
ಬಳ್ಳಾರಿ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲುಗೆ ಮತ ನೀಡಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 5- ಸಂಪೂರ್ಣ ಅಭಿವೃದ್ಧಿ ಆಗಬೇಕೆಂದರೆ, ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ, ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು ಅವರಿಗೆ, ಮತದಾರರು ಮತ ನೀಡಬೇಕೆಂದು, ಕೌಲ್ ಬಜಾರ್ ವಿಭಾಗದ ಬಿಜೆಪಿ ಮಂಡಲ ಅಧ್ಯಕ್ಷ, ವಿ ನಾಗರಾಜ್ ರೆಡ್ಡಿ ಕರೆ ನೀಡಿದರು.
ಇಂದು ಕೌಲ್ ಬಜಾರ್ ಬಿಜೆಪಿ ಕಚೇರಿಯಲ್ಲಿ, ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರವಿದ್ದಾಗ ಬಳ್ಳಾರಿಗಾಗಿ ಹಲವಾರು ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳಿಸಿರುವ ದಾಗೆ ತಿಳಿಸಿದರು.
ಅಭಿವೃದ್ಧಿಯ ಜೊತೆಗೆ, ಬಡ ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳು ಕಲ್ಪಿಸಲು, ಬಿ ಶ್ರೀರಾಮುಲು ಶ್ರಮ ಪಟ್ಟಿರುವುದಾಗಿ ತಿಳಿಸಿದರು.
ಬಳ್ಳಾರಿಯಲಿ ಇನ್ನೂ ಅಭಿವೃದ್ಧಿ ಕೆಲಸ ಆಗಬೇಕಿದೆ, ಅದರ ಜೊತೆಗೆ ಬಡ ಕುಟುಂಬಗಳ ಅಭಿವೃದ್ಧಿಗಾಗಿ ಆಸಕ್ತಿ ಯುಳ್ಳ ಬಿ ಶ್ರೀರಾಮುಲು ಅವರಿಗೆ ಮತ ನೀಡಬೇಕೆಂದು ಈ ಸಂದರ್ಭದಲ್ಲಿ ಕೋರಿದರು.
ಕಾರ್ಯಕ್ರಮದಲ್ಲಿ, ಬಿಜೆಪಿ ಮುಖಂಡರಾದ, ವೆಂಕಟೇಶ್, ಶಂಕ್ರಪ್ಪ, ಶ್ಯಾಮ ಸುಂದರ್, ಜೋಸೆಫ್ ಇತರರು ಇದ್ದರು.