2c136fae-be38-4577-97e1-318669006cc9

ಗ್ರಾಮ ಸಹಾಯಕರ ಹುದ್ದೆಗೆ ಅರ್ಜಿ ಅಹ್ವಾನ

ಕರುನಾಡ ಬೆಳಗು ಸುದ್ದಿ

ವಿಜಯನಗರ, 4- ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ಬ್ಯಾಲಕುಂದಿ ಗ್ರಾಮದಲ್ಲಿ ಖಾಲಿ ಇರುವ ಗ್ರಾಮ ಸಹಾಯಕರ 1 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 17ರ ಸಂಜೆ 5.30ರೊಳಗಾಗಿ ಅರ್ಜಿ ಭರ್ತಿ ಮಾಡಿ ಅರ್ಜಿ ಜೊತೆಗೆ ಡಿಡಿಯನ್ನು ನೇರವಾಗಿ ಕಚೇರಿಗೆ ಸಲ್ಲಿಸಲು ತಿಳಿಸಲಾಗಿದೆ.

ಮೀಸಲಾತಿ ವರ್ಗ ಮತ್ತು ಅರ್ಜಿ ಶುಲ್ಕ: ಪ್ರವರ್ಗ 2ಎ, ಪ್ರವರ್ಗ 2ಬಿ, ಪ್ರವರ್ಗ 3ಎ, ಪ್ರವರ್ಗ 3ಬಿ ಮತ್ತು ಸಾಮಾನ್ಯ ವರ್ಗದವರಿಗೆ 200 ರೂ. ಇರುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗದವರಿಗೆ 100 ರೂ. ಇರುತ್ತದೆ. ಶುಲ್ಕವನ್ನು ನೇರವಾಗಿ ಹೊಸಪೇಟೆ ತಾಲ್ಲೂಕು ಕಚೇರಿಗೆ ಭರಿಸಬೇಕಾಗಿದೆ.

ವಿದ್ಯಾರ್ಹತೆ : ಅಭ್ಯರ್ಥಿಗಳು ಕನಿಷ್ಠ 7ನೇ ತರಗತಿ ಉತ್ತೀರ್ಣರಾಗಿರುವ ವಿದ್ಯಾರ್ಹತೆಯನ್ನು ಈ ಅಧಿಸೂಚನೆ ಹೊರಡಿಸಿದ ದಿನಾಂಕಕ್ಕೆ ಮುಂಚಿತವಾಗಿ ಹೊಂದಿರತಕ್ಕದ್ದು, ಈ ಕುರಿತು ಮಾನ್ಯ ಸರಕಾರದ ಅನುದಾನಿತ ಶಾಲೆಗಳಿಂದ ಅಥವಾ ಖಾಸಗಿ ಶಾಲೆಗಳಿಂದ ಪಡೆದ ದಾಖಲೆ ಒದಗಿಸತಕ್ಕದ್ದು, ಮಾಸಿಕ ವೇತನ 15,000 ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಹಸೀಲ್ದಾರರ ಕಾರ್ಯಾಲಯದ ದೂ.ಸಂಖ್ಯೆ:08394-224208ಗೆ ಸಂಪರ್ಕಿಸಬಹುದಾಗಿದೆ ಎಂದು ಹೊಸಪೇಟೆ ಪ್ರಾಧಿಕಾರ ಹಾಗೂ ತಹಶೀಲ್ದಾರರಾದ ವಿಶ್ವಜೀತ ಮೇಹತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!