ಮಹಿಳೆಯರು ಗ್ಯಾರಂಟಿ ಯೋಜನೆಯಿಂದ ದಾರಿ ತಪ್ಪಿಲ್ಲ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 25- ರಾಜ್ಯ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕೂಡಲೇ ಮಹಿಳೆಯರನ್ನು ಶ್ರಮ ಕೇಳಬೇಕೆಂದು ವಿಜಯನಗರ ಬಳ್ಳಾರಿ ಜನವಾದಿ ಮಹಿಳಾ ಸಂಘಟನೆ ಒತ್ತಾಯಿಸುತ್ತಿರುವದಾಗಿ, ಸಂಘಟನಾ ರಾಜ್ಯ ಕಾರ್ಯದರ್ಶಿ, ಜೈ ಚಂದ್ರಕುಮಾರಿ ಹೇಳಿದರು.
ನಗರದ ಒಂದು ಹೋಟೆಲ್ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಮಹಿಳೆಯರಿಗಾಗಿ ನೀಡಿದ ಯೋಜನೆಗಳಿಂದ ಹಾದಿ ತಪ್ಪಿದ್ದಾರೆ ಎಂದು ಅವಹೇಳನಕಾರಿಯಾಗಿ ಮಹಿಳೆಯರ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದರು.
ನಿಜಕ್ಕಾಗಿ ಆದಿ ತಪ್ಪಿರೋದು ಹೆಚ್ಡಿ ಕುಮಾರಸ್ವಾಮಿಯವರೇ ಎಂದು ಅಗ್ರಹ ವ್ಯಕ್ತ ಮಾಡಿದರು. ಕೂಡಲೇ ಅವರು ಕ್ಷಮೆ ಕೇಳಲು ಜನವಾದಿ ಮಹಿಳಾ ಸಂಘಟನೆ ಒತ್ತಾಯ ಮಾಡುತ್ತಿರುವುದಾಗಿ ತಿಳಿಸಿದರು .
ಚುನಾವಣೆಯಲ್ಲಿ ವಿರೋಧ ಪಕ್ಷಗಳ ವಿರುದ್ಧ ಮಾತನಾಡುವ ಭರಾಟೆಯಲ್ಲಿ ಗ್ಯಾರಂಟಿ ಯೋಜನೆಯಿಂದ ಮಹಿಳೆಯರು ಸ್ವಲ್ಪ ದಾರಿ ತಪ್ಪಿದ್ದಾರೆ ಎಂದು ನಾಲಿಗೆಯನ್ನು ಹರಿಬಿಟ್ಟ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರಿಗೆ ನೀವು ಸಂಪೂರ್ಣ ದಾರಿ ತಪ್ಪಿದ್ದೀರಿ ಮಹಿಳೆಯರ ಕುರಿತು ಕನಿಷ್ಟ ಗೌರವ ಇಲ್ಲ. ನೀವು ಕ್ಷಮೆ ಕೇಳಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಜಂಟಿ ಕಾರ್ಯ ದರ್ಶಿ ಜೆ ಚಂದ್ರ ಕುಮಾರಿ ಒತ್ತಾಯಿಸಿದರು.
ಭಾರತದ ಈ ಸಂದರ್ಭದಲ್ಲಿ ಮಹಿಳೆಯರ ನಡೆ ನುಡಿಗಳನ್ನು ಅವರ ನಡತೆಗೆ ಹೋಲಿಸುವ ಮನೋಭಾವ ಇಂದಿಗೂ ಪ್ರಚಲಿತವಿದೆ. ಅಂತಹದೇ ಮನಃಸ್ಥಿತಿಯನ್ನು ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹೊಂದಿರುವುದು ಅವರು ರಾಜಕೀಯ ಅನುಕೂಲಕ್ಕಾಗಿ ಬಿ.ಜೆ. ಪಿ.ಯ ಜೊತೆ ಸಖ್ಯ ಬೆಳೆಸಿದ್ದಷ್ಟೇ ಅಲ್ಲ ಬದಲಿಗೆ ಆಳದಲ್ಲಿ ಅವರು ಮನುವಾದದ ಸಮರ್ಥಕರು ಎಂದು ಸ್ಪಷ್ಟವಾಗುತ್ತದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಭಾವಿಸುತ್ತದೆ.
ರಾಜ್ಯದಲ್ಲಿ ಈಗ ಭೀಕರ ಬರಗಾಲವಿದೆ. ಕೋವಿಡ್ ಹೊಡೆತದಿಂದ ಇನ್ನೂ ಜನ ಹೊರ ಬಂದಿಲ್ಲ. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳು ಮಹಿಳೆಯರ ಬದುಕಿಗೆ ಅಲ್ಪ ಸ್ವಲ್ಪ ಆಸರೆಯಾಗಿದೆ ಎಂಬ ಕನಿಷ್ಟ ಪ್ರಜ್ಞೆಯೂ ಇಲ್ಲದವರು ಈ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಗಳಾಗಿದ್ದವರು ಎಂಬುದು ನಾವೆಲ್ಲ ಯೋಚಿಸಬೇಕಾದ ಸಂಗತಿ. ಮೋಧಿ ಸರ್ಕಾರ 2014 ರಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದು ಈ ಅವಧಿ ಯಲ್ಲಿ 40 ಲಕ್ಷ ಮಹಿಳೆಯರು ಉದ್ಯೋಗದಿಂದ ಹೊರಗಸೆಯಲ್ಪಟ್ಟರು.
ಈ ಅವಧಿ ಯಲ್ಲಿ ಜೀವ ನಾವಶ್ಯಕ ವಸ್ತುಗಳ ಬೆಲೆ ಗಳು ತೀವ್ರ ಎರಕೆ ಯಾಗದೆ, ಗ್ಯಾಸ್ ಸಿಲಂಡರ್ 410 ರಿಂದ 1000 ಎರಕೆ, ಪೆಟ್ರೋಲ್, ಡಿಸೈಲ್ ಬೆಲೆ ಗಳು ದುಃಪ್ಪಟ್ಟು, ಮೈಕ್ರೋ ಫೈನಾನ್ಸ್ ಸುಳಿ ಯಲ್ಲಿ ಮಹಿಳೆಯಾರು ಸಾಲದ ಸುಳಿ ಯಲ್ಲಿ ಸಿಕ್ಕಿದ್ದಾರೆ.
ಈ ಕಾರಣದಿಂದಲೇ ರಾಜ್ಯದ ಮಹಿಳೆಯರು ಮತ ಹಾಕುವ ಮುನ್ನ ಯೋಚಿಸಬೇಕು. ಮಹಿಳೆಯರ ಕುರಿತು ಇಷ್ಟು ಲಘು ಧೋರಣೆ ಹೊಂದಿರುವ, ಮಹಿಳೆಯರ ಕಷ್ಟಕ್ಕೆ ಸಿಕ್ಕ ಕನಿಷ್ಟ ಆಸರೆಯನ್ನೇ ಮೂದಲಿಸಿ, ಮಹಿಳೆಯರ ಬಗ್ಗೆ ಕೀಳು ಮನೋಭಾವ ಸೂಚಿಸುವ ಮಾತುಗಳನ್ನು ಆಡಿದ ಕುಮಾರಸ್ವಾಮಿ ಯವರ ಜಾತ್ಯಾತೀತ ಜನತಾದಳ ಪಕ್ಷಕ್ಕೆ ಮತ್ತು ಅವರು ಬೆಂಬಲಿಸುವ ಭಾರತೀಯ ಜನತಾ ಪಕ್ಷಕ್ಕೆ ಯಾವುದೇ ಕಾರಣಕ್ಕೆ ಮತ ಹಾಕಬಾರದು ಎಂದು ಮನವಿ ಮಾಡಿದರು.
ಉದ್ಯೋಗ ಖಾತ್ರಿ ಯೋಜನೆ ಯಲ್ಲಿ ವರ್ಷಕ್ಕೆ 200 ದಿನ ಕೆಲಸ ದಿನಕ್ಕೆ 600 / ಕೂಲಿ ಕೊಡಿ ಎಂದರೆ ನರೇಂದ್ರ ಮೋದಿ ಮುವತ್ತು ಸಾವಿರ ಕೋಟಿ ಹಣ ಕಡಿತ ಮಾಡಿದೆ ಮತ್ತೆ ಆಯ್ಕೆಯಾದರೆ ಗ್ರಾಮೀಣ ಮಹಿಳೆಯರಿಗೆ ಡ್ರೊನ್ ದೀದಿ ಹೆಸರಿನ ಯೋಜನೆಯಡಿ ಡ್ರೋನ್ ಚಾಲನೆ ತರಬೇತಿ ಕೊಡುವುದಾಗಿ ಬಿ.ಜೆ.ಪಿ. ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಉಜ್ವಲಾ ಯೋಜನೆಯ ಮೂಲಕ ಮಹಿಳೆಯರಿಗೆ ಹೊಗೆ ರಹಿತ ಅಡುಗೆಮನೆ ಕೊಡುವುದಾಗಿ ಸಾವಿರಾರು ಕೋಟಿ ಜಾಹಿರಾತಿಗೆ ಖರ್ಚು ಮಾಡಿ ಒಂದು ಸಿಲಿಂಡರ್ ನಂತರ ಯಾವ ಉಜ್ವಲಾನೂ ಕೊಡಲಿಲ್ಲ. ಇಂಥವರು ನಮ್ಮ ದೇಶಕ್ಕೆ ಮತ್ತೆ ಅಗತ್ಯವಿದೆಯೇ ಎಂದು ಪ್ರಶ್ನೀಸಿದರು.
