
ಬಳ್ಳಾರಿ ಲೋಕಸಭಾ ಸ್ಥಾನ ಕಾಂಗ್ರೆಸ್ ವಶ 87 ಸಾವಿರ ಮತಗಳ ಅಂತರದಿಂದ ತುಕಾರಾಂ ಗೆಲುವು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 4- ಹಲವಾರು ವರ್ಷಗಳಿಂದ, ಬಿಜೆಪಿ ತೆಕ್ಕೆಯಲ್ಲಿದ್ದ ಲೋಕಸಭಾ ಸ್ಥಾನ, 2024 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೆಕ್ಕೆಗೆ ಸೇರಿದೆ ಎಂದು ಹೇಳಬಹುದು. ಹಿಂದೂ ಆರ್ ವೈ ಎಂ ಈಸಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ನಡೆದ ಮತ ಎಣಿಕೆಯಲ್ಲಿ ಪ್ರತಿಸುತ್ತಿನಲ್ಲೂ ಕಾಂಗ್ರೆಸ್ ಲೀಡನ್ನು ಸಾಧಿಸುತ್ತಾ ಕೊನೆಗೆ 87 ಸಾವಿರ ಅಂತರದಿಂದ ಬಿಜೆಪಿ ಮುಖಂಡ ಮಾಜಿ ಸಚಿವ ಬಿ ಶ್ರೀರಾಮುಲು ಅವರ ಮೇಲೆ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ವಿಜಯಬೇರಿಯನ್ನು ಹೊಡೆದಿದ್ದಾರೆ.
ಗ್ಯಾರೆಂಟಿಗಳ ಎಫೆಕ್ಟ್ : ಬಳ್ಳಾರಿ ಲೋಕಸಭಾ ಸ್ಥಾನ ಕಾಂಗ್ರೆಸ್ ತೆಕ್ಕೆಗೆ ಸೇರುವ ಲೆಕ್ಕಾಚಾರದಲ್ಲಿ ವಿಶ್ಲೇಷಕರು ಸಿದ್ದರಾಮಯ್ಯ ಸರ್ಕಾರ ಅನುಷ್ಠಾನ ಗೊಳಿಸುತ್ತಿರುವ ಗ್ಯಾರೆಂಟಿ ಯೋಜನೆಗಳಿಂದ ವಿಜಯವೂ ಸಾಧ್ಯವಾಗಿದೆ ಎಂದು ಹೇಳಲಾಗುತ್ತದೆ. ಸಂಡೂರು ಶಾಸಕರಾಗಿ ಸತತವಾಗಿ ಮೂರು ಬಾರಿ ಕೆಲಸ ಮಾಡಿದ ತುಕಾರಾಂ, ಎಲ್ಲರ ಜೊತೆಗೆ ಬೆರೆತು ಹೋಗುವುದರಿಂದ ಈ ವಿಜಯ ಸಾಧ್ಯವಾಗಿದೆ ಎಂದು ಹೇಳಬಹುದು.
ಫಲಿಸದ ಅನುಕಂಪ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿ ಶ್ರೀರಾಮುಲು ಅವರು ಸೋಲನ್ನು ಕಂಡಿದ್ದರು. ಆ ಅನುಕಂಪ ಈ ಚುನಾವಣೆಯಲ್ಲಿ ಕೆಲಸ ಮಾಡುತ್ತದೆ ಎಂದು ಹಾಕಿರುವ ಲೆಕ್ಕಾಚಾರ ತಪ್ಪಿದೆ ಎಂದು ಹೇಳಬಹುದು.
ಅಭಿನಂದನೆಗಳು ಸಲ್ಲಿಸಿದ ಕಾಂಗ್ರೆಸ್ ಮುಖಂಡರು. ಲೋಕಸಭಾ ಕ್ಷೇತ್ರಕ್ಕೆ ಆಯ್ಕೆಯಾದ ಕಾಂಗ್ರೆಸ್ ಅಭ್ಯರ್ಥಿಯ ತುಕಾರಾಮ್ ಅವರನ್ನು ಜಿಲ್ಲಾ ಕಾಂಗ್ರೆಸ್ ಕಮಿಟಿ ಮುಖಂಡರು ಮತ್ತು ಆರ್ಥಿ ಕಾರ್ಯಕರ್ತರು ಅಭಿಮಾನಿಗಳು ಸಿಹಿಯನ್ನು ಹಂಚಿ ಅಭಿನಂದನೆಗಳು ವ್ಯಕ್ತ ಮಾಡಿದರು.