IMG-20240430-WA0045

ಬಿಜೆಪಿ ಅಧಿಕಾರಿದಲ್ಲಿರುವ ಯಾವ ರಾಜ್ಯದಲ್ಲೂ ದಲಿತರಿಗೆ ಆರ್ಥಿಕ ಶಕ್ತಿ ನೀಡುವ SCP/TSP ಕಾಯ್ದೆ ಜಾರಿ ಮಾಡದ ಬಿಜೆಪಿ, ಕೇವಲ ಪತ್ರಿಕಾ ಜಾಹಿರಾತು ಮೂಲಕ ಹಾದಿ ತಪ್ಪಿಸುತ್ತಿದೆ

ಗಂಗಾವತಿ ನನಗೆ ಮನೆ ಇದ್ದಂತೆ – ಸಿಎಂ ಸಿದ್ದರಾಮಯ್ಯ

ಈ ಬಾರಿಯೂ ಗಂಗಾವತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅತ್ಯಂತ ಹೆಚ್ಚು ಮತಗಳನ್ನು ಕಾಂಗ್ರೆಸ್ ಗೆ ಕೊಡಿಸಿ: ಸಿ.ಎಂ.ಸಿದ್ದರಾಮಯ್ಯ ಕರೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ (ಗಂಗಾವತಿ) ಏ 30: ನಾನು 50 ವರ್ಷದಿಂದ ರಾಜಕಾರಣದಲ್ಲಿದ್ದೇನೆ. ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿಯನ್ನೇ ಇವತ್ತಿನವರೆಗೂ ನಾನು ನೋಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾರವಾಗಿ ನುಡಿದರು.

ಗಂಗಾವತಿಯಲ್ಲಿ ನಡೆದ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಬೃಹತ್ ಜನ ಸಾಗರವನ್ನು ಉದ್ಘಾಟಿಸಿ ಮಾತನಾಡಿದರು.

ಪತ್ರಿಕೆಗಳಲ್ಲಿ ಬಿಜೆಪಿ ಇಂದು ಸುಳ್ಳು ಜಾಹಿರಾತು ನೀಡಿದೆ. ಬಿಜೆಪಿ ಅಧಿಕಾರಿದಲ್ಲಿರುವ ಯಾವ ರಾಜ್ಯದಲ್ಲೂ ನಮ್ಮ ಹಾಗೆ ದಲಿತರಿಗೆ ಆರ್ಥಿಕ ಶಕ್ತಿ ನೀಡುವ SCP/TSP ಕಾಯ್ದೆ ಜಾರಿ ಮಾಡದ ಬಿಜೆಪಿ, ಕೇವಲ ಪತ್ರಿಕಾ ಜಾಹಿರಾತು ಮೂಲಕ ಹಾದಿ ತಪ್ಪಿಸುತ್ತಿದೆ. ಈ ಸುಳ್ಳು ಜಾಹಿರಾತು ನಂಬಿ ಮೋಸ ಹೋಗಬೇಡಿ ಎಂದರು.

ಗಂಗಾವತಿ ನನಗೆ ಮನೆ ಇದ್ದಂತೆ ; ನನಗೆ ಗಂಗಾವತಿ ಮನೆ ಇದ್ದಂಗೆ. ನಾನು ಲೋಕಸಭೆಗೆ ನಿಂತಿದ್ದಾಗ ಗಂಗಾವತಿಯಲ್ಲಿ ಬಹುಮತ ಸಿಕ್ಕಿತ್ತು. ಈ ಋಣ ನಾನು ಯಾವತ್ತೂ ಮರೆಯಲ್ಲ. ಈ ಬಾರಿಯೂ ಗಂಗಾವತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅತ್ಯಂತ ಹೆಚ್ಚು ಮತಗಳನ್ನು ಕಾಂಗ್ರೆಸ್ ಗೆ ಕೊಡಿಸಿ ಅಭೂತಪೂರ್ವವಾಗಿ ಗೆಲ್ಲಿಸಿ ಎಂದು ಕರೆ ನೀಡಿದರು.

ಸಚಿವರಾದ ಶಿವರಾಜ ತಂಗಡಗಿ, ಬೈರತಿ ಸುರೇಶ್, ಜಿಲ್ಲೆಯ ಶಾಸಕರುಗಳು, ಮಾಜಿ ಸಚಿವರು ಮತ್ತು ಜಿಲ್ಲಾ ಹಾಗೂ ಬ್ಲಾಕ್ ಮಟ್ಟದ ಮುಖಂಡರುಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಸಚಿವರುಗಳಾದ ಶಿವರಾಜ ತಂಗಡಗಿ,ಭೈರತಿ ಸುರೇಶ, ಮಾಜಿ ಸಂಸದ ಸಂಗಣ್ಣ ಕರಡಿ,ಮಾಜಿ ಸಚಿವರುಗಳಾದ ಆಂಜನೇಯ ,ಮಲ್ಲಿಕಾರ್ಜುನವಾಗಪ್ಪ, ಮಾಜಿ ಎಂಎಲ್ ಸಿ ಹೆಚ್.ಆರ್.ಶ್ರೀ ನಾಥ,ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ,ಜಿಲ್ಲ ಕಾಂಗ್ರೆಸ್ ಅಧ್ಯ ಕ್ಷ ಅಮರೆಗೌಡ ಭಯ್ಯಾಪುರ ಶ್ರೀ ಮತಿ ಲಲಿತಾರಾಣಿ ರಾಯಲು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!