
77ನೇ ಮಹಾತ್ಮ ಗಾಂಧೀಜಿ ಪುಣ್ಯ ತಿಥಿ ಹುತಾತ್ಮರ ದಿನಾಚರಣೆ ಗಾಂಧೀಜಿ ಭಾರತೀಯ ವಕೀಲರು ರಾಜಕಾರಣಿ : ನ್ಯಾಯಾಧೀಶ ಹಾಜಿ ಹುಸೇನ್ ಸಾಬ್ ಯಾದವಾಡ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,30 – ಮಹಾತ್ಮ ಗಾಂಧೀಜಿ ಅವರು ಭಾರತೀಯ ವಕೀಲರು ರಾಜಕಾರಣಿ ಸಾಮಾಜಿಕ ಕಾರ್ಯಕರ್ತರು ಲೇಖಕರು ಭಾರತ ಬ್ರಿಟಿಷ್ ಆಳ್ವಿಕೆಯ ವಿರುದ್ಧ ರಾಷ್ಟ್ರೀಯವಾದಿ ಚಳುವಳಿಯ ನಾಯಕರಾಗಿ ಅವರು ದೇಶದ ಪಿತಾಮಹ ಎಂದು ಪರಿಗಣಿಸಲ್ಪಟ್ಟರು ಎಂದು ಸಿರುಗುಪ್ಪ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾದ ಹಾಜಿ ಹುಸೇನ್ ಸಾಬ್ ಯಾದವಾಡ ಅವರು ಹೇಳಿದರು.
ಸಿರುಗುಪ್ಪ ನಗರದ ನ್ಯಾಯಾಲಯ ಸಭಾಂಗಣದಲ್ಲಿ ಮಹಾತ್ಮ ಗಾಂಧೀಜಿಯವರ 77ನೇ ಪುಣ್ಯತಿಥಿ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಗೌರವಿಸಿ ಸ್ಮರಿಸಿ ನೆನಪಿಸಿ ಮಾತನಾಡುತ್ತಿದ್ದರು ನಗರಸಭಾ ಪೌರಾಯುಕ್ತ ಎಚ್ಎನ್ ಗುರುಪ್ರಸಾದ್ ನಗರಸಭಾ ಎಇಇಎಂ ಗಂಗಾಧರ ಗೌಡ ರಾಷ್ಟ್ರೀಯ ಸಾಕ್ಷರತಾ ಅಬ್ದುಲ್ ನಬಿ ವಕೀಲರ ಸಂಘದ ಅಧ್ಯಕ್ಷ ಎಸ್ ಮಂಜುನಾಥಗೌಡ ಕಾರ್ಯದರ್ಶಿ ಎಚ್ ಪ್ಯಾಟೆಗೌಡ ಹಿರಿಯ ವಕೀಲ ಎನ್ ಅಬ್ದುಲ್ ಸಾಬ್ ರಾರಾವಿ ಎಚ್ ಕೆ ರಾಮಪ್ಪ ವೆಂಕಟೇಶ್ ನಾಯಕ ಮಲ್ಲಿಗೌಡ ಕೆ ಸಣ್ಣ ಹುಸೇನ್ ನ್ಯಾಯಾಲಯದ ಸರ್ಕಾರಿ ಅಭಿಯೋಜಕಿ ಶಾರದಾ ನ್ಯಾಯಾಲಯದ ಸಿಬ್ಬಂದಿ ಮತ್ತಿತರರು ಪಾಲ್ಗೊಂಡಿದ್ದರು ಆರಂಭದಲ್ಲಿ ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.