2c136fae-be38-4577-97e1-318669006cc9

ಜೆಸ್ಕಾಂ ಮುನಿರಾಬಾದ್  : ಜೂ.26 ರಂದು ವಿದ್ಯುತ್ ವ್ಯತ್ಯಯ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 24-  ಜೆಸ್ಕಾಂ ಮುನಿರಾಬಾದ ಉಪ ವಿಭಾಗ ವ್ಯಾಪ್ತಿಯಲ್ಲಿ ಬೃಹತ್ ಕಾಮಗಾರಿ ವಿಭಾಗದಿಂದ 110 ಕೆ.ವಿ ಗಿಣಿಗೇರಾ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ನಿರ್ವಹಣಾ ಕಾರ್ಯ ನಡೆಸುತ್ತಿರುವ ಪ್ರಯುಕ್ತ ಜೂನ್ 26 ರಂದು ಬೆಳಿಗ್ಗೆ 10 ಗಂಟೆಯಿAದ ಸಾಯಂಕಾಲ 05 ಗಂಟೆಯವರೆಗೆ ಗಿಣಿಗೇರಾ ಉಪ ಕೇಂದ್ರದಿAದ ವಿದ್ಯುತ್ ಸರಬರಾಜು ಆಗುವ ಗ್ರಾಮಗಳ ವ್ಯಾಪ್ತಿಯ ಗ್ರಾಹಕರಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಗಿಣಿಗೇರಾ ಉಪ ಕೇಂದ್ರ ವ್ಯಾಪ್ತಿಯ ಗಿಣಿಗೇರಾ ಮತ್ತು ಗಿಣಿಗೇರಾ ಬೈಪಾಸ್, ಹಳೆ ಕನಕಾಪುರ, ಹೊಸ ಕನಕಾಪುರ ಮತ್ತು ಕನಕಾಪುರ ತಾಂಡಾ, ಹಿರೇ ಬಗನಾಳ ಮತ್ತು ಚಿಕ್ಕ ಬಗನಾಳ, ಕರ್ಕಿಹಳ್ಳಿ, ಲಾಚನಕೇರಿ ಮತ್ತು ಕಾಸನಕಂಡಿ, ಕುಣಿಕೇರಿ ಮತ್ತು ಕುಣಿಕೇರಿ ತಾಂಡಾ, ಕುಟುಗನಹಳ್ಳಿ, ಅಲ್ಲಾನಗರ, ಗಬ್ಬೂರು, ಹಾಲಹಳ್ಳಿ ಮತ್ತು ಭೀಮನೂರು, ಕಲ್ ತಾವರಗೇರಾ, ಎಫ್3 ಬಗನಾಳ ಎನ್‌ಜೆವೈ ಫೀಡರ್, ಎಫ್13 ಹಾಲಹಳ್ಳಿ ಎನ್‌ಜೆವೈ ಫೀಡರ್, ಎಫ್7 ಎಸ್.ಆರ್.ಸಿ ಇಂಡಸ್ಟಿçಯಲ್ ಫೀಡರ್, ಎಫ್10 ಗಾಳೆಮ್ಮ, ಎಫ್12 ಗಿಣಿಗೇರಾ ಮತ್ತು ಎಫ್11 ಕಲ್ ತಾವರಗೇರಾ ಫೀಡರ್, ಎಫ್ 33 ಕೋಕಾ ಕೋಲಾ ಇಂಡಸ್ಟಿçÃಸ್‌ಗೆ ಸಂಬಂಧಪಟ್ಟ ಎಲ್ಲಾ ಫೀಡರ್, ಎಫ್1 ಕುಣಿಕೇರಿ ಐಪಿ, ಎಫ್2 ಕರ್ಕಿಹಳ್ಳಿ ಐಪಿ, ಎಫ್5 ಅಲ್ಲಾನಗರ ಐಪಿ, ಎಫ್4 ಪೌಲ್ಟಿç ಫಾರ್ಮ್ ಮತ್ತು ಎಫ್6 ಐಪಿ ಕಾಸನಕಂಡಿ, ಪಿಬಿಎಸ್ ಸೋಲಾರ್ ಮತ್ತು ಎಫ್ 9 ಎನ್‌ಜೆವ ಮತ್ತು ಎಫ್ 9 ಎನ್‌ಜೆವೈ ಫೀಡರ್ ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.

ಮೇಲಿನ ಕೆಲಸವು ಬೇಗನೆ ಮುಕ್ತಾಯವಾದಲ್ಲಿ ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ ಕಾರ್ಯಗಳನ್ನು ಮಾಡಬಾರದು. ಒಂದು ವೇಳೆ ವಿದ್ಯುತ್ ಅಪಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರಿಯಲ್ಲ ಎಂದು ಮುನಿರಾಬಾದ್ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!