
9.70 ಲಕ್ಷ ರೂ ಮೌಲ್ಯದ ಕಳ್ಳತನದ 24 ಬೈಕ್ ಗಳ ವಶ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 20- ನಗರದಲ್ಲಿ ನಡೆಯುತ್ತಿದ್ದ ಮೋಟಾರ್ ಸೈಕಲ್ ಗಳ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶದ 60 ವರ್ಷದ ಗರ್ಜಿ ಮುಕ್ಕಣ್ಣ ಇವರು ಪೊಲೀಸ್ ಫ್ರೀಯಾದಿ ನಗರದ ಬಸ್ ನಿಲ್ದಾಣದ ಒಳಗಡೆ ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸಿದ್ದ ಮೋಟಾರ್ ಸೈಕಲ್ ಕಳ್ಳತನವಾಗಿದೆ ಎಂದು ದೂರು ನೀಡಿದ್ದರು.
ಸಿರುಗುಪ್ಪ ಪೊಲೀಸರು ಕಾರ್ಯಾಚರಣೆ ನಡೆಸಿ 9.70 ಲಕ್ಷ ರೂ ಮೌಲ್ಯದ 24 ಬೈಕುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಭಂಡಾರು ಹೆಚ್ಚುವರಿ ಪೊಲೀಸ್ ವರಿಷ್ಠಅಧಿಕಾರಿ ಗಳಾದ ಕೆ ಪಿ ರವಿಕುಮಾರ್ ನವೀನ್ ಕುಮಾರ್ ಸಿರುಗುಪ್ಪ ಪೊಲೀಸ್ ಉಪ ವಿಭಾಗದ ಡಿ ವೈ ಎಸ್ ಪಿ ವೆಂಕಟೇಶ ಸರ್ಕಲ್ ಇನ್ಸ್ಪೆಕ್ಟರ್ ವೈ ಎಸ್ ಹನುಮಂತಪ್ಪ ಇವರ ಮಾರ್ಗದರ್ಶನದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಮ್ಮಣ್ಣ ನಾಯಕ ವಿ ಹೊನ್ನಪ್ಪ ಪರಶುರಾಮ ಹಚ್ಚೋಳ್ಳಿ ಠಾಣೆ ಸಿಬ್ಬಂದಿಗಳಾದ ಕಾಶಿನಾಥ ಪ್ರಭಾಕರ ರೆಡ್ಡಿ ದ್ಯಾಮನಗೌಡ ಮುನಿಸ್ವಾಮಿ ಈರಣ್ಣ ವಿಷ್ಣು ಮೋಹನ್ ವಿಶೇಷ ತನಿಕ ತಂಡ ದೂರು ದಾಖಲಾದ 24 ಗಂಟೆಯೊಳಗೆ ಸದರಿ ಪ್ರಕರಣವನ್ನು ಕಳ್ಳತನ ಮಾಡಿದ ಆರೋಪಿತರನ್ನು ಪತ್ತೆ ಮಾಡಿ ಅವರಿಂದ ಪ್ರಕರಣದ ಕಳ್ಳತನವಾದ ಒಂದು ಮೋಟರ್ ಸೈಕಲ್ ಜೊತೆಗೆ 24 ಮೋಟರ್ ಸೈಕಲ್ ಗಳನ್ನು ವಶ ಪಡಿಸಿಕೊಂಡಿದ್ದಾರೆ ಆರೋಪಿಗಳನ್ನು ಪತ್ತೆ ಮಾಡಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