
16 ತೊಲೆ ಬಂಗಾರದ ಆಭರಣ ದ್ವಿಚಕ್ರ ವಾಹನ ಪೊಲೀಸರಿಂದ ವಶ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 4- ತಾಲೂಕು ಇತ್ತೀಚೆಗೆ ಸಿರಿಗೇರಿ ಬಳ್ಳಾರಿ ಗ್ರಾಮೀಣ ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ 6 ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿ ಕೆ ಕಾರ್ತಿಕ್ ಎಂಬ ವ್ಯಕ್ತಿಯಿಂದ 9. 60 ಲಕ್ಷ ರೂ ಮೌಲ್ಯದ 16 ತೊಲೆ ಬಂಗಾರದ ಆಭರಣಗಳು ಹಾಗೂ 1.50 ರೂ ಮೌಲ್ಯದ ಒಂದು ಬಜಾಜ್ ಕಂಪನಿಯ ಪಲ್ಸರ್ ಮೋಟರ್ ಸೈಕಲ್ ಒಟ್ಟು ಅಂದಾಜು ಮೌಲ್ಯ 11, 10,000 ರೂ. ಜಪ್ತು ಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ -1 ಕೆ ಪಿ ರವಿಕುಮಾರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ -2 ನವೀನ್ ಕುಮಾರ್ ಸಿರುಗುಪ್ಪ ಉಪ ವಿಭಾಗ ಡಿ ವೈ ಎಸ್ ಪಿ ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ಸಿರುಗುಪ್ಪ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ವೈ ಎಸ್ ಹನುಮಂತಪ್ಪ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಮ್ಮಣ್ಣ ಹಚ್ಚೋಳ್ಳಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರಶುರಾಮ ಸಿಬ್ಬಂದಿಗಳಾದ ವಿಷ್ಣು ಮೋಹನ್ ಬಾಲಚಂದ್ರ ರಾಥೋಡ್ ದ್ಯಾಮನ ಗೌಡ ಈರಣ್ಣ ನಾಗರಾಜ ರಾಮದಾಸ್ ಅನ್ವರ್ ಭಾಷಾ ಸೇರಿ ಪ್ರಕರಣವನ್ನು ಭೇದಿಸಿದ್ದಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .