
ಅಥ್ಲೆಟಿಕ್ಸ್ ಆಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
ಕರುನಾಡ ಬೆಳಗು ಸುದ್ದಿ
ಕುಕನೂರು 06- ದಾವಣಗೆರೆಯ ವಿಶ್ವಚೇತನ ವಿದ್ಯಾನಿಕೇತನ ಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಕುಮಾರಿ ಕಾವ್ಯ ಬಸವರಾಜ ಕೊಡ್ಲಿ ಕುಕನೂರು ಎಂಬ ವಿದ್ಯಾರ್ಥಿನ ಇತ್ತೀಚಿಗೆ ನಡೆದ ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ತ್ರಿಬಲ್ ಜಂಪ್ ದ್ವಿತೀಯ ಸ್ಥಾನ ಮತ್ತು ಲಾಂಗ್ ಜಂಪ್ ನಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ.
ವಿಶ್ವ ಚೇತನ ವಿದ್ಯಾನಿಕೇತನ ಪಿಯು ಕಾಲೇಜಿನ ಪ್ರಿನ್ಸಿಪಾಲರು ಶಿಕ್ಷಕರ ವರ್ಗ ಹಾಗೂ ಪಾಲಕರು ಅಭಿನಂದಿಸಿದ್ದಾರೆ.