WhatsApp Image 2024-06-08 at 7.07.40 PM (1)

ಕುಟುಗನಹಳ್ಳಿಯಲ್ಲಿ ಅಸ್ತಮಾ ಕಾಯಿಲೆಗೆ : ಔಷಧಿ ಪಡೆಯಲು ಕಿಕ್ಕಿರಿದ ಮಂದಿ
ಹೊರ ರಾಜ್ಯ, ಜಿಲ್ಲೆಯಿಂದ ಆಗಮಿಸಿದ ಜನ ಸಾಗರ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 8- ತಾಲೂಕಿನ ಕುಟುಗನಹಳ್ಳಿ ಗ್ರಾಮದಲ್ಲಿ ಕುಲಕರ್ಣಿ ಕುಟುಂಬದಿAದ ಅಸ್ತಮಾ ರೋಗಕ್ಕೆ ಶನಿವಾರ ಔಷಧಿ ವಿತರಿಸಿದ್ದು, ಔಷಧಿ ಸೇವಿಸಲು ಹೊರ ಜಿಲ್ಲೆ, ರಾಜ್ಯದಿಂದ ಅಪಾರ ಜನ ಆಗಮಿಸಿ ಔಷದಿ ಸೇವಿಸಿದರು.

ಶನಿವಾರ ಬೆಳಿಗ್ಗೆ ಔಷಧ ವಿತರಕ ಅಶೋಕ ಕುಲಕರ್ಣಿ ಅವರು, ಬೆಳಗ್ಗೆಯಿಂದಲೇ ಔಷಧಿ ವಿತರಣೆ ಮಾಡಿದರು. ಮೃಗಶಿರ ಮಳೆ ಸೇರುವ ಹೊತ್ತಿಗೆ ಔಷಧಿ ಸೇವಿಸುವ ಹಿನ್ನಲೆ, ಶುಕ್ರವಾರ ಒಂದು ದಿನ ಮುಂಚೆಯೇ ಕುಟುಗನಹಳ್ಳಿಯಲ್ಲಿ ಜನರು ಜಮಾಯಿಸಿದ್ದರು.

ಪುಟ್ಟ ಗ್ರಾಮದಲ್ಲಿ ಸೇರಿದ್ದ ಸಾವಿರಾರ ಜನರು, ಇಲ್ಲಿನ ಶಾಲಾ ಆವರಣ, ದೇವಸ್ಥಾನ, ಬೀದಿ ಬದಿಯಲ್ಲಿ ತಂಗಿದ್ದರು. ರಾತ್ರಿ ವೇಳೆ ಮಳೆ ಸುರಿದರೂ ಲೆಕ್ಕಿಸದೇ ಔಷಧಿ ಪಡೆಯಲು ಬಂದಿದ್ದರು.

ಮೃಗಶಿರ ಮಳೆ ಸೇರುವ ಸಂದರ್ಭದಲ್ಲಿ ಅಸ್ತಮಾ ರೋಗಕ್ಕೆ ಔಷಧಿ ನೀಡುವ ಪದ್ದತಿಯನ್ನು ವ್ಯಾಸರಾವ್ ಕುಲಕರ್ಣಿ ಅವರು ಆರಂಭಿಸಿದರು. ನಂತರ ಈಗ ಅವರ ಪುತ್ರ ಅಶೋಕ ಕುಲಕರ್ಣಿ ಮುಂದುವರೆಸಿಕೊಂಡು ಬಂದಿದ್ದಾರೆ.

ಜನರಿಗೆ ಔಷಧಿ ನೀಡುವ ಹಿಂದಿನ ಏಳು ದಿನಗಳ ಕಾಲ ಔಷಧಿ ವಿತರಕರು ಊಟ ಮಾಡದೇ ಹಣ್ಣು ಮತ್ತು ಹಾಲನ್ನು ಮಾತ್ರ ಸೇವಿಸುತ್ತಾರೆ. ಇನ್ನು ಔಷಧಿಯನ್ನು ಹಳೆ ಬೆಲ್ಲ ಹಾಗೂ ನಾನಾ ಗಿಡಮೂಲಿಕೆಯಿಂದ ತಯಾರಿಸಲಾಗುತ್ತದೆ. ಇದು ಗೋಲಿಯಾಕಾರದಲ್ಲಿರುತ್ತದೆ. ಇದನ್ನು ಸೇವಿಸಿದರೆ ಕಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆಯಿಂದ ಜನರು ಇಲ್ಲಿಗೆ ಬರುವರು.

ಕಳೆದ ಹಲವು ವರ್ಷಗಳಿಂದ ಕುಟುಗನಹಳ್ಳಿಗೆ ಅಸ್ತಮಾ ಔಷಧಿ ಸೇವಿಸಲು ನೆರೆಯ ಆಂಧ್ರ, ತಮಿಳನಾಡು, ತೆಲಂಗಾಣ, ಮಹಾರಾಷ್ಟ್ರ. ಗೋವಾ ಸೇರಿದಂತೆ ಅನೇಕ ಕಡೆಗಳಿಂದ ಸಾವಿರಾರು ಜನ ಆಗಮಿಸುತ್ತಾರೆ. ಅಂತೆಯೇ ಶನಿವಾರವೂ ಸಾಗರೋಪಾದಿಯಲ್ಲಿ ಜನ ಸೇರಿದ್ದು, ಅಂದಾಜು 1 ಲಕ್ಷ ಜನ ಜಮಾವಣೆಗೊಂಡಿದ್ದರು ಎಂದು ಅಂದಾಜಿಸಲಾಗಿದೆ. ನೆರೆದಿದ್ದ ಜನಕ್ಕೆ ಉಪಹಾರದ ವ್ಯವಸ್ಥೆಯೂ ಮಾಡಲಾಗಿತ್ತು. ಅಲ್ಲದೆ ಗ್ರಾಮದ ರಸ್ತೆಯ ಪಕ್ಕದಲ್ಲಿ ವಿವಿಧ ಹಣ್ಣು, ಪಾನೀಯ ಅಂಗಡಿಗಳನ್ನು ತೆರೆಯಲಾಗಿತ್ತು.

ಶ್ರೀಗಳು ಬೇಟಿ: ಔಷಧಿ ವಿತರಣೆ ಮಾಡುವ ಸ್ಥಳಕ್ಕೆ ಶುಕ್ರವಾರ ಕೊಪ್ಪಳ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಭೇಟಿ ನೀಡಿದ್ದರು. ಔಷಧಿ ವಿತರಕ ಅಶೋಕ ಕುಲಕರ್ಣಿ ಕೋರಿಕೆ ಮೇರೆಗೆ ಭೇಟಿ ನೀಡಿದ ಶ್ರೀಗಳು, ಔಷಧಿ ಸಿದ್ಧಗೊಳಿಸುವುದನ್ನು ವೀಕ್ಷಿಸಿದರು.

ಕುಟುಗನಳ್ಳಿ ಗ್ರಾಮದಲ್ಲಿ ಕಳೆದ 6 ದಶಖಗಳಿಂದ ಕುಲಕರ್ಣಿ ಕುಟುಂಬ ಅಸ್ತಮಾ ರೋಗಿಗಳಿಗೆ ಔಷಧಿಯನ್ನು ವಿತರಿಸುತ್ತಿದೆ. ಸತತ ಮೂರು ವರ್ಷಗಳ ಕಾಲ ಔಷಧಿ ಸೇವಿಸಿದರೆ ರೋಗ ಸಂಪೂರ್ಣ ವಾಸಿಯಾಗುತ್ತದೆ ಎನ್ನುವ ನಂಬಿಕೆ ಜನರದ್ದು.
ಅಡ್ಡಿ : ಔಷದಿ ಪಡೆಯಲು ಜನರಿಗೆ ಹಾಗೂ ಸಂಘಟಕರಿಗೆ ಜಿಟಿ ಜಿಟಿ ಮಳೆ ಅಡ್ಡಿಯಾಗಿದ್ದಂತು ಸತ್ಯ.

Leave a Reply

Your email address will not be published. Required fields are marked *

error: Content is protected !!