ಧರ್ಮದ ವಿಷ ಬೀಜ ಬಿತ್ತುವ ನರೇಂದ್ರ ಮೋದಿ ನಡೆ ಸರಿ ಇಲ್ಲ : ಬಿ.ಕೆ.ಹರಿಪ್ರಸಾದ್
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 21- ಧರ್ಮ ಪ್ರಭುತ್ವ ಮತ್ತು ರಾಜ ಪ್ರಭುತ್ವದ ಮಧ್ಯದಲ್ಲಿ ಪ್ರಜಾಪ್ರಭುತ್ವ ಬುಡ ಮೇಲಾಗುತ್ತಿದೆ ಎಂದು ಕರ್ನಾಟಕ ವಿಧಾನ ಪರಿಷತ್ ಶಾಸಕ ಬಿ ಕೆ ಹರಿಪ್ರಸಾದ್ ಅವರು ಅಭಿಪ್ರಾಯಪಟ್ಟರು.
ಸಿರುಗುಪ್ಪ ತಾಲೂಕು ಸಿರಿಗೇರಿ ಗ್ರಾಮದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಅನ್ನಪೂರ್ಣ ಪ್ರಕಾಶನ ಪ್ರಕಟಿಸಿದ ಹುಲಿಕಟ್ಟಿ ಚನ್ನಬಸಪ್ಪ ಅವರ ಕಲ್ಲಂಗಡಿಯಲ್ಲಿ ಕಂಡ ಭಾರತ ಕವನ ಸಂಕಲವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಾ ಹಿಂದೆ ಸಾರ್ವಜನಿಕ ವಲಯದಲ್ಲಿ ಧರ್ಮ ಪ್ರಭುತ್ವದ ಮನಸ್ಮೃತಿ ಮತ್ತು ರಾಜ ಪ್ರಭುತ್ವದ ರಾಜರ ಮಾರ್ಗದಲ್ಲಿ ವ್ಯವಸ್ಥೆ ನಡೆಯುತ್ತಿತ್ತು ಈಗ ಹೊಸ ಹಕ್ಕು ಶಾಹಿಯಲ್ಲಿ ಮುನ್ನಡೆಯುತ್ತಿದೆ ಬಿಜೆಪಿ ಸರ್ವಾಧಿಕಾರ ಧೋರಣೆ ಮಾಡುತ್ತಿದ್ದು ಧರ್ಮದ ವಿಷ ಬೀಜವನ್ನು ಬಿತ್ತುವ ಹುನ್ನಾರ ನಡೆಸುತ್ತಿದೆ ಎಂದು ಅವರು ಟೀಕಿಸಿದರು.
ಗೋದ್ರಾ ಹತ್ಯೆ ಮಣಿಪುರ ಹಿಂಸಾಚಾರ ಮತ್ತು ಪುಲ್ವಾಮ ದಾಳಿಯ ಘಟನೆಯನ್ನು ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ನಡೆಯನ್ನು ಖಂಡಿಸಿದರು.
ಹುಲಿಕಟ್ಟಿ ಚೆನ್ನಬಸಪ್ಪ ಅನ್ನಪೂರ್ಣ ಪ್ರಕಾಶನ ಸಿರಿಗೇರಿ ಸ್ವಾಮಿ ಶಂಭುಲಿಂಗೇಶ್ವರ ದೇವಸ್ಥಾನದ ಕಮಿಟಿ ಅಧ್ಯಕ್ಷ ಹೂಗಾರ ಬಸವರಾಜ ಹೆಚ್ಎಂ ಶಶಿಧರ ಸ್ವಾಮಿ ಕೆಎಂ ದೇವರಾಜಯ್ಯ ಸ್ವಾಮಿ ಬಕಾಡೆ ಪಂಪಾಪತಿ ಅಬ್ದುಲ್ ನಬಿ ಇತರರು ಇದ್ದರು
