
ವೀರಶೈವ ಮಹಾಸಭಾ ಕೊಪ್ಪಳ ತಾಲೂಕಾಧ್ಯಕ್ಷರಾಗಿ
ನಾಗಭೂಷಣ ಸಾಲಿಮಠ ಅವಿರೋಧ ಆಯ್ಕೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 8-: ಕೊಪ್ಪಳ ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷರಾಗಿ ನಾಗಭೂಷಣ್ ಸಾಲಿಮಠ ಅವಿರೋಧವಾಗಿ ಆಯ್ಕೆಗೊಂಡರು.
ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಗುರುರಾಜ ಹಲಿಗೇರಿ ಮತ್ತು ನಾಗಬುಷಣ ಸಾಲಿಮಠ ಇಬ್ಬರು ನಾಮಪತ್ರ ಸಲ್ಲಿಸಿದ್ದರು.
ಕೊನೆಗೆ ಗುರುರಾಜ ಹಲಿಗೇರಿ ಅವರು ನಾನು ಈಗಾಗಲೇ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ ಎಂದು ನಾಮಪತ್ರ ಹಿಂಪಡೆದರು.
ಕೊನೆಗೆ ಕೊಪ್ಪಳ ನಗರ ಪ್ರಾಧಿಕಾರದ ಮಾಜಿ ಸದಸ್ಯ ನಾಗಭೂಷಣ್ ಸಾಲಿಮಠ ಅವರು ಅವಿರೋಧವಾಗಿ ಆಯ್ಕೆಗೊಂಡರು.
ಹರ್ಷ : ಕೊಪ್ಪಳ ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಆಯ್ಕೆಗೊಂಡ ನಾಗಭೂಷಣ್ ಸಾಲಿಮಠ ಅವರನ್ನು ಆಯ್ಕೆಗೊಂಡ ಎಲ್ಲಾ ಪದಾಧಿಕಾರಿಗಳನ್ನು ವೀರಶೈವ ಸಮಾಜದ ಮುಖಂಡರಾದ ಹಾಲಯ್ಯ ಹುಡೇಜಾಲಿ ಹಾಗೂ ವೀರಶೈವ ಮಹಾಸಭಾ ಮಹಿಳಾ ಘಟಕದ ಮಾಜಿ ಜಿಲ್ಲಾಧ್ಯಕ್ಷೆ ಶಕುಂತಲಾ ಹುಡೇಜಾಲಿ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.