
ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯ ಸ್ವೀಪ್ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ವಿಜಯನಗರ, 1- ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯು ಜೂನ್ 03ರಂದು ನಡೆಯಲಿದ್ದು, ಎಲ್ಲಾ ಪದವೀಧರ ಮತದಾರರು ತಮ್ಮ ಮತವನ್ನು ಕಡ್ಡಾಯವಾಗಿ ಅಸಿಂಧುವಾಗದAತೆ ಕ್ರಮ ಬದ್ಧವಾಗಿ ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಹೇಳಿದರು.
ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆ 2024ರ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಸ್ವೀಪ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಜಯನಗರ ಜಿಲ್ಲಾ ವ್ಯಾಪ್ತಿಯಲ್ಲಿನ ಎಲ್ಲಾ ಪದವೀಧರ ಮತದಾರರು ಈ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಸ್ವೀಪ್ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳ ಮಹತ್ವ ಅರಿತು ತಪ್ಪದೇ ಮತದಾನ ಮಾಡಬೇಕು. ಈ ಬಾರಿ ವಿಜಯನಗರ ಜಿಲ್ಲೆಯಲ್ಲಿ ಶೇಕಡಾವಾರು ಮತದಾನ ಪ್ರಮಾಣ ಹೆಚ್ಚಾಗಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸದಾಶಿವ ಪ್ರಭು ಬಿ ಅವರು ಮಾತನಾಡಿ, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಜೂನ್ 03ರಂದು ಎಲ್ಲಾ ಪದವೀಧರ ಮತದಾರರು ಕಡ್ಡಾಯವಾಗಿ ಚುನಾವಣೆಯಲ್ಲಿ ಭಾಗವಹಿಸಿ ಮತವು ಅಸಿಂಧುವಾಗದAತೆ ಎಚ್ಚರಿಕೆ ವಹಿಸಿ ನೈತಿಕವಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ಈಶಾನ್ಯ ಪದವೀಧರ ಮತಕ್ಷೇತ್ರದ ಜಿಲ್ಲಾಮಟ್ಟದ ಚುನಾವಣಾ ಮಾಸ್ಟರ್ ಟ್ರೇನರ್ ಸೋಮಪ್ಪ ಬಡಿಗೇರ ಅವರು ಮಾತನಾಡಿ, ಮತದಾನದ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ನೀಡಿದ ಅಂಶಗಳನ್ನು ಪಾಲಿಸಬೇಕು ಎಂದು ತಿಳಿಸಿದರು. ಕಡ್ಡಾಯವಾಗಿ ಮತದಾನ ಕೇಂದ್ರದಲ್ಲಿ ನೀಡಿದ ನೇರಳೆ ಬಣ್ಣದ ಪೆನ್ನು ಅನ್ನು ಮತದಾನಕ್ಕೆ ಬಳಸುವುದು., ಈ ಚುನಾವಣೆಯಲ್ಲಿ ಕ್ರ.ಸಂ. 1 ರಿಂದ 19ರ ಕ್ರಮ ಸಂಖ್ಯೆಯವರೆಗೆ ಪ್ರಾಶಸ್ತ್ಯ ಮತ ಚಲಾಯಿಸಲು ಅವಕಾಶವಿರುತ್ತದೆ., ಸಂಖ್ಯೆ 1 ಅನ್ನು ಕಡ್ಡಾಯವಾಗಿ ಮತದಾನದಲ್ಲಿ ಪ್ರಾಶಸ್ತ್ಯವಾಗಿ ಬಳಸಬೇಕು., ನಿರಂತರವಾಗಿ ನೀಡಿದ ಸಂಖ್ಯೆಗಳ ಮತ ಪತ್ರವನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ., ಒಂದೇ ಸಂಖ್ಯೆಯನ್ನು ಇಬ್ಬರು ಅಭ್ಯರ್ಥಿಗಳಿಗೆ ನೀಡಿದರೆ ಮತವು ಅಸಿಂಧುವಾಗುತ್ತದೆ., ಸಂಖ್ಯೆ 2 ರಿಂದ ಮತದಾನ ಮಾಡಿದರೆ ಮತ ಪತ್ರ ಅಸಿಂಧುವಾಗುತ್ತದೆ., ಚುನಾವಣಾ ಆಯೋಗದ ನಿರ್ದೇಶನದಂತೆ ಮತಗಟ್ಟೆ ಅಧಿಕಾರಿಗಳು ನೀಡಿದ ಪೆನ್ನನ್ನು ಹೊರತುಪಡಿಸಿ ಇತರೆ ಯಾವುದೇ ಪೆನ್ನಿನಿಂದ ಮತ ಪತ್ರದಲ್ಲಿ ಮತ ಚಲಾಯಿಸಿದರೆ ಸದರಿ ಮತವು ಅಸಿಂಧುವಾಗುತ್ತದೆ., ಮತ ಪತ್ರದಲ್ಲಿ ಸಂಖ್ಯೆಗಳನ್ನು ಹೊರತುಪಡಿಸಿ ಅಕ್ಷರದಲ್ಲಿ ನಮೂದಿಸಿದಲ್ಲಿ ಸದರಿ ಮತ ಪತ್ರವು ಅಸಿಂಧುವಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಯುವರಾಜ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿ.ಆರ್.ಪಿ., ಬಿ.ಆರ್.ಸಿ., ಇ.ಸಿ.ಓ., ಸಿ.ಆರ್.ಸಿ ., ಸಿ.ಆರ್.ಪಿ. ಇನ್ನೀತರರು ಇದ್ದರು.