
6-7 ರಂದು ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗು ಶಸ್ತ್ರ ಚಿಕಿತ್ಸೆ
ಕ್ಯಾನರ್, ಮೂಳೆ, ನರ, ಹೃದಯ,ಸ್ತ್ರೀ ರೋಗ, ಕಿಡ್ನಿ, ಮಕ್ಕಳ ತಪಾಸಣೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 4- ರೋಟರಿ ಕ್ಲಬ್ ಆಫ್ ರೈಸ್ ಬೌಲ್ ಗಂಗಾವತಿ ಹಾಗು ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಸಹಯೋಗದಲ್ಲಿ ಗಂಗಾವತಿ ಹಾಗು ಸಮೀಪದ ಜಂಗಮರ ಕಲ್ಗುಡಿಯಲ್ಲಿ ಕ್ರಮವಾಗಿ ಶನಿವಾರ ಜುಲೈ 6 ಮತ್ತು ಭಾನುವಾರ ಜೂನ್ 7 ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಬೃಹತ್ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ, ಶಸ್ತç ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಗಂಗಾವತಿ ರೋಟರಿ ಕ್ಲಬ್ ಆಫ್ ರೈಸ್ ಬೌಲ್ ಅಧ್ಯಕ್ಷೆ ಗೀತಾ ಚೌಧರಿ ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಟಿಯನ್ನುದೇಶಿಸಿ ಮಾತನಾಡಿದರು.
ಗಂಗಾವತಿಯಲ್ಲಿ ಜುಲೈ ನಗರದ ಜೆಎಸ್‌ಎಸ್ ಸ್ಕೂಲ್ ಬಳಿ ಇರುವ ಗೀತಾ ಟ್ರೇಡ್ ಅಂಡ್ ಎಗ್ಝಿಮಿಷನ್‌ನಲ್ಲಿ ಜಂಗಮರ ಕಲ್ಗುಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಪ್ರಧಾನ ಕಾರ್ಯದರ್ಶಿ ಗೀತಾ ಆಗಲೂರು ಮಾತನಾಡಿ, ಹೃದ್ರೋಗ, ಪಿಸ್ತೂಲಾ, ಅಪೆಂಡಿಕ್ಸ್, ಸ್ತನ ಕ್ಯಾನ್ಸರ್ ಸಾಮಾನ್ಯ ಕ್ಯಾನ್ಸರ್, ಮೂಳೆ, ಕೀಲು ರೋಗ, ಸ್ತ್ರೀ ರೋಗ ಮತ್ತು ಪ್ರಸೂತಿ ಮಕ್ಕಳ ತಪಾಸಣೆ, ಕಿಡ್ನಿ ಸ್ಟೋನ್, ನರರೋಗ, ಬೆನ್ನು ನೋವು, ಮೆದುಳಿನ ಗಡ್ಡೆ, ಗರ್ಭಕೋಶದ ಶಸ್ತç ಚಿಕಿತ್ಸೆ, ಕಿವಿ, ಮೂಗು ಹಾಗು ಗಂಟಲು ಚಿಕಿತ್ಸೆ, ಥೈರಾಯಿಡ್ ಹಾಗು ಹರ್ನಿಯ ಸೇರಿದಂತೆ ಬಹುತೇಕ ರೋಗಗಳ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಹಾಗು ಉಚಿತ ಶಸ್ತç ಚಿಕಿತ್ಸೆ ಆಯೋಜಿಸಲಾಗಿದೆ, ಬಿಪಿಎಲ್ ಇತರೆ ಕಾರ್ಡುಗಳಿದ್ದರು ಸರಿ ಇಲ್ಲದಿದ್ದರೂ ರೋಟರಿಯಿಂದ ಉಚಿತ ಚಿಕಿತ್ಸೆ ಹಾಗು ರೋಗಿಗಳ ಪ್ರಯಾಣದ ವೆಚ್ಚವನ್ನು ಸಂಸ್ಥೆ ಭರಿಸಲಿದೆ ಎಂದು ವಿವರಿಸಿದರು.
ಉಪಾಧ್ಯಕ್ಷರಾದ ಮಲ್ಲಮ್ಮ ನವಲಿ ಎಸ್.ನವಲಿ ಮಾತನಾಡಿ, ಸಾಕಷ್ಟು ಶ್ರಮ ವಹಿಸಿ ಶಿಬಿರವನ್ನು ಆಯೋಜಿಸಲಾಗಿದೆ, ಉಮಾಮಹೇಶ್ವರಿ ಮೋರ‍್ಸ್ ಶಿಬಿರದ ಪ್ರಾಯೋಜನೆ ಮಾಡಿದ್ದು, ಕೊಪ್ಪಳ ಜಿಲ್ಲೆಯ ಜನತೆ ಇದರ ಪ್ರಯೋಜನೆ ಪಡೆಯಬೇಕಿದೆ, ಬಡವರಿಗೆ ಹೆಚ್ಚು ಅನುಕೂಲಕರವಾಗಿದೆ, ತುಂಬಾ ಅವರಸರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಪ್ರತಿಯೊಬ್ಬರು ಸಾರ್ವಜನಿಕರಲ್ಲಿ ಶಿಬಿರದ ಕುರಿತು ಪ್ರಚಾರ ಮಾಡಬೇಕೆಂದು ಮನವಿ ಮಾಡಿದರು.
ಹೆಚ್ಚಿನ ಮಾಹಿತಿಗಾಗಿ8073497461, 9740913797 ಮತ್ತು 7259328861 ಸಂಖ್ಯೆ ಸಂಪರ್ಕಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಜಂಟಿ ಕಾರ್ಯದರ್ಶಿ ವಿಜಯ ಲಕ್ಷ್ಮೀ ಹಿರೇಮಠ, ಶಶಿಕಲಾ ಹಿರೇಮಠ, ದ್ರಾಕ್ಷಾಯಿಣಿ ಅಂಗಡಿ, ಲಕ್ಷ್ಮೀ ಹಾಗು ಸೋಫಿಯಾ ರಾಣಿ ಇದ್ದರು.
“ಹೃದ್ರೋಗ, ಪಿಸ್ತೂಲಾ, ಅಪೆಂಡಿಕ್ಸ್, ಸ್ತನ ಕ್ಯಾನ್ಸರ್ ಸಾಮಾನ್ಯ ಕ್ಯಾನ್ಸರ್, ಮೂಳೆ, ಕೀಲು ರೋಗ ಮತ್ತು ಸ್ತ್ರೀ ರೋಗ ಮತ್ತು ಪ್ರಸೂತಿ ಮಕ್ಕಳ ತಪಾಸಣೆ, ಕಿಡ್ನಿ ಸ್ಟೋನ್, ನರರೋಗ, ಬೆನ್ನು ನೋವು, ಮೆದುಳಿನ ಗಡ್ಡೆ, ಗರ್ಭಕೋಶದ ಶಸ್ತç ಚಿಕಿತ್ಸೆ, ಕಿವಿ, ಮೂಗು ಹಾಗು ಗಂಟಲು ಚಿಕಿತ್ಸೆ, ಥೈರಾಯಿಡ್ ಹಾಗು ಹರ್ನಿಯ ಸೇರಿದಂತೆ ಬಹುತೇಕ ಎಲ್ಲಾ ರೋಗಗಳ ತಪಾಸಣೆ ಮತ್ತು ಉಚಿತ ಶಸ್ತç ಚಿಕಿತ್ಸೆ ಆಯೋಜಿಸಲಾಗಿದೆ, ಬಿಪಿಎಲ್ ಇತರೆ ಕಾರ್ಡುಗಳಿದ್ದರು ಸರಿ ಇಲ್ಲದಿದ್ದರೂ ರೋಟರಿಯಿಂದ ಉಚಿತ ಚಿಕಿತ್ಸೆ ಹಾಗು ಪ್ರಯಾಣದ ವೆಚ್ಚವನ್ನು ಸಂಸ್ಥೆ ಭರಿಸಲಿದೆ”