ಜನವಾಧಿ ಮಹಿಳಾ ಸಂಘ ವಿಜಯನಗರ ಜಿಲ್ಲಾ ಮುಖಂಡರು ವಿನೋದ ಮಾತನಾಡುತ್ತ ಬೆಲೆ ಏರಿಕೆ, ನಿರುದ್ಯೋಗಗಳು ಬಾಧಿಸುತ್ತಿವೆ. ಮಹಿಳೆಯರ ಮೇಲೆ ಅತ್ಯಾಚಾರ ದೌರ್ಜನ್ಯಗಳು ಅನಿಯಂತ್ರಿತವಾಗಿವೆ. ಕೇಂದ್ರದ ಸರಕಾರ ಕ್ಕೆ ಇದಾವುದರ ಕುರಿತ ಕಿಂಚಿತ್ತೂ ಕಾಳಜಿ ಇಲ್ಲದೆಯೇ ಜನರನ್ನು ಧರ್ಮ, ಜಾತಿಯ ಹೆಸರಿನಲ್ಲಿ ಒಡೆದಾಳುವ ನೀತಿ ಅನುಸರಿಸುತ್ತಿದೆ ಎಂದರು.
ಮಹಿಳೆಯರ ಸ್ಥಿತಿ ಗತಿಗಳು ಈ ಹತ್ತು ವರ್ಷಗಳಲ್ಲಿ ತೀವ್ರ ಕುಸಿತ ಕಂಡಿದ್ದು ನಮ್ಮ ಭವಿಷ್ಯವನ್ನು ನಾವೀಗ ನಿರ್ಧರಿಸುವ ಕಾಲ ಬಂದಿದೆ. ಪ್ರಜಾಪ್ರಭುತ್ವ ದ ಪರಮೋಚ್ಚ ಹಕ್ಕು ಮತ್ತು ಕರ್ತವ್ಯ ವಾಗಿ ಮತದಾನ ಮಾಡಿ, ಮಾಡುವಾಗ ಧರ್ಮ ದೇವರ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತ ಸಂವಿಧಾನವನ್ನು ಕಡೆಗಣಿಸುವವರನ್ನು ಯಾವುದೇ ಕಾರಣಕ್ಕೂ ಜನವಾದಿ ಮಹಿಳಾ ಸಂಘ ಬೆಂಬಲಿಸಲಾರದು. ದೇಶದ ಭವಿಷ್ಯ ನಿರ್ಧಾರದ ಸಂದರ್ಭದಲ್ಲಿ ನಮ್ಮ ಹೊಣೆಗಾರಿಕೆಯನ್ನು ನಿಭಾಯಿಸೋಣ ಎಂದರು.
ವೇದಿಕೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಲಕ್ಸ್ಮಿದೇವಿ ಎಚ್ ಬಿ ಹಳ್ಳಿ ತಾಲೂಕಾ ಅಧ್ಯಕ್ಷರು , ಅಂಭಿಕ ಸದಸ್ಯರು ಎಚ್ ಬಿ ಹಳ್ಳಿ, ತರಂಗಣಿ ಬಳ್ಳಾರಿ ಜಿಲ್ಲಾ ಅಧ್ಯಕ್ಷರು, ರುದ್ರಮ್ಮ ಬಳ್ಳಾರಿ ಜಿಲ್ಲಾ ಸಮಿತಿ, ಮಂಗಮ್ಮ ಬಳ್ಳಾರಿ ಜಿಲ್ಲಾ ಸಮಿತಿ ಸದಸ್ಯರು ಗಳು ಮುಂತಾದವರು ಉಪಸ್ಥಿತರಿದ್ದರು.
