
ಹುಲಿಹೈದರ : ಬಸವಣ್ಣನವರ ಭಾವಚಿತ್ರ ಮೆರವಣಿಗೆ
ಕರುನಾಡ ಬೆಳಗು ಸುದ್ದಿ
ಹುಲಿಹೈದರ, 10- ಗ್ರಾಮದ ಶ್ರೀ ವೀರಶೈವ ಲಿಂಗಾಯತ ಯುವಕ ಸಂಘದ ಸಮುದಾಯ ಭವನದಿಂದ ಆರಂಭವಾದ ಭಾವಚಿತ್ರ ಮೆರವಣಿಗೆ ಬಸ್ ನಿಲ್ದಾಣ, ಬಸವಣ್ಣ ವೃತ್ತದ ಮಾರ್ಗವಾಗಿ ಸ್ವ ಸ್ಥಾನಕ್ಕೆ ಆಗಮಿಸಿತು.
ಗ್ರಾಮದ ನೂರಾರು ಮಹಿಳೆಯರು ಮತ್ತು ಯುವತಿಯರು ಕಳಶದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ತಾಶ ಸೇರಿ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಜಯಂತಿ ನಿಮಿತ್ತ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಗ್ರಾಮದ ಶ್ರೀ ವೀರಶೈವ ಲಿಂಗಾಯತ ಯುವಕ ಸಂಘದ ಕಾರ್ಯಕರ್ತರು ಕಾರ್ಯಕ್ರಮ ಆಯೋಜಿಸಿದ್ದರು.