
ರಾಜಶೇಖರ ಅಂಗಡಿ ನಿಧನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,23- ಕನ್ನಡ ಸಾಹಿತ್ಯ ಪರಿಷತ್ತನ್ನು ಜನರ ಪರಿಷತ್ತನ್ನಾಗಿ ಪ್ರತಿಯೊಬ್ಬರಿಗೂ ಪರಿಚಯಿಸಿದ, ನಿರಂತರವಾಗಿ ಕನ್ನಡ ಸಾಹಿತ್ಯ ಪರಿಷತ್ತಿಗಾಗಿಯೇ ಕಾರ್ಯ ನಿರ್ವಹಿಸಿದ್ದ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾ ಅಧ್ಯಕ್ಷ ರಾಜಶೇಖರ ಗು.ಅಂಗಡಿ ಹಲಗೇರಿ(52) ದಿ. 23-3-2024 ರ ಶನಿವಾರ ಬೆಳಿಗ್ಗೆ 2.45 ಕ್ಕೆ ಗಂಟೆಗೆ ನಿಧನ ರಾಗಿದ್ದಾರೆ.
ಮೃತರು ಮೂವರು ಸಹೋದರರು ,ಮೂವರು ಸಹೋದರಿಯರು ,ಪತ್ನಿ, ಒರ್ವ ಪುರ್ತಿ ಹಾಗೂ ಪುತ್ರ ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ: ಮೃತರ ಅಂತ್ಯಕ್ರಿಯೆ ಅವರ ಸ್ವಗ್ರಾಮವಾದ ಹಲಗೇರಿಯಲ್ಲಿ ಶನಿವಾರ 23-3-2024 ರ ಸಂಜೆ 5 ಗಂಟೆಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.