44

           ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳ ಖಂಡಿಸಿ

   ಕೊಪ್ಪಳ ನಗರದಲ್ಲಿ ಬಿಜೆಪಿ ಬೃಹತ್ತ ಪ್ರತಿಭಟನೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 18-ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡಿರುವುದನ್ನು ಖಂಡಿಸಿ ಕೊಪ್ಪಳದಲ್ಲಿ ಭಾರತೀಯ ಜನತಾ ಪಕ್ಷದಿಂದ ಬೃಹತ್‌ ಪ್ರತಿಭಟನೆ ನಡೆಸಿದರು.

ಮಂಗಳವಾರದಂದು ಕೊಪ್ಪಳ ನಗರದ ಶ್ರೀ ಬಸವೇಶ್ವರ ವೃತ್ತದಬಳಿ ಪ್ರತಿಭಟನೆ ನಡೆಸಿದ ಬಿಜೆಪಿ ರಾಜ್ಯ ಕಾಂಗ್ರಸ್‌ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕುಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್‌ ಗುಳಗಣ್ಣನವರ ಮಾತನಾಡಿ  ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಹೆಚ್ಚಿಸಿದ್ದು ಇದರಿಂದ ಮಧ್ಯಮ ವರ್ಗದ ಜನಗಳ ಮೇಲೆ ಬರೆ ಹಾಕಿದಂತಾಗಿದೆ ಇದರಿಂದಾಗಿ ಎಲ್ಲ ದಿನಸಿವಸ್ತುಗಳ ಸೇರಿದಂತೆ ಜನಜೀವನದ ಮೇಲೆ ದುಭಾರಿ ಹೊರೆ ಬಿಳಲಿದೆ ಎಂದು ದುರಿದರು.

ರಾಜ್ಯ ಸರ್ಕಾರ ಈ ಜನ ವಿರೋಧಿ ನೀತಿಯನ್ನು ತಕ್ಷನ ಹಿಂದೆ ಪಡಿಯಬೇಕು, ಗ್ಯಾರಂಟಿ ಗುಂಗಿನಲ್ಲಿ ಇರುವ ಕಾಂಗೆಸ್‌ ಪಕ್ಷ ಜನರನ್ನು ಸಂಕಷ್ಟಕ್ಕೆ ಸಿಲಉಕಿಸುತ್ತಿದೆ, ಬೆಲೆ ಏರಿಕೆ ಇಳಿಸುವವ ವರೆಗು ಜನರ ಪರವಾಗಿ ಬಿಜೆಪಿ ಪಕ್ಷ ಉಗ್ರಹೋರಾಟ ಮಾಡಲಿದೆ ಎಂದು ಹೇಳಿದರು.

ಪ್ರತಿಭಟನೆ ನೇತೃತ್ವವನ್ನು ರಾಜ್ಯ ಕಾರ್ಯದರ್ಶಿ ಶರಣು ಬಿ ತಳ್ಳಿಕೇರಿ ,ಕುಷ್ಟಗಿಯ ಶಾಸಕರು ಹಾಗೂ *ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಎಚ್ ಪಾಟೀಲ್ , ಗಂಗಾವತಿ ಶಾಸಕ ಹಾಗೂ ಮಾಜಿ ಸಚಿವ ಜಿ ಜನಾರ್ಧನರೆಡ್ಡಿ ರವರು ವಿಧಾನಪರಿಷತ್ ಸದಸ್ಯ ಶ್ರೀಮತಿ ಹೇಮಲತಾ ನಾಯಕ ಮಾಜಿ ಸಚಿವ ಹಾಲಪ್ಪ ಆಚಾರ್ ರವರು ಮಾಜಿ ಶಾಸಕರಾದ  ಪರಣ್ಣ ಮುನವಳ್ಳಿ,ಹಾಗೂ ಬಸವರಾಜ್ ದಡೆಸುಗೂರ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಕೆ ಬಸವರಾಜ್, ಮುಖಂಡರಾದ ಮಹಾಂತೇಶ ಮೈನಳ್ಳಿ, ಕೊಪ್ಪಳ ಜಿಲ್ಲಾ ಮಾಧ್ಯಮ ಸಂಚಾಲಕ ಮಹೇಶ್ ಹಾದಿಮನಿ ಇತರರು ಇದ್ದರು.

 

Leave a Reply

Your email address will not be published. Required fields are marked *

error: Content is protected !!