಿ 1008ನೆಯ ವಾರದ ಕಾರ್ಯಕ್ರಮದಲ್ಲಿ ಪುನಃ ಸಹಸ್ರಕಂಠ “ವಿಷ್ಣು ಸಹಸ್ರನಾಮ” ಪಾರಾಯಣವನ್ನು ಆಯೋಜಿಸಲಾಗಿದ್ದು . ಈ ವಿಶೇಷ ಕಾರ್ಯಕ್ರಮದಲ್ಲಿ ಆಧ್ಯಾತ್ಮ ಬಂಧುಗಳೆಲ್ಲರೂ ತ್ರಿಕರಣ ಪೂರ್ವಕವಾಗಿ ತಮ್ಮನ್ನು ತೊಡಗಿಸಿಕೊಂಡು ಭಗವಂತನ ಕೃಪೆಗೆ ಪಾತ್ರರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸವಂತೆ ಕೋರಲಾಗಿದೆ.

ವಿಷ್ಣು ಸೇವಾ ಸಂಸ್ಥೆ ಯಿಂದ 2004ರಲ್ಲಿ ಗಾಂಧಿವಾದಿ ಕೆ. ನಾರಾಯಣಭಟ್ಟ ಹಾಗೂ ಶ್ರೀ ರಘುಪತಿ ಬೈಲೂರು ಇವರ ನೇತೃತ್ವದಲ್ಲಿ ಪುರೋಹಿತ ವಿದ್ವಾನ್ ಶ್ರೀ ಕೇಶವಾಚಾರ್ಯರ ಮನೆಯಲ್ಲಿ ಪ್ರಾರಂಭವಾದ ವಿಷ್ಣು ಸಹಸ್ರನಾಮ ಪಾರಾಯಣ ಕಾರ್ಯಕ್ರಮಕ್ಕೆ ಇಂದು 20 ವರ್ಷ ಸಂದಿದೆ. ಅಂದು ಕೆಲವೇ ಸದಸ್ಯರಿಂದ ಪ್ರಾರಂಭಗೊಂಡ ಈ ಸಂಸ್ಥೆ ಇಂದು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪ್ರಸಿದ್ದಿ ಪಡೆದಿದೆ. ಪ್ರತಿ ವಾರವೂ ತಪ್ಪದೆ ನಡೆಯುವ ಈ ಪಾರಾಯಣ ಕಾರ್ಯಕ್ರಮದ ಪ್ರಭಾವ ಹಾಗೂ ಪರಿಣಾಮದಿಂದಾಗಿ ಹಲವಾರು ಆಧ್ಯಾತ್ಮಿಕ ಬಂಧುಗಳು ಶಾಂತಿ-ನೆಮ್ಮದಿ ಹಾಗೂ ಧನ್ಯತೆಯನ್ನು ಪಡೆದಿರುತ್ತಾರೆ.

ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ, ವಾಮನತೀರ್ಥ ಪರಂಪರೆಯ ಶ್ರೀ ಶೀರೂರು ಮಠದ ಜಗದ್ಗುರು ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದರು, ಭಾವೀ ಪರ್ಯಾಯ ಪೀಠ, ಉಡುಪಿ ಇವರು ವಹಿಸಲಿದ್ದಾರೆ. ಮುಖ್ಯ ಪ್ರವಚನಕಾರರಾಗಿ ಬೆಂಗಳೂರಿನ ಪ್ರವಚನ ಪಂಡಿತರಾದ ವಿದ್ವಾನ್ ಶ್ರೀ ಎಲ್.ಎಸ್. ಬ್ರಹ್ಮಣ್ಯತೀರ್ಥಾಚಾರ್ಯರರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ವಾದಿರಾಜ ಭಟ್, ಗುರುರಾಜ್ ಭಟ್, ನರಸಿಂಹ ಆಚಾರ್ಯ, ರಾಮ ಮೂರ್ತಿ ಆಚಾರ್, ಶ್ರೀ ಪ್ರೆಸ್ ಇದ್ದರು.

Leave a Reply

Your email address will not be published. Required fields are marked *

error: Content is protected !!