ಪ್ರಧಾನಿ ನರೇಂದ್ರ ಮೋದಿ ಚಾರು ಸೌವ ಸೀಟು ಅಂತಾ ಹೇಳಿ ಬರಿ 242 ಕ್ಕೆ ತೃಪ್ತಿ ಪಡಬೇಕಾಗಿದೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 17- ಈ ಬಾರಿ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚಾರು ಸೌವ ಸೀಟು ಬರುತ್ತವೆ ಅಂತಾ ಹೇಳಿದರು ಆದರೆ ಬರಿ 242 ಕ್ಕೆ ತೃಪ್ತಿ ಪಡಬೇಕಾಗಿದೆ ಆದರೆ ದೇಶದಲ್ಲಿ ಅವರಿಗೆ ಸ್ವಷ್ಟ ಬಹು ವಿಲ್ಲದೆ ಸಮಿಶ್ರ ಸರಕಾರ ರಚನೆ ಯಾಗಿದೆ. ಹೀಗಾಗಿ ದೇಶದಲ್ಲಿ ಮೋದಿಯವರು ಯುಗ ಅಂತ್ಯವಾಗಿದೆ ಹತ್ತು ವರ್ಷ ಆಡಳಿತ ನಡೆಸಿದರು ಬಹುಮತಕ್ಕೆ ಬೇಕಾದ ಸಂಖ್ಯೆವನ್ನು ತಲುಪಲಾಗದೆ ಅವರ ಹವಾ ಕಡಿಮೆಯಾಗಿದೆ ಅತಿ ಶೀಘ್ರದಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಪವ೯ ಪ್ರಾರಂಭವಾಗಲಿದೆ. ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.
ಪಟ್ಟಣದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ನೂತನ ಸಂಸದರಾಗಿ ಆಯ್ಕೆಯಾದ ರಾಜಶೇಖರ ಹಿಟ್ನಾಳ ಗೆಲುವಿಗೆ ಶ್ರಮಿಸಿದ ವಿಧಾನಸಭಾ ಕ್ಷೇತ್ರ ಮತದಾರರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೂಪ್ಪಳ ಲೋಕಸಭಾ ಕ್ಷೇತ್ರ 15 ವರ್ಷ ಬಿಜೆಪಿ 3 ಬಾರಿ ಅವರ ಕೈವಶವಾಗಿತ್ತು ಆದರೆ ಈ ಬಾರಿ ಮತದಾರರು ಪ್ರಜ್ಞಾವಂತರಿದ್ದಾರೆ ಚುನಾವಣೆ ಯಾವುದೇ ಜಾತಿ ಧಮ೯ ಹಣದ ಮೇಲೆ ನೆಡಯುವದಿಲ್ಲ ಕೇವಲ ಅಭಿವೃದ್ಧಿ ನೋಡಿ ಮತ ನೀಡುತ್ತಾರೆ ಈ ಸಲ ಮತದಾರರು ನಮ್ಮ ಕಾಂಗ್ರೆಸ್ ಪಕ್ಷದ ರಾಜಶೇಖರ ಹಿಟ್ನಾಳ ಗೆಲುವು ಸಾಧಿಸಿದರಿಂದ ಎಲ್ಲಾ ಮತದಾರರಿಗೆ. ಮುಖಂಡರಿಗೆ ಕಾಯ೯ಕತ೯ರಿಗೆ ನಾನು ಅಭಿನಂದನೆ ತಿಳಿಸುತ್ತೇನೆ ಕೊಪ್ಪಳ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಕೆಲಸಗಳು ನಡೆಯುತ್ತವೆ. ಗದಗ-ವಾಡಿ ಮತ್ತು ಮುಂಡರಬಾದ- ಮೈಹಿಬೂಬನಗರ ರೈಲು ಮಾರ್ಗ ನಿರ್ಮಾಣ. ರಾಷ್ಟ್ರೀಯ ಹೆದ್ದಾರಿ .ಪ್ಲೇ ವರ್ ಇನ್ನೂ ಹಲವಾರು ಕೆಲಸಗಳು ವಾಗುತ್ತವೆ ಎಂದರು.
ಮೋದಿಯವರು ತಮ್ಮ, 10ವಷ೯ ಆಡಳಿತ ಅವಧಿಯಲ್ಲಿ ಯಾವುದೇ ಬಡವರ ಜನಪರ ಕೆಲಸಗಳನ್ನು ಮಾಡಿಲ್ಲ ದೇಶದ ನಿರುದ್ಯೋಗ ಯುವಕರಿಗೆ ಉದ್ಯೋಗ ಭರವಸೆ ಕೂಟ್ಟದರು ದೇಶದ ರೈತರ ಹಣ ದ್ವಿಗುಣ ಮಾಡುತ್ತೇನೆ ಕಪ್ಪುಹಣ ತಂದು ಬಡವರ ಖಾತೆಗೆ ,15 ಲಕ್ಷ ಜಮ್ಮು ಮಾಡುತ್ತೇನೆ ಅಂತಾ ಹೇಳಿದವರು ಇವರು ಯಾವ ಕೆಲಸ ಮಾಡಲಿಲ್ಲ ಅವರು ತಮ್ಮ ಉದ್ರಿ ಬಾಷಣ ಅತಿಯಾದ ಸುಳ್ಳಿನಿಂದ ಜನರ ಜನಪ್ರಿಯತೆ ಕಳೆದುಕೊಂಡಿದ್ದಾರೆ ಎಂದರು ರಾಜ್ಯದ ಜನತೆಗೆ ನಾವು ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ 5 ಗ್ಯಾರಂಟಿ ಯೋಜನೆಯಗಳನ್ನು ನಾವು ರಾಜ್ಯದಲ್ಲಿ ರಾಜ್ಯದ ಜನರ ಆಶೀರ್ವಾದದಿಂದ ಸ್ವಷ್ಟ ಬಹುಮತದಿಂದ 135 ಸೀಟುಗಳನ್ನು ಗೆಲುವ ಮುಖಾಂತರ ಅಧಿಕಾರಕ್ಕೆ ಬಂದ ಕೂಡಲೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಬಡವರ ಹಿತ ಕಾಪಾಡಿದೆ ಇನ್ನೂ ಮುಂದೆ ರಾಜ್ಯದಲ್ಲಿ ಯಾವ ಯೋಜನೆಗಳನ್ನು ರದ್ದುಪಡಿಸುವುದಿಲ್ಲ ಮತ್ತು 5 ವರ್ಷ ನಮ್ಮ ಸರಕಾರ ಸುಭದ್ರವಾಗಿರುತ್ತದೆ ಎಂದು ಹೇಳಿದರು ರಾಜ್ಯದ ಅಭಿವೃದ್ಧಿಗೆ ಅನುದಾನ ಕೊರತೆ ಇಲ್ಲಾ. ಸಿ ಎಂ ಸಿದ್ದರಾಮಯ್ಯನವರು ಇನ್ನೂ 4 ವರ್ಷಗಳ ಅಧಿಕಾರ ಅವಧಿಯಲ್ಲಿ ಈ ರಾಜ್ಯವನ್ನು ಮಾದರಿ ರಾಜವನ್ನಾಗಿ ಮಾಡಲಿದ್ದಾರೆ ಎಂದರು ಬಿಜೆಪಿಯವರು ಹೇಳುವ ಸುಳ್ಳು ಮಾತುಗಳಿಗೆ ಜನತೆ ಕಿವಿಗೂಡಬೇಡಿ ರಾಜ್ಯದಲ್ಲಿ ಸಮಗ್ರ ಅಭಿವೃದ್ಧಿ ಯಾಗುತ್ತವೆ. ರಾಜ್ಯದ ಬಡವರ ಹಿತ ಕಾಪಾಡಿ ಯಾವ ದೇಶದಲ್ಲಿ ಮಾಡಿದ 5 ಗ್ಯಾರಂಟಿ ಯೋಜನೆ ನಮ್ಮ ರಾಜ್ಯದಲ್ಲಿ ಜಾರಿಗೊಳಿಸಿ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಯಾಗಿದ್ದಾರೆ ಎಂದು ಹೇಳಿದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ ಶಾಸಕ ರಾಯರಡ್ಡಿ ಅವರು ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ನವೋದಯ.ಇಂಜನಿಯರಿಂಗ್ ಕಾಲೇಜು ಐಟಿಐ ಕಾಲೇಜು ಪಿಜಿ ಸಂಟರ್. ಪಾಲಿಟೆಕ್ನಿಕ್ ಕಿತ್ತೋರ ರಾಣಿ ಚೆನ್ನಮ್ಮ ವಸತಿ ಮುರಾರ್ಜಿ ವಸತಿ. ರಾಜ್ಯದಲ್ಲಿ ಅತಿ ಹೆಚ್ಚು ಶಾಲಾ ಕಾಲೇಜುಗಳನ್ನು ತಂದು ಯಲಬುರ್ಗಾ ಕ್ಷೇತ್ರದಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡಿದ್ದಾರೆ ಇನ್ನೂ ಹಲವಾರು ಅಭಿವೃದ್ಧಿ ಮಾಡಿ ರಾಜ್ಯದಲ್ಲಿ ನಂ1 ಅಭಿವೃದ್ಧಿ ಹರಿಕಾರ ಎಂದು ಶಾಸಕ ಬಸವರಾಜ ರಾಯರೆಡ್ಡಿ ಅವರು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ರಾಜಶೇಖರ ಹಿಟ್ನಾಳ ಗೆಲುವು ಸಾಧಿಸುವದಕ್ಕೆ ಶ್ರಮಿಸಿದ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರಿಗೆ ಮುಖಂಡರಿಗೆ ಕಾಯ೯ಕತ೯ರಿಗೆ. ಮತದಾರರಿಗೆ ನಮ್ಮ ಅಭಿನಂದನೆಗಳು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಬಯ್ಯಾಪುರ.ನ್ಯೂತನ ಸಂಸದರಾದ ರಾಜಶೇಖರ ಹಿಟ್ನಾಳ ಮಾತನಾಡಿ ಕೂಪ್ಪಳ ಲೋಕಸಭಾ ಕ್ಷೇತ್ರದ ಎಲ್ಲಾ ಮತದಾರರಿಗೆ ಎಲ್ಲಾ ನಮ್ಮ ಹಿರಿಯ ನಾಯಕರಿಗೆ. ಮುಖಂಡರಿಗೆ ಕಾಯ೯ಕತ೯ರಿಗೆ ನಾನು ತುಂಬು ಹೃದಯದ ಕೃತಜ್ಞತೆ ಸಲ್ಲಿಸುತ್ತೇನೆ ಮತ್ತು ನಮ್ಮ ಕ್ಷೇತ್ರದ ಹಿರಿಯ ನಾಯಕರ ಮಾಗ೯ದಶ೯ನದಲ್ಲಿ ನಡೆದುಕೊಂಡು ಅಭಿವೃದ್ಧಿ ಬಗ್ಗೆ ಹೆಚ್ಚು ಮಹತ್ವ ಕೊಡುತ್ತೇನೆ ಎಂದು ಹೇಳಿದರು ನಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಮಾತನಾಡಿದ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಬಿಜೆಪಿ ಬಂದರೆ ಜಾತಿ. ಜಾತಿ. ಧಮ೯. ದೇವರ.ಹೆಸರಿನಲ್ಲಿ ರಾಜಕಾರಣ ಮಾಡುವರು ಕೂಪ್ಪಳ ಕ್ಷೇತ್ರದ ಹನುಮ ಹುಟ್ಟಿದ ನಾಡು ಮತ್ತು ಅಯೋಧ್ಯೆ ರಾಮಮಂದಿರ ದಲ್ಲಿ ಬಿಜೆಪಿ ಅವರು ಸೋಲು ಅನುಭವಿಸಿದ್ದಾರೆ ಈ ಹಿಂದೆ ವಿಧಾನಸಭಾ ಕ್ಷೇತ್ರ ಹೇಗೆ ಗೆದ್ದಿದ್ದೇವೆ ಮತ್ತೆ ಅದೇ ರೀತಿ ಲೋಕಸಭಾ ಚುನಾವಣೆ ಕೂಡ ಗೆಲ್ಲುತ್ತೇವೆ ಎಂಬ ನಮ್ಮಗೆ ಈ ಬಾರಿ ವಿಶ್ವಾಸವಿತ್ತು ನಾವು ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇವೆ ಲೋಕಸಭಾ ಚುನಾವಣೆಯಲ್ಲಿ ರಾಜಶೇಖರ್ ಹಿಟ್ನಾಳ ಅವರನ್ನು ಗೆಲ್ಲಿಸಿ ಸಂಸದರಾಗಿ ಮಾಡಿ ದೆಹಲಿಗೆ ಕಳಿಸುತ್ತೇವೆ ಎಂದು ನಮ್ಮ ಕಾರ್ಯಕರ್ತರು ತೀರ್ಮಾನ ಮಾಡಿದ್ದರು ಅದು ಬಹಳ ಮೆಚ್ಚುವಂತ ಕಾಯ೯ ಎಂದು ಕಾಂಗ್ರೆಸ್ ಕಾರ್ಯಕರ್ತರನ್ನು ಅಭಿನೆಂದಿಸಿದ್ದರು. ನಂತರ ನೂತನ ಕೊಪ್ಪಳ ಲೋಕಸಭಾ ಸಂಸದರು ರಾಜಶೇಖರ್ ಹಿಟ್ನಾಳ್ ಅವರು ಮಾತನಾಡಿ ಹಿರಿಯರ ಮಾರ್ಗದರ್ಶನದಲ್ಲಿ ನಾನು ಈ ಕೊಪ್ಪಳ ಲೋಕಸಭಾ ಕ್ಷೇತ್ರದ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಎಂದರು.
ನಂತರ ಕುಷ್ಟಗಿ ಮಾಜಿ ಶಾಸಕರು ಕೊಪ್ಪಳ ಜಿಲ್ಲೆ ಕಾಂಗ್ರೆಸ್ ಅಧ್ಯಕ್ಷರು ಅಮರೇಗೌಡ ಬಯ್ಯಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ., ಯಂಕಣ್ಣ ಯರಾಶಿ, ವಿರನಗೌಡ್ರ ಪೋ ಪಾಟೀಲ ಬಳೂಟಗಿ, ಅಖ್ತರಾಸಾಬ್ ಖಾಜಿ, ಮಲ್ಲಮ್ಮ ಗೊಂದಿ, ಶಿವಾನಂದ ಬಣಕಾರ ಮಹಾಂತೇಶ್ ಗಾಣಿಗೇರ ಎಲ್ಲರೂ ಮಾತನಾಡಿ , ಕೂಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ 15 ವರ್ಷದಿಂದ ಬಿಜೆಪಿ ಪಕ್ಷ ಗೆಲುವು ಸಾಧಿಸಿತ್ತು ಈ ಬಾರಿ ಕೂಪ್ಪಳ ಲೋಕಸಭಾ ಕ್ಷೇತ್ರದ ಮತದಾರರು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಮೂಲಕ ಜಯ ತಂದುಕೂಟ್ಟಿದ್ದಾರೆ ನಮ್ಮ ಪಕ್ಷದ ಗೆಲುವುವಿಗೆ ಶ್ರಮಿಸಿದ ನಾಯಕರು, ಮುಖಂಡರು, ಕಾರ್ಯಕತ೯ರು ಎಲ್ಲರ ಪರಿಶ್ರಮದಿಂದ ನಮ್ಮಗೆ ಗೆಲುವು ಸಾಧಿಸಿದೆ ಅದಕ್ಕೆ ನಿಮ್ಮಲ್ಲೆರಿಗೂ ಅಭಿನಂದನೆಗಳು ಮತ್ತು ವಿಶೇಷ ಕೃತಜ್ಞತೆ ಎಂದು ಹೇಳಿದರು.
ಯಲಬುರ್ಗಾ ಮತ್ತು ಕುಕನೂರ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಮತ್ತು ಕ್ಷೇತ್ರದ ಎಲ್ಲಾ ಕಾರ್ಯಕತ೯ರು ನ್ಯೂತನ ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ತಾಲೂಕ ಅಧ್ಯಕ್ಷರು ಬಸವರಾಜ ಉಳ್ಳಾಗಡ್ಡಿ, ಕುಕನೂರ್ ಬ್ಲಾಕ್ ಕಾಂಗ್ರೆಸ್ ತಾಲೂಕ ಅಧ್ಯಕ್ಷರು ಹನುಮಂತ ಗೌಡ ಪಾಟೀಲ್, ಬಿ ಎಂ ಶಿರೂರ್, ಕರಿಬಸಪ್ಪ ನಿಡಗುಂದಿ, ಪಕ್ಷದ ವಕ್ತಾರ ಡಾ.ಶಿವನಗೌಡ ದಾನರಡ್ಡಿ, ಶರಣಪ್ಪ ಗಾಂಜಿ, ಸುಧೀರ್ ಕೂಲ೯ಹಳ್ಳಿ, ಮಲ್ಲು ಜಕ್ಕಲಿ, ರೇವಣಪ್ಪ ಸಂಗಟಿ, ಕೃಷ್ಣ ಇಟ್ಟಂಗಿ, ಅಶೋಕ್ ತೋಟದ, ಈರಪ್ಪ ಕುಡಗುಂಟಿ, ಕೆ ಎಂ ಸಯ್ಯದ್, ರಿಯಾಜ್ ಖಾಜಿ, ಎಂ ಎಫ್ ನದಾಫ್, ರೇವಣಪ್ಪ ಹಿರೇಕುರಬರ, ಯಲಬುರ್ಗಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರು ಸಾವಿತ್ರಿ ಗೊಲ್ಲರ, ಕುಕನೂರ್ ಮಹಿಳಾ ಘಟಕದ ಅಧ್ಯಕ್ಷರು ಫರಿದಾ ಬೇಗಂ, ಕೆಪಿಸಿಸಿ, ಸದಸ್ಯರು ಗಿರಿಜಾ ಸಂಗಟಿ, ಬಾಗೀರಥಿ ಜೋಗೀನ ಮಲ್ಲಮ್ಮ ಗೂಂದಿ, ಜಯಶ್ರೀ ಅರಕೇರಿ, ಜೋತಿ ಗೂಂಡಬಾಳ, ಜಯಶ್ರೀ ಕೆ, ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪಕ್ಷದ ಅಭಿಮಾನಿಗಳು ಇತರರು ಭಾಗವಹಿಸಿದ್ದರು.
