
250 ಕ್ವಿಂಟಾಲ್ ಪಡಿತರ ಅಕ್ಕಿ ಕಳ್ಳ ಸಾಗಾಣೆ : ಪ್ರಕರಣ ದಾಖಲು
ಕರುನಾಡ ಬೆಳಗು ಸುದ್ದಿ
ಕುಕನೂರು, 1- ತಾಲೂಕಿನ ತಳಕಲ್ಲ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯಲ್ಲಿ ಪಡಿತರ ಅಕ್ಕಿ ಕಳ್ಳ ಸಾಗಾಣೆ ಮಾಡುತ್ತಿದ್ದವರನ್ನು ಯಲಬುರ್ಗಾ ಆಹಾರ ನಿರೀಕ್ಷಕರು ಹಾಗು ಕುಕನೂರು ಪೊಲೀಸ್ ಠಾಣೆ ಪೊಲೀಸರು ಬಂಧಿಸಿ ಲಾರಿ ಹಾಗು ಅಕ್ರಮ ಪರಿತರ ಅಕ್ಕಿ ಜಪ್ತಿ ಮಾಡಿದ್ದಾರೆ.
ಗದಗದಿಂದ ಸಿಂಧನೂರಿಗೆ ಅಕ್ರಮವಾಗಿ 250 ಕ್ವಿಂಟಾಲ್ ಅಕ್ಕಿಯನ್ನು ಕಳ್ಳ ಸಾಗಾಣೆ ಮಾಡುತ್ತಿದ್ದ ಲಾರಿಯನ್ನು ಖಚಿತ ಮಾಹಿತಿ ಮೇಲೆ ಭಾನುವಾರ ತಾಲೂಕಿನ ತಳಕಲ್ಲ ಗ್ರಾಮದ ಬಳಿ ಯಲಬುರ್ಗಾ ಆಹಾರ ನಿರೀಕ್ಷಕ ದತ್ತಪ್ಪಯ್ಯ, ಪಿಎಸ್ಐ ಟಿ ಗುರುರಾಜ್ ಹಾಗು ಪೊಲೀಸ್ ಸಿಬ್ಬಂದಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 5.50 ಲಕ್ಷ ಬೆಲೆಯ 50 ಕೆಜಿಯ ಸುಮಾರು 500 ಚೀಲಗಳನ್ನು ಲೋಡಿಂಗ್ ಮಾಡಿಕೊಂಡು ಸಾಗಾಣೆ ಮಾಡುತ್ತಿದ್ದ ಅಶೋಕ ಲೀಲ್ಯಾಂಡ್ ಲಾರಿಯನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
9 ಜನರ ಮೇಲೆ ಪ್ರಕರಣ : ಪಡಿತರ ಅಕ್ಕಿ ಕಳ್ಳ ಸಾಗಾಣೆಯಲ್ಲಿ ಭಾಗಿಯಾದ ಗಂಗಾವತಿಯವರಾದ ಸಿದ್ದಣ್ಣ ಮಸ್ಕಿ, ಇಲಕಲ್ ಗೋಪಾಲ, ಸಿಂಧನೂರಿನ ಗುರು ಪೊತನಾಳ, ಅನಿಲ ಪಟ್ಟಣಶೆಟ್ಟಿ, ಶ್ರೀದರ, ಖಾಜಾಹುಸೇನ್, ಪೊತನಾಳ ಗ್ರಾಮದ ಶ್ರೀ ವಾಸವಿ ಎಂಟಪ್ರೇಸಸ್ನ ಮಾಲಕರು ಹಾಗು ಲಾರಿ ವಾಹನ ಚಾಲಕ ಶಕೀರ್ ಅಹ್ಮದ್ ಅವರ ಮೇಲೆ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ
ಕುಕನೂರು ತಾಲೂಕಿನ ತಳಕಲ್ಲ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯಲ್ಲಿ ಪಡಿತರ ಅಕ್ಕಿ ಕಳ್ಳ ಸಾಗಾಣೆ ಮಾಡುತ್ತಿದ್ದವರನ್ನು ಯಲಬುರ್ಗಾ ಆಹಾರ ನಿರೀಕ್ಷಕರು ಹಾಗು ಕುಕನೂರು ಪೊಲೀಸ್ ಠಾಣೆ ಪೊಲೀಸರು ಭಾನುವಾರ ಬಂಧಿಸಿ ಲಾರಿ ಹಾಗು ಅಕ್ರಮ ಪರಿತರ ಅಕ್ಕಿ ಜಪ್ತಿ ಮಾಡಿದ್ದಾರೆ.