
ಕ್ಷಯ ರೋಗಿಗಳ ಬೆಂಬಲ ಗುಂಪು ಸಭೆ ರೋಗದ ಬಗ್ಗೆ ಭಯ ಬೇಡ : ಡಾ.ಬಿ. ಈರಣ್ಣ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,28- ನಗರ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಡಾಕ್ಟರ್ ಬಿ.ಈರಣ್ಣ ತಾಲೂಕು ಆರೋಗ್ಯ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಕ್ಷಯರೋಗಿಗಳ ಬೆಂಬಲ ಗುಂಪು ಸಭೆ ನಡೆಸಿ ಜೆ ಎಸ್ ಡಬ್ಲ್ಯೂ ಫೌಂಡೇಶನ್ ನೀಡಿರುವ ಆಹಾರದ ಕಿಟ್ ಗಳನ್ನು ಎನ್ ಟಿ ಇ ಪಿ ಸಿಬ್ಬಂದಿ ಉಪಸ್ಥಿತಿಯಲ್ಲಿ 44 ಕ್ಷಯ ರೋಗಿಗಳಿಗೆ ವಿತರಣೆ ಮಾಡಲಾಯಿತು.
ಕ್ಷಯೋಗಿಗಳನ್ನು ಉದ್ದೇಶಿಸಿ ತಾಲೂಕ ಆರೋಗ್ಯ ಅಧಿಕಾರಿಗಳು ಕ್ಷಯ ರೋಗದ ಬಗ್ಗೆ ಭಯ ಬೀಳದೆ ಸರಿಯಾದ ಸಮಯಕ್ಕೆ ಔಷದ ಸೇವನೆ, ವೈಯಕ್ತಿಕ ಸ್ವಚ್ಛತೆ, ಪೌಷ್ಠಿಕ ಆಹಾರ ಸೇವನೆ, ವಾಕಿಂಗ್ ಧ್ಯಾನ ಮೊದಲಾದವುಗಳಿಂದ ಟಿವಿಯನ್ನು ಗೆಲ್ಲಬಹುದಾಗಿದೆ. ಹೌದು ನಾವು ಒಂದುಗೂಡಿ ಟಿಬಿಯನ್ನು ಕೊನೆಗೊಳಿಸಬಹುದು ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಮ್ಮದ್ ಖಾಸಿಂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸದಸ್ಯ ಅಬ್ದುಲ್ ನಬಿ ಟಿಬಿ ಮೇಲ್ವಿಚಾರಕರ ಹುಲಿಗೆಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಶೇಖರ್, ಯೋಗೇಶ್ ಆಶಾ ಕಾರ್ಯಕರ್ತೆಯರು ಮತ್ತು ಟಿಬಿ ಔಷಧವನ್ನು ಪಡೆಯುತ್ತಿರುವ ಫಲಾನುಭವಿಗಳು ಉಪಸ್ಥಿತರಿದ್ದು ಆಹಾರದ ಕೀಟ್ ಗಳನ್ನು ಪಡೆದುಕೊಂಡರು.
ಈ ವೇಳೆಯಲ್ಲಿ ಪಂಪಾಪತಿ ಶೆಕ್ಷಾವಲಿ ಮತ್ತು ಹುಲಿಗೆಮ್ಮ ಕ್ಷಯರೋಗಿಗಳು ಮಾತನಾಡಿ ಆರೋಗ್ಯ ಇಲಾಖೆಯ ಸೇವೆಯನ್ನು ಪ್ರಶಂಸಿಸಿದರು ಇವರು ಹೊತ್ತಿಗೆ ಸರಿಯಾಗಿ ಔಷಧಿ ಮನೆ ಬಾಗಿಲಿಗೆ ಬಂದು ಕೊಡುತ್ತಿರುವುದರಿಂದ ನಾವು ಆರೋಗ್ಯದಲ್ಲಿ ಚೇತರಿಕೆಯನ್ನು ಕಂಡಿದ್ದೇವೆ. ನಮಗೆ ಧೈರ್ಯ ತುಂಬಿದ್ದಾರೆ ಮತ್ತು ಪ್ರತಿಯೊಂದು ಪರೀಕ್ಷೆಯನ್ನು ಉಚಿತವಾಗಿ ಮಾಡಿಸಿದ್ದಾರೆ ಎಂದು ಪ್ರಶಂಸಾ ನುಡಿಗಳನ್ನಾಡಿದರು.